Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.04.2022
Share:

By Village Missionary Movement

Thursday, 28-Apr-2022

ಧೈನಂದಿನ ಧ್ಯಾನ(Kannada) – 28.04.2022

 

ಕೊಡಿರಿ

 

 "...ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು." - ಲೂಕ 6:38

 

ನನ್ನ 23 ನೇ ವಯಸ್ಸಿನಲ್ಲಿ, ಒಂದು ದಿನ ನನ್ನನ್ನು ಮಕ್ಕಳ ಸೇವೆಗಾಗಿ ಶಾಲೆಯಲ್ಲಿರುವ ಚಿಕ್ಕ ಮಕ್ಕಳಿಗೆ ನನ್ನ ಸಾಕ್ಷಿಯನ್ನು ಹೇಳುವಂತೆ ಕರೆದಿದ್ದರು. ಕಿಡ್ನಿ ಫೇಲ್ಯೂರ್ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮಾಡಿದ್ದು ಇದೆಲ್ಲಾ ಈ ಪುಟ್ಟ ಮಕ್ಕಳಿಗೆ ಹೇಳೋದು ಹೇಗೆ ಅಂತ ಯೇಸಪ್ಪನ ಬಳಿ ಒಂದು ನಿಮಿಷ ಪ್ರಾರ್ಥಿಸಿ ನಂತರ, ಕರ್ತನ ಕೃಪೆಯಿಂದ ನನ್ನ ಸಾಕ್ಷಿಯನ್ನು ಹೇಳಿ ಮುಗಿಸಿದೆ. ನಾನು ಬಯಾಪ್ಸಿ ಮತ್ತು ಡಯಾಲಿಸಿಸ್ ಅನ್ನು ಮೇಲ್ನೋಟಕ್ಕೆ ಹೇಳಿದೆ. ಕಥೆ, ಹಾಡು, ಕುಣಿತ, ಸ್ಕಿಟ್ ಎಲ್ಲವೂ ಮುಗಿದ ಮೇಲೆ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಂಕೋಚದಿಂದ ನನ್ನ ಬಳಿ ಬಂದು “ಅಣ್ಣ, ನಿಮ್ಮ ಸಾಕ್ಷಿ ನನಗೆ ತುಂಬಾ ಪ್ರಯೋಜನವಾಗಿತ್ತು, ಕರ್ತನು ನನ್ನ ಬಳಿ ಮಾತನಾಡಿದರು ನಿನ್ನ ಬಳಿ ಇರುವ ಕಾಸನ್ನು ಕಾಣಿಕೆಯಾಗಿ ಕೊಟ್ಟುಬಿಡು" ಅಂದರು. ಎಂದು ಹೇಳಿ ತನ್ನಲ್ಲಿದ್ದ ಎರಡು ಕಾಸುಗಳನ್ನು ನನ್ನ ಬಳಿ ಕೊಟ್ಟಳು. "ಅಣ್ಣ, ಇದು ನನ್ನ ತಾಯಿ ನನಗೆ ಮಿಠಾಯಿ ತೆಗೆದುಕೊಳ್ಳಲು ಕೊಟ್ಟ ಕಾಸೇ ಅಣ್ಣಾ" ಎಂದು ಹೇಳಿದಳು. ನಾನು ತಕ್ಷಣ, "ನನಗಿಂತ ಒಂದು ದೊಡ್ಡ ಅಣ್ಣ ಬಂದಿದ್ದಾರೆ ಅವರ ಬಳಿ ಕೊಡು" ಎಂದು ಹೇಳಿದೆ. ಅವಳು ತಡವರಿಸಿ ನಾಚಿಕೆಯಿಂದ ಅಣ್ಣನಿಗೆ 2 ರೂಪಾಯಿ ಕೊಟ್ಟಳು. ಅವರು ಸಂತೋಷದಿಂದ ಅದನ್ನು ತೆಗೆದುಕೊಂಡು ಅವಳಿಗಾಗಿ ಪ್ರಾರ್ಥಿಸಿದರು. ಆಗ ಆ ಪುಟ್ಟ ಬಾಲಕಿಯ ಸಂತೋಷಕ್ಕೆ ಅಳತೆಯೇ ಇರಲಿಲ್ಲ.

 

ಇದನ್ನು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ಈ ಚಿಕ್ಕ ವಯಸ್ಸಿನಲ್ಲಿ ಯೇಸಪ್ಪನ ಧ್ವನಿಯನ್ನು ಕೇಳಿ ಕೂಡಲೇ ವಿಧೇಯತೆ ತೋರುವ ಇಂಥಾ ಗುಣವಾ ಎಂದು. ನಾನು ಆ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆ ಎಂದು ಯೋಚಿಸಿದೆ. ಸತ್ಯವೇದದಲ್ಲಿ, ಯೇಸುಕ್ರಿಸ್ತನ ಮೂಲಕ ಅದ್ಭುತಗಳನ್ನು ಪಡೆದುಕೊಂಡ ಅನೇಕರು ತಕ್ಷಣವೇ ಆತನನ್ನು ಹಿಂಬಾಲಿಸಿದರು, ಅಂದರೆ ತಕ್ಷಣವೇ ತಮ್ಮ ಜೀವನವನ್ನು ದೇವರಿಗೆ ಅರ್ಪಿಸಿದರು ಎಂದು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಅನೇಕರು ಇನ್ನೂ ದೇವರ ವಾಕ್ಯವನ್ನು ಪೂರ್ಣ ಹೃದಯದಿಂದ ಕೇಳುವುದಿಲ್ಲ. ಕೇಳುಗರಲ್ಲಿ ಅನೇಕರು ಅದನ್ನು ಪಾಲಿಸಲು ಸಿದ್ಧವಾಗಿಯೂ ಇಲ್ಲ.

 

ಪ್ರಿಯರೇ! ದೇವರ ವಾಕ್ಯವನ್ನು ಕೇಳಿ ಕಾರ್ಯನಿರ್ವಹಿಸುವ ಹೃದಯ ನಮಗೆ ಬೇಕು. ಕಾಣಿಕೆಯನ್ನು ಕೊಡುವುದು ಮಾತ್ರವಲ್ಲ, ನಮ್ಮ ಜೀವನ, ಸಮಯ, ಯೌವನ ಮತ್ತು ಪ್ರತಿಭೆ ಹೀಗೆ ಏನು ಕೊಟ್ಟರೂ, ದೇವರು ಖಂಡಿತವಾಗಿಯೂ ಅದನ್ನು ನಮಗೆ ಎರಡರಷ್ಟಾಗಿ ಹಿಂದಿರುಗಿಸಿ ಕೊಡುತ್ತಾರೆ. ಇದು ನಮಗೆ ಇಹಲೋಕದಲ್ಲಿ ಮಾತ್ರವಲ್ಲದೆ ಪರಲೋಕದಲ್ಲಿಯೂ ಆಶೀರ್ವಾದವನ್ನು ತರುತ್ತದೆ.

- P.ಪ್ರವೀಣ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ದೇವಾಲಯಗಳಿಲ್ಲದ ಸಾವಿರಾರು ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಎಲ್ಲಾ ಕಾರ್ಯಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al