By Village Missionary Movement
Sunday, 24-Apr-2022ಧೈನಂದಿನ ಧ್ಯಾನ(Kannada) – 24.04.2022 (Kids Special)
ಬದಲಾಗುವುದಿಲ್ಲ
“ನಾನು ಕರ್ತನು, ನಾನು ಬದಲಾಗುವದಿಲ್ಲ; ಆದದರಿಂದ ಓ ಯಾಕೋಬಿನ ಕುಮಾರರೇ, ನೀವು ನಾಶವಾಗಲಿಲ್ಲ” - ಮಲಾಕಿಯ 3:6
ಕಾಡಿನ ವಿವಿಧ ಪಕ್ಷಿಗಳೆಲ್ಲ ಸೇರಿ ಒಂದು ಮರದ ಕೆಳಗೆ ಸಮ್ಮೇಳನ ನಡೆಸಿದವಂತೆ. ಅದಕ್ಕೆ ನಮ್ಮ ರಾಷ್ಟ್ರೀಯ ಪಕ್ಷಿ ನೇತೃತ್ವ ವಹಿಸಿತಂತೆ. ರಾಷ್ಟ್ರೀಯ ಪಕ್ಷಿ ಯಾವುದೆಂದು ನಿಮಗೆ ಗೊತ್ತಾ ಪುಟಾಣಿಗಳೇ? ಹಾಂ... ನವಿಲು! ಮರೆಯದೇ ನೆನಪಿಟ್ಟುಕೊಳ್ಳಬೇಕು Ok. ನವಿಲು ನಮ್ಮ ಜನಾಂಗದ ಕೆಲವು ಪಕ್ಷಿಗಳನ್ನು ಕಾಣುತ್ತಿಲ್ಲವೇ ಎಂದು ಬೇಸರವಾಗಿತ್ತು. ಹದ್ದು ಇದನ್ನು ಕೇಳಿ ನಮ್ಮ ಜನಾಂಗವೂ ಕಡಿಮೆಯಾಗಿಬಿಟ್ಟಿದೆ. ನಾವು ರಾಜರಂತೆ ಹಳ್ಳಿಗಳನ್ನು ಸುತ್ತಿ ಬರುತ್ತಿದ್ದೋ. ಈಗ ಅದೂ ಸಹ ಹೋಯ್ತು ಎಂದಿತು. ನವಿಲು ಕಾಗೆಯನ್ನು ನೋಡಿದ ತಕ್ಷಣ ಏನು ತಮ್ಮಾ ನೀನು ಹೆಚ್ಚಾಗಿ ಊರೊಳಗೆ ಹೋಗಿ ಮನೆಗಳನ್ನು ಸುತ್ತಿ ನೋಡಿಕೊಂಡು ಬರುತ್ತಿದ್ದಲ್ಲಾ. ಅಲ್ಲಿಯೂ ಸಹ ಪಕ್ಷಿಗಳ ಸಂಚಾರ ಕಡಿಮೆಯಾಗಿ ಬಿಟ್ಟಿದೆ ಎಂದು ಹೇಳುತ್ತಿದ್ದಾರಲ್ಲಾ ಇದಕ್ಕೆ ಕಾರಣ ಏನೆಂದು ನಿನಗೆ ಗೊತ್ತಾ? ಎಂದಿತು.
ಕಾಗೆ ತಕ್ಷಣವೇ ಏನ್ ಹೇಳೋದೋ, ಬಿಡೋದೋ, ಪ್ರಪಂಚ ವಿವಿಧ ಆವಿಷ್ಕಾರಗಳನ್ನು ಕಂಡುಹಿಡಿದಿದೆ ಮತ್ತು ಕೆಲವು ರೀತಿಯ ಔಷಧಿಗಳನ್ನು ಖರೀದಿಸಿ ಅದನ್ನು ಬೆಳೆಗಳಿಗೆ ಸಿಂಪಡಿಸುತ್ತಿರುವುದರಿಂದ ಹುಳುಗಳು ಮತ್ತು ಕೀಟಗಳು ಸತ್ತುಹೋಗುತ್ತಿವೆ ... ವಿವಿಧ ತೈಲಗಳು ಮತ್ತು ಪ್ಲಾಸ್ಟಿಕ್ ಉತ್ಪನ್ನಗಳನ್ನು ಸುಡುವುದರಿಂದ ಗಾಳಿಯು ಕಲುಷಿತವಾಗಿದೆ. ಅಲ್ಲದೇ ಮನುಷ್ಯರು ಬಳಸುವ ಸೆಲ್ ಫೋನ್ ನಿಂದಾಗಿ ನಮ್ಮ ಜನಾಂಗ ಕ್ಷೀಣಿಸುತ್ತಿದೆ ಎಂದು ಕಾಗೆ ಹೇಳಿದಾಗ ಪಕ್ಷಿಗಳೆಲ್ಲ ಹೌದೆಂದು ಹೇಳಿದವು. ಇದನ್ನು ಕೇಳಿದ ನವಿಲು ಆ ಕಾಲದಲ್ಲಿ ನನ್ನ ರೆಕ್ಕೆಗಳನ್ನು ಹರಡಿಕೊಂಡು ನಾಟ್ಯವಾಡಿದರೆ ಚಿಕ್ಕ ಮಕ್ಕಳು, ದೊಡ್ಡವರು ಸಹ ಮೈಮರೆತು ಸಂತೋಷದಿಂದ ನೋಡುತ್ತಿದ್ದರು. ಈಗೆಲ್ಲಾ ಅವರು ಹಾಕುವ ಡ್ರೆಸ್ ಜಿಗಿ... ಜಿಗಿ...ಅಂಥಾ ಮಿನುಗುತ್ತಿದೆಯಲ್ಲಾ... ಯಾರೂ ನನ್ನನ್ನು ಕಂಡುಕೊಳ್ಳುತ್ತಿಲ್ಲ ಎಂದು ತನ್ನ ದುಃಖದ ಕಥೆಯನ್ನು ಹೇಳಿ ಮುಗಿಸಿತು. ತಕ್ಷಣ ಪಟ್ ಎಂದು ಗುಬ್ಬಚ್ಚಿ ಹೇಳಿತು, ಪ್ರಾಕೃತಿಕ ಜಗತ್ತು ಕೃತಕ ಜಗತ್ತಾಗಿ ಬದಲಾಗೋಯ್ತು ಹೌದು ತಾನೇ ಎಂದು ಹೇಳಿದ ಕೂಡಲೇ, ನೀನಿಷ್ಟು ಚಿಕ್ಕ ಗುಬ್ಬಚ್ಚಿಯಾಗಿದ್ದರೂ ಲೋಕವನ್ನು ಚೆನ್ನಾಗಿ ತಿಳಿದುಕೊಂಡಿದ್ದೀಯ ಎಂದು ಹೇಳಿ ಇತರ ಪಕ್ಷಿಗಳೆಲ್ಲಾ ನಕ್ಕವು. ಈ ಲೋಕ ಮತ್ತು ಮನುಷ್ಯರು ಬದಲಾಗುತ್ತಾರೆ. ಆದರೆ ನಮ್ಮನ್ನು ಸೃಷ್ಟಿಸಿದ ದೇವರು ಎಂದಿಗೂ ಬದಲಾಗುವುದಿಲ್ಲ ಎಂದು ನವಿಲು ಹೇಳಿತು. ಇತರ ಪಕ್ಷಿಗಳು ಹೌದು ಎಂದು ಹೇಳಿ, ನಮ್ಮನ್ನು ಪ್ರತಿನಿತ್ಯ ಪೋಷಿಸಿ ರಕ್ಷಿಸುತ್ತಿರುವ ದೇವರಿಗೆ ಧನ್ಯವಾದ ಎಂದು ಹೇಳುವ ಮೂಲಕ ಆ ಸಮ್ಮೇಳನವನ್ನು ಮುಕ್ತಾಯಗೊಳಿಸಿದವು.
ಪ್ರೀತಿಯ ತಮ್ಮ, ತಂಗಿ ಹಕ್ಕಿಗಳು ಮಾತನಾಡುವುದನ್ನು ನೀವು ಕೇಳುದ್ರಾ? ಎಲ್ಲವೂ ಬದಲಾಗಿ ಬಿಡುತ್ತದೆ. ಯೇಸು ಒಬ್ಬರು ಮಾತ್ರವೇ ಬದಲಾಗದವರು ಎಂಬುದನ್ನು ಪಕ್ಷಿಗಳೂ ಸಹ ತಿಳಿದುಕೊಂಡಿವೆ ನೋಡುದ್ರಾ? ಬದಲಾಗದ ದೇವರನ್ನು ಮರೆಯಬಾರದು. ಬದಲಾಗುವ ಮನುಷ್ಯರನ್ನು ಹುಡುಕಿ ಹೋಗಬಾರದು. ಯೇಸಪ್ಪನನ್ನು ಹುಡುಕಿ ನಿಜವಾದ ಸಂತೋಷವನ್ನು ಹೊಂದಿಕೊಳ್ಳಲು Ready ತಾನೇ Super!
- Mrs. ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482