Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.04.2022
Share:

By Village Missionary Movement

Saturday, 30-Apr-2022

ಧೈನಂದಿನ ಧ್ಯಾನ(Kannada) – 30.04.2022

 

ವಯಸ್ಸು ಅಡ್ಡಿಯಲ್ಲ

 

"ಆದದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ" - 2 ಕೊರಿಂಥ 4:1

 

ನೀವು ಲೋಕದ ಕಟ್ಟಕಡೆಗೆ ಹೋಗಿ ಸರ್ವಸೃಷ್ಟಿಗೂ ಸುವಾರ್ತೆ ಸಾರಿರಿ ಎಂಬುದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಜ್ಞೆಯಾಗಿದೆ. ಕರ್ತನ ಆಜ್ಞೆಗಳಿಗೆ ವಿಧೇಯರಾಗಿ ಸುವಾರ್ತೆಯನ್ನು ಸಾರಿದ ದೇವರ ಸೇವಕರು ನಮಗೆ ಗೊತ್ತು. ಅವರಲ್ಲಿ ಜಾರ್ಜ್ ಮುಲ್ಲರ್ ತುಂಬಾ ವಿಶೇಷವಾದವರು.

 

ಜಾರ್ಜ್ ಮಲ್ಲರ್ ಅವರು ತಮ್ಮ 93 ನೇ ವಯಸ್ಸಿನವರೆಗೂ ದಣಿವು ಎಂಬ ಮಾತಿಗೇ ಸ್ಥಳಕೊಡದೆ ತಮ್ಮ ಸೇವೆಯನ್ನು ಪೂರ್ಣಗೊಳಿಸಿದರು. 90ರ ಹರೆಯದಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಇನ್ನು ಮುಂದೆ ನೀವು ವಾರಕ್ಕೊಮ್ಮೆ ಮಾತ್ರ ಉಪದೇಶ ಮಾಡಬೇಕು ಎಂದು ಸಲಹೆ ನೀಡಿದರು. ಆದರೆ ಜಾರ್ಜ್ ಮುಲ್ಲರ್ ರವರು, “68 ವರ್ಷ 3 ತಿಂಗಳುಗಳು ನಾನು ವಾಕ್ಯವೆಂಬ ಜ್ಞಾನ ಹಾಲಿಗಾಗಿ ತುಂಬಾ ಬಾಯಾರಿಕೆಯಾಗಿದ್ದೇನೆ. ನಾನು ಬೈಬಲ್ ಅನ್ನು 4200 ಕ್ಕೂ ಹೆಚ್ಚು ಬಾರಿ ಓದಿದ್ದೇನೆ. ನನ್ನ ದೇವರನ್ನು ಸ್ತುತಿಸಲು ಮತ್ತು ಬೋಧಿಸಲು ನನಗೆ ಹೇಗೆ ಆಯಾಸ ಬರುತ್ತದೆ? ನನ್ನ ದೇವರ ಬಗ್ಗೆ ಮಾತನಾಡಲಾರದೇ ಹೇಗಿರಲು ಸಾಧ್ಯ? ” ಎಂದರು. ಇದನ್ನೇ ತನ್ನ ವಿಶ್ವಾಸಿಗಳಿಗೂ ಪತ್ರವಾಗಿ ಬರೆದರು.

 

ಜಾರ್ಜ್ ಮುಲ್ಲರ್ ರವರು ಬೈಬಲ್ ಅನ್ನು ಮಂಡಿಯೂರಿ 100 ಬಾರಿ ಓದಿದ್ದಾರೆಂದು ತಿಳಿದುಬಂದಿದೆ. ಸತ್ಯವೇದಕ್ಕನುಸಾರವಾಗಿ ಬದುಕಿದ ಅವರ ಪ್ರಾರ್ಥನಾಶೀಲ ಜೀವನ, ಅವರ ದಣಿವರಿಯದ ಕೆಲಸ, ಅವರ ದಣಿವರಿಯದ ಜೀವನ ಮತ್ತು ಸತ್ಯವೇದ ವಾಕ್ಯಗಳಿಂದ ತುಂಬಿದ ಅವರ ಉಪದೇಶಗಳು ಅನೇಕರ ಜೀವನದ ಮೇಲೆ ಪ್ರಭಾವ ಬೀರಿದವು. ಸತ್ಯವೇದ ವಾಕ್ಯಗಳಲ್ಲಿ ಆನಂದಿಸುತ್ತಾ, ಪ್ರೀತಿಸುತ್ತಾ, ಓದುತ್ತಾ ಉಸಿರಾಡುತ್ತಿದ್ದ ವ್ಯಕ್ತಿ ಜಾರ್ಜ್ ಮುಲ್ಲರ್ 93 ನೇ ವಯಸ್ಸಿನವರೆಗೂ ಬದುಕಿ ಸಾಧಿಸಿ ತೋರಿಸಿದ ಮಹಾನ್ ವ್ಯಕ್ತಿ ಇವರಿಗೆ ಕೃತಜ್ಞತೆ ಹೇಳಲು ಬಯಸುತ್ತೇವೆ. ಸತ್ಯವೇದದಲ್ಲಿ ವೃದ್ದಾಪ್ಯದಲ್ಲೂ ದೇವರಿಗಾಗಿ ಪೂರ್ಣ ಮನಸ್ಸಿನಿಂದ ಜೀವಿಸಿದ ಮನುಷ್ಯರಿದ್ದಾರೆ. ಅಬ್ರಹಾಂ, ಮೋಶೆ, ಯೇಸು ಕ್ರಿಸ್ತನನ್ನು ಕೈಗಳಲ್ಲಿ ಹೊತ್ತ ಸಿಮಿಯೋನ್, ಹನ್ನ ಮತ್ತು ಇನ್ನೂ ಅನೇಕರು. ಇವರುಗಳು ತಮ್ಮ ವಯಸ್ಸಿನ ಕಾರಣವನ್ನು ತೋರಿಸಿ ದೇವರಿಗಾಗಿ ಕಾರ್ಯ ಮಾಡದೇ ಸುಮ್ಮನಿರಲಿಲ್ಲ.

 

ನೀವು ಒಂದು ವೇಳೆ ನನಗೆ ವಯಸ್ಸಾಗಿಬಿಟ್ಟಿದೆ, ದಣಿದಿದ್ದೇನೆ, ನಾನು ಮೊದಲಿನಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುವ ದೇವರು ನಿಮ್ಮೊಂದಿಗಿದ್ದಾರೆ. ಸೇವೆ ಮಾಡಲು, ಬೈಬಲ್ ಓದಲು ವಯಸ್ಸು ಅಡ್ಡಿಯಲ್ಲ. ದೇವರಿಗಾಗಿ ನಾವೂ ಸಹ ದಣಿವಿಲ್ಲದೇ ದುಡಿಯೋಣ. ದೇವರ ಕೃಪೆ ನಮ್ಮನ್ನು ಕಾಪಾಡಲಿ! ಆಮೆನ್.

- Mrs. ಸರೋಜ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ಗ್ರಾಮಗಳನ್ನು ಬೆಂಬಲಿಸುವವರು ಎದ್ದೇಳುವಂತೆ, ಇದರ ಮೂಲಕ ಗ್ರಾಮಗಳಲ್ಲಿ ಉಜ್ಜೀವನ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin