Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.05.2022
Share:

By Village Missionary Movement

Monday, 02-May-2022

ಧೈನಂದಿನ ಧ್ಯಾನ(Kannada) – 03.05.2022

 

ಎಲುಬಿಗೆ ಕ್ಷಯ

 

"...ಕ್ರೋಧವು ಎಲುಬಿಗೆ ಕ್ಷಯವು." - ಜ್ಞಾನೋಕ್ತಿ 14:30

 

90ರ ದಶಕದ ಶಿಕ್ಷಣ ವ್ಯವಸ್ಥೆ ಈಗ ನೆನಪಾಗುತ್ತಿದೆ. ತರಗತಿಯಲ್ಲಿರುವ ಶಿಕ್ಷಕರು ನಿಮಗೆ ಹಳದಿ ಬಣ್ಣದ ಮಾರ್ಕ್ಸ್ ಕಾರ್ಡ್ ನ್ನು ಕೊಡುತ್ತಿದ್ದರು. ಆಗ ಅವರವರ ಮಾರ್ಕ್ಸ್ ಕಾರ್ಡ್ ಮೇಲೆ ಯಾರ ದೃಷ್ಟಿಯೂ ಇರುತ್ತಿರಲಿಲ್ಲ. ಪಕ್ಕದಲ್ಲಿರುವವರು, ಹಿಂದೆ ಇರುವವರು, ಪಕ್ಕದ ಸಾಲಿನಲ್ಲಿರುವವರು, ಮುಂದಿರುವವರು ಹೀಗೆ ಎಲ್ಲಾ ಕಡೆ ಇರುವ ಕಾರ್ಡ್ ಗಳ ಮೇಲೆ ದೃಷ್ಟಿ ಹೋಗುತ್ತಿತ್ತು. ಫಸ್ಟ್ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿಯನ್ನು ಕಂಡರೆ ಒಂದು ಹೊಟ್ಟೆಕಿಚ್ಚು ಬರುತ್ತದೆ ನೋಡಿ. ಅದರಲ್ಲೂ ಟೀಚರ್ ಅವರನ್ನು ಹೊಗಳಿದಾಗ ಚಪ್ಪಾಳೆ ತಟ್ಟಲು ಹೇಳಿದಾಗ, ಅವರನ್ನು ಕ್ಲಾಸ್ ಲೀಡರ್ ಆಗಿ ಮಾಡಿದಾಗ, ಕ್ಲಾಸ್ ಟೀಚರ್ ಇಲ್ಲದ ಸಮಯದಲ್ಲಿ ಅವನು ತರಗತಿಯಲ್ಲಿರುವವರನ್ನೆಲ್ಲಾ ಗಮನಿಸುವಾಗ, ಮಾತನಾಡಿದವರ ಪಟ್ಟಿಯಲ್ಲಿ ನಮ್ಮ ಹೆಸರು ಬರೆಯುವಾಗ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಹಂತದಲ್ಲಿ ಚೆನ್ನಾಗಿ ಓದುತ್ತಿರುವ ಆ ವಿದ್ಯಾರ್ಥಿ ಏನು ಮಾಡಿದರೂ ಅದು ನಮಗೆ ಅಸೂಯೆಯನ್ನು ಉಂಟುಮಾಡುತ್ತದೆ. ಆದರೆ ಈಗ ಯೋಚಿಸಿದಾಗ ಸ್ವಲ್ಪ ನಗು ಮತ್ತು ದುಃಖ ಉಂಟಾಗುತ್ತಿದೆ.

 

ಪರಿಶುದ್ಧ ಗ್ರಂಥದಲ್ಲಿ ಕೀರ್ತನೆ 106:16 ರಲ್ಲಿ, "ಅವರು (ಇಸ್ರಾಯೇಲ್ ಜನರು) ಮೋಶೆ ಮತ್ತು ಆರೋನರ ಮೇಲೆ ಹೆಚ್ಚು ಅಸೂಯೆಪಟ್ಟರು" ಎಂದು ಓದುತ್ತೇವೆ. ಮೋಶೆ ಮತ್ತು ಆರೋನ್ ದೇವರಿಂದ ಆರಿಸಲ್ಪಟ್ಟು ನೇಮಿಸಲ್ಪಟ್ಟವರು. ಇಡೀ ಇಸ್ರಾಯೇಲ್ ಜನವನ್ನು ಮುನ್ನಡೆಸುವ ಜವಾಬ್ದಾರಿ ಅವರಿಗಿತ್ತು. ಇಂತಹ ಜವಾಬ್ದಾರಿಯಲ್ಲಿದ್ದ ಇವರ ಮೇಲೆ ಹೊಟ್ಟೆಕಿಚ್ಚುಪಟ್ಟದ್ದರಿಂದ ದಾತಾನನಿಗೆ ಮತ್ತು ಅಬಿರಾಮನಿಗೆ ಸಂಭವಿಸಿದ ವಿನಾಶದ ಬಗ್ಗೆ ಕೀರ್ತನೆ 106:17 ರಲ್ಲಿ ನಾವು ನೋಡುತ್ತೇವೆ. ಈ ಎರಡೂ ವಾಕ್ಯಗಳು ನಮಗೆ ಎಚ್ಚರಿಕೆಯ ಪಾಠವನ್ನು ಕಲಿಸುತ್ತವೆ.

 

ಪ್ರಿಯರೇ! ಇಂದು ನಮ್ಮ ಮನಸ್ಥಿತಿ ಹೇಗಿದೆ? ನಮ್ಮ ಸುತ್ತಮುತ್ತಲಿರುವ ವ್ಯಕ್ತಿಗೋ ಅಥವಾ ಕುಟುಂಬಕ್ಕೋ ಏನಾದರೂ ಒಂದು ಒಳ್ಳೆಯದು ಸಂಭವಿಸಿಬಿಟ್ಟರೆ ನಾವು ಅಸೂಯೆಪಡುತ್ತಿದ್ದೇವೆಯೇ? ಯೋಚಿಸೋಣ. ಸತ್ಯವೇದವು ಅಸೂಯೆಯನ್ನು ಒಂದು ಕಾಯಿಲೆಯಾಗಿ (ಕ್ಷಯ - TB) ತೋರಿಸುತ್ತಿದೆ. ನಾವು ಜಾಗರೂಕರಾಗಿರಬೇಕು ಮತ್ತು ಅಸೂಯೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಇತರರನ್ನು ಹೊಗಳಬೇಕು ಮತ್ತು ಪ್ರೋತ್ಸಾಹಿಸಬೇಕು. ಆಗ ನಮಗೆ ಶ್ರೇಷ್ಟತೆಯು ಉಂಟಾಗುತ್ತದೆ. ಇಂದು ನಾವು ನಮ್ಮ ಸಂಬಂಧಿಕರು, ಪರಿಚಯಸ್ಥರು, ಸಹೋದ್ಯೋಗಿಗಳು ಮತ್ತು ಸೇವಕರುಗಳು ಹೀಗೆ ಪ್ರತಿಯೊಬ್ಬರ ಮೇಲಿರುವ ಅಸೂಯೆಯನ್ನು ಎತ್ತಿ ಬಿಸಾಡೋಣ. ನಾವು ಇತರರ ಬಗ್ಗೆ ಅಸೂಯೆಪಟ್ಟರೆ ಅದು ನಮ್ಮನ್ನೇ ಕರಗಿಸಿ ನಾಶಪಡಿಸುತ್ತದೆ! "ಸ್ಪರ್ಧೆ ಇರಬಹುದು, ಅಸೂಯೆ ಇರಬಾರದು" ಎಂದು ಹೇಳುತ್ತಾರೆ. ಹಾಗಾಗಿ ಅಸೂಯೆ ಎಂಬ ಕೆಟ್ಟ ಗುಣವನ್ನು ಬಿಟ್ಟು ಚೆನ್ನಾಗಿ ಬಾಳೋಣ. ಆಮೆನ್!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಗ್ರಾಮ ಮಿಷನರಿಗಳನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş