Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.04.2022
Share:

By Village Missionary Movement

Saturday, 23-Apr-2022

ಧೈನಂದಿನ ಧ್ಯಾನ(Kannada) – 23.04.2022

 

ನನ್ನ ಸಮಯ ಎಲ್ಲಿ?

 

"...ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?" - ಮತ್ತಾಯ 26:40

 

ಒಮ್ಮೆ ಒಂದು ಗಂಡ ಹೆಂಡತಿ ಮಾತನಾಡಿಕೊಳ್ಳುತ್ತಿದ್ದರು. ಆಗ ಗಂಡ ಹೇಳಿದರು, “ನೀನು ಯಾವಾಗಲೂ ಬ್ಯುಸಿಯಾಗಿದ್ದೀಯ, ನನ್ನ ಜೊತೆ ಮಾತಾಡೋಲ್ಲ, ಸಮಯ ಕಳೆಯೋಲ್ಲ. ಆಫೀಸ್‌ನಲ್ಲಿರುತ್ತೀಯ ಇಲ್ಲವಾದರೆ ಮನೆಗೆ ಬಂದು ಫೋನ್ ಅಥವಾ ಲ್ಯಾಪ್‌ಟಾಪ್ ಮೂಲಕ ನಿನ್ನ ಕೆಲಸವನ್ನು ಮಾಡುತ್ತೀಯ. ನನಗೆ ಏನು ಬೇಕು, ನಾನು ಏನು ಬಯಸುತ್ತೇನೆ, ನಾನು ಹೇಗಿದ್ದೇನೆ ಎಂದೆಲ್ಲಾ ಯಾವುದರ ಬಗ್ಗೆಯೂ ಸ್ವಲ್ಪವೂ ಚಿಂತಿಸದೆ, ನಿನ್ನ ಅಗತ್ಯತೆಯನ್ನು ಮಾತ್ರ ಒಂದೆರಡು ಮಾತುಗಳಲ್ಲಿ ಹೇಳಿ ಹೊರಟು ಹೋಗುತ್ತೀಯ" ಎಂದರು. ಹೆಂಡತಿ ಆ ಮಾತುಗಳನ್ನು ಸ್ವಲ್ಪವೂ ಗ್ರಹಿಸದೆ ಮತ್ತೆ ತನ್ನ ಕೆಲಸವನ್ನು ಮುಂದುವರೆಸಿದಳು.

ಹೌದು, ಒಂದು ಗಂಡ, ಹೆಂಡತಿಯ ಸಂಬಂಧದ ಆಳವು ಅವರು ಪರಸ್ಪರ ಕಳೆಯುವ ಸಮಯವನ್ನು ಅವಲಂಬಿಸಿರುತ್ತದೆ. ಸತ್ಯವೇದದ ಪ್ರಕಾರ, ನಾವು ದೇವರ ಮದಲಗಿತ್ತಿಯರು! ಆದರೆ ನಾವು ನಮ್ಮ ಮದಲಿಂಗನಾದ ಯೇಸು ಕ್ರಿಸ್ತನೊಂದಿಗೆ ಒಂದು ದಿನದಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದೇವೆ? ಹತ್ತರಲ್ಲಿ ಒಂದು ಭಾಗವು ದೇವರಿಗೆ ಎಂದು ಹೇಳುತ್ತಾರೆ. ನಾವು ನಿಜವಾಗಿಯೂ ಯೋಚಿಸಿ ನೋಡಿದರೆ, ದೇವರಿಗೆ ಒಂದು ಗಂಟೆ ಸಮಯವನ್ನು ಕೊಡಲು ಸಹ ನಾವು ಕಷ್ಟಪಡುತ್ತೇವೆ. ಈ ದಿನಗಳಲ್ಲಿ ನಾವು ದೇವರಿಗೆ ಕೊಡುವ ಸಮಯದ ಬಗ್ಗೆ ಯೋಚಿಸೋಣ.

 

ನಂತರ, ನಮ್ಮ ಕುಟುಂಬ, ನಾವು ಇರುವ ಈ ಬ್ಯುಸಿಯಾದ ಲೋಕದಲ್ಲಿ ಕುಟುಂಬ ಐಕ್ಯತೆಯು ಕೇವಲ ಸಾಮಾಜಿಕ ರಚನೆಯಾಗಿದೆ. ಇದರಲ್ಲಿ ಪ್ರೀತಿ, ಸಂತೋಷ, ಸಮಾಧಾನಕ್ಕಿಂತ, ಜಗಳ, ಕಹಿಯಂತಹ ವಿರೋಧಾತ್ಮಕ ಕಾರ್ಯಗಳೇ ಹೆಚ್ಚಾಗಿ ತುಂಬಿಕೊಂಡಿದೆ. ಆರಂಭದ ದಿನಗಳಲ್ಲಿ ಮನೆಯವರು ಒಟ್ಟಿಗೆ ಕುಳಿತು ಊಟ ಮಾಡಿ ಅಂದಿನ ಘಟನೆಗಳ ಬಗ್ಗೆ ಮಾತನಾಡುವುದು ಸಾಮಾನ್ಯವಾಗಿತ್ತು. ಅದರ ಮೂಲಕ ಅವರು ಒಟ್ಟಿಗೆ ಕಳೆಯುತ್ತಿದ್ದ ಸಮಯವೂ ಹೆಚ್ಚಾಗಿರುತ್ತಿತ್ತು. ಇವುಗಳು ಪತಿ-ಪತ್ನಿಯರ ನಡುವೆ ಉತ್ತಮ ಐಕ್ಯತೆಯನ್ನು ಮೂಡಿಸಿದವು. ಈ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಒಳಿತು ಕೆಡುಕುಗಳನ್ನು ಮನೆಯಿಂದಲೇ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಆದರೆ ಮನೆಯ ಕಾರ್ಯಗಳು ನಮಗೆ ತಿಳಿಯುತ್ತಿಲ್ಲ.

 

ಪ್ರಿಯರೇ, ಇಂದು ಇದನ್ನು ಓದುತ್ತಿರುವ ಪ್ರತಿಯೊಬ್ಬರನ್ನೂ ದೇವರು ಕೇಳುತ್ತಿರುವ ಪ್ರಶ್ನೆ, ನನ್ನ ಸಮಯವೆಲ್ಲಿ? ಈ ದಿನದಂದು ನಿಮ್ಮ ಸಮಯದ ಬಗ್ಗೆ ಯೋಚಿಸಿರಿ. ದೇವರಿಗೆ ಸೇರಿದ್ದನ್ನು ದೇವರಿಗೆ, ಕುಟುಂಬಕ್ಕೆ ಸೇರಿದ್ದನ್ನು ಕುಟುಂಬಕ್ಕೆ ನಾವು ಕೊಡುವಾಗ ಖಂಡಿತವಾಗಿಯೂ ನಮ್ಮ ಜೀವನ ಸಂತೋಷಕರವಾಗಿರುತ್ತದೆ.

- R. ರಾಕ್ಸನ್

 

ಪ್ರಾರ್ಥನಾ ಅಂಶ:

"ಕತ್ತೆಗಳ ಮಾರ್ಗದರ್ಶಿ" ಎಂದು ಸೇವಕರುಗಳಿಗಾಗಿ ಪ್ರತ್ಯೇಕವಾಗಿ ಹೊರಬರುವ ಪತ್ರಿಕೆಯ ಮೂಲಕ ಗುಣಮಟ್ಟದ ಸೇವಕರುಗಳು ರೂಪಿಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin