Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.04.2022
Share:

By Village Missionary Movement

Tuesday, 26-Apr-2022

ಧೈನಂದಿನ ಧ್ಯಾನ(Kannada) – 26.04.2022

 

ಮುಂದೆ ನೋಡಿ ಓಡು

 

“...ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನಕಾರ್ಯಗಳನ್ನು ಮರೆತುಬಿಡಿ." – ಯೆಶಾಯ 43:18

 

ಒಮ್ಮೆ ಒಬ್ಬ ವ್ಯಕ್ತಿ ದೊಡ್ಡ ಎತ್ತರವಾದ ಗೋಪುರದ ತುದಿಗೆ ಹತ್ತಿದರು. ಅವರಿಗೆ ಎತ್ತರವೆಂದರೆ ತುಂಬಾ ಭಯ. ಆ ಭಯವನ್ನು ಹೋಗಿಸಲೆಂದೇ ಅವರು ಮೇಲೆ ಹತ್ತುತ್ತಿದ್ದರು. ಮೇಲಕ್ಕೆ ಹತ್ತಿದವರು ಮೇಲೆ ನೋಡುತ್ತಾ ಹೋಗಬೇಕಿತ್ತು. ಆದರೆ ಅವರು ಕೆಳಗೆ ಬಾಗಿ ನಾವು ಎಷ್ಟು ಎತ್ತರಕ್ಕೆ ಏರಿದ್ದೇವೆ ಎಂದು ನೋಡಿದರು. ಅಷ್ಟೆ, ಎತ್ತರವನ್ನು ನೋಡಿದ ಕೂಡಲೇ ತಲೆ ಸುತ್ತಿ ಕೆಳಗೆ ಬಿದ್ದು ಸತ್ತುಹೋದರು.

ನಾವು ಸಹ ನಮ್ಮ ಜೀವನದಲ್ಲಿ ಹಿಂದೆ ನಡೆದ ಕಾರ್ಯಗಳನ್ನು ಯೋಚಿಸುತ್ತಾ ಮುಂದೆ ಸಾಗದೇ ನಿಂತುಬಿಟ್ಟಿದ್ದೇವೆ. ಆದರೆ ಸತ್ಯವೇದವು ಸ್ಪಷ್ಟವಾಗಿ ಹೇಳುತ್ತದೆ. “ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನಕಾರ್ಯಗಳನ್ನು ಮರೆತುಬಿಡಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು" ಎಂದು,

(ಯೆಶಾಯ 43: 18,19) ಸತ್ಯವೇದವು ಹಳೆಯ ಸಂಗತಿಗಳನ್ನು ಮರೆಯಬೇಕೆಂದು ನಮಗೆ ಹೇಳುತ್ತಿದ್ದರೂ, ನಾವು ಮಾತ್ರ ಅದನ್ನೇ ಯೋಚನೆ ಮಾಡುತ್ತಿರುವುದಾದರೆ ಖಂಡಿತವಾಗಿ ನಮ್ಮಿಂದ ದೇವರು ನೀಡುವ ಹೊಸ ಜೀವನ ಮತ್ತು ಆಶೀರ್ವಾದಗಳನ್ನು ಸ್ವತಂತ್ರಿಸಿಕೊಳ್ಳಲು ಸಾಧ್ಯವೇ ಇಲ್ಲ.

 

ಇದಕ್ಕೆ ಸತ್ಯವೇದದಲ್ಲಿ ಒಂದು ಸರಿಯಾದ ಉದಾಹರಣೆಯೆಂದರೆ ಲೋಟನ ಹೆಂಡತಿ. ದೇವರು ಅದ್ಭುತಕರವಾಗಿ ಅವರ ಮೇಲೆ ಕೃಪೆಯನ್ನಿಟ್ಟು ಅವರನ್ನು ರಕ್ಷಿಸಲು ಅವರನ್ನು ಹೊರಕ್ಕೆ ಕರೆದೊಯ್ದಾಗ, ಅವಳು ದೇವರ ಮಾತಿಗೆ ಅವಿಧೇಯಳಾಗಿ ಹಿಂತಿರುಗಿ ನೋಡುತ್ತಾಳೆ. ಆದ್ದರಿಂದ ಅವಳು ಆ ಸ್ಥಳದಲ್ಲೇ ಉಪ್ಪಿನ ಸ್ತಂಭವಾಗಿಬಿಟ್ಟಳು. ದೇವರು ಅವರಿಗಾಗಿ ಇಟ್ಟಿದ್ದ ಆ ಹೊಸ ಜೀವನವನ್ನು ಕಳೆದುಕೊಂಡಳು.

 

ಈ ದಿನ ನಾವು ನಮ್ಮನ್ನು ಪರೀಕ್ಷಿಸಿ ನೋಡೋಣ. ಒಂದು ವೇಳೆ ನಾವು ಸಹ ಲೋಟನ ಹೆಂಡತಿಯಂತೆ, ಬಿಟ್ಟುಬಂದ ಲೋಕದ ಕಾರ್ಯಗಳನ್ನು ಹಿಂತಿರುಗಿ ನೋಡುತ್ತಿರುವುದಾದರೆ, ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಡೋಣ. ಹಿಂದಿನ ಸಂಗತಿಗಳನ್ನು ಮರೆತು ಮುಂದೆ ನೋಡಿ ಓಡೋಣ. ಹಳೆಯದೆಲ್ಲಾ ಅಗಲಿಹೋಗಲಿ, ಅವುಗಳನ್ನು ಮರೆತುಬಿಡೋಣ. ಅದರ ಬಗ್ಗೆ ಯೋಚನೆಯೂ ಬೇಡ. ಹೊಸ ಕಾರ್ಯಕ್ಕೆ ನೇರವಾಗಿ ಮುನ್ನಡೆದು ದೇವರನ್ನು ಮಾತ್ರ ನೋಡುತ್ತಾ ಮುಂದೆ ಓಡೋಣ. ಆಮೆನ್.

- R. ಪ್ರಿನ್ಸಸ್.

 

ಪ್ರಾರ್ಥನಾ ಅಂಶ:

ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮದ ಮೂಲಕ ಭೇಟಿಮಾಡುವಂತಹ ವ್ಯಕ್ತಿಗಳು ಕರ್ತನನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş