Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.04.2022
Share:

By Village Missionary Movement

Friday, 22-Apr-2022

ಧೈನಂದಿನ ಧ್ಯಾನ(Kannada) – 22.04.2022

 

ನಂಬಿದವರು ಕೈಬಿಟ್ಟರೆ...

 

“ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು" - ಕೀರ್ತನೆ 118:8

 

ಆಗಸ್ಟ್ 4, 1991 ರಂದು, ದಕ್ಷಿಣ ಆಫ್ರಿಕಾದ ಕರಾವಳಿಯ. ಪಕ್ಕದಲ್ಲಿ "MTS ಓಷಿನೋಶ್" ಎಂಬ ಕ್ರೂಸ್ ಹಡಗು ಒಂದು ಅಪಾಯಕಾರಿಯಾದ ಚಂಡಮಾರುತದ ಅಬ್ಬರಕ್ಕೆ ಸಿಲುಕಿತು. ಆ ಹಡಗಿನಲ್ಲಿದ್ದ ಅಪಾಯದ ಬಗ್ಗೆ ಪ್ರಯಾಣಿಕರಿಗೆ ತಿಳಿಸದೆ

 

ಹಡಗಿನ ಕ್ಯಾಪ್ಟನ್ ಹಡಗನ್ನು ಒಂಟಿಯಾಗಿ ಬಿಟ್ಟು ತನ್ನ ಸಹ ಅಧಿಕಾರಿಗಳೊಂದಿಗೆ ಓಡಿಹೋಗಲು ನಿರ್ಧರಿಸಿದನು. ಅದರಲ್ಲಿ ಪ್ರಯಾಣಿಸುತ್ತಿದ್ದ ಆಂಗ್ಲ ಸಂಗೀತ ಮೇಧಾವಿ ಮೋಸ್ ಹಿಲ್ಸ್ ಏನೋ ಅಪಾಯ ಸಂಭವಿಸಲಿದೆ ಎಂದು ಅರಿತು, ದಕ್ಷಿಣ ಆಫ್ರಿಕಾದ ಕರಾವಳಿಯ ಕಡಲತೀರದ ಕೋಸ್ಟ್ ಗಾರ್ಡ್ ಗೆ ಭದ್ರತಾ ಸಿಗ್ನಲ್ ಮೂಲಕ ಸಂದೇಶವನ್ನು ಕಳುಹಿಸಿದರು. ತಕ್ಷಣ ಕಾರ್ಯಪ್ರವೃತ್ತರಾಗಿ ಸಕಾಲದಲ್ಲಿ ಸಂದೇಶ ರವಾನಿಸಿದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಹಡಗಿನತ್ತ ಧಾವಿಸಿತು. ಅದ್ಬುತವಾದ ರೀತಿಯಲ್ಲಿ ಒಬ್ಬರಿಗೂ ಹಾನಿಯಾಗದಂತೆ ಎಲ್ಲರನ್ನೂ ರಕ್ಷಿಸಿದರು.

 

ನಮ್ಮನ್ನು ರಕ್ಷಿಸುವವರು ಅಥವಾ ನಮಗೆ ಮಾರ್ಗದರ್ಶನ ನೀಡುವವರು ನಮ್ಮನ್ನು ಒಂಟಿಯಾಗಿ ಬಿಟ್ಟು ಬಿಟ್ಟರೆ ನಾವು ಏನು ಮಾಡಲು ಸಾಧ್ಯ? ಈ ರೀತಿಯ ಘಟನೆಗಳನ್ನು ಬೈಬಲ್‌ನಲ್ಲಿ ಅನೇಕ ಸ್ಥಳಗಳಲ್ಲಿ ಕಾಣಬಹುದು. ಯಾರೆಲ್ಲಾ ಭರವಸೆಯ ಭದ್ರಕೋಟೆಯಾಗಿ ಮತ್ತು ಸಂರಕ್ಷಕನಾಗಿ ಕಾಣುತ್ತಾರೋ, ಅವರೇ ತಮ್ಮನ್ನು ನಂಬುವವರಿಗೆ ಅಪಾಯಕಾರಿಯಾಗಿದ್ದಾರೆ. ಈ ಸಂದೇಶವನ್ನು ಓದುತ್ತಿರುವ ನಿಮ್ಮಲ್ಲಿ ಅನೇಕರು ಖಂಡಿತವಾಗಿಯೂ ಇದೇ ರೀತಿಯ ಅನುಭವಗಳನ್ನು ಅನುಭವಿಸಿರುತ್ತೀರಿ. ಆಪತ್ತು ಎಂದು ಬಂದಾಗ ತಮ್ಮನ್ನು ರಕ್ಷಿಸಿಕೊಳ್ಳುವುದು, ಜೊತೆಗಿದ್ದವರನ್ನು ಕೈಬಿಡುವುದು ಹಿಂದಿನಿಂದಲೂ ಕಾಲಕಾಲವಾಗಿ ನಡೆಯುತ್ತಲೇ ಇದೆ. ಇದಕ್ಕೆ ಬೈಬಲ್ ಏನು ಪರಿಹಾರ ಹೇಳುತ್ತದೆ ಎಂಬುದನ್ನು ನೋಡಬೇಕು. ಕೀರ್ತನೆಗಳಲ್ಲಿ ದಾವೀದನು, “ಹೀಗಿರಲಾಗಿ ಕರ್ತನೇ, ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ" ಎಂದು ಹೇಳುತ್ತಾರೆ (ಕೀರ್ತನೆಗಳು 39:7) ದೇವರು ನಮ್ಮ ನಂಬಿಕೆಯಾಗಿರುವಾಗ ಕಠಿಣವಾದ ಪರಿಸ್ಥಿತಿಗಳಲ್ಲಿ ನಾವು ಚಿಂತಿಸುವ ಅಗತ್ಯವಿಲ್ಲ.

 

ದೇವರ ವಾಕ್ಯವು ಮತ್ತು ಅವರ ಶಕ್ತಿಯು ನಮ್ಮನ್ನು ಬಿಡಿಸಲು ಬಲವುಳ್ಳದ್ದಾಗಿದೆ.ಕ್ರಿಸ್ತನಲ್ಲಿ ಪ್ರಿಯರೇ, ಮಹಿಮೆಯುಳ್ಳ ದೇವರ ಅದ್ಭುತವಾದ ವಾಗ್ದಾನಗಳನ್ನು ನಾವು ಹೊಂದಿದ್ದೇವೆ. ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ? ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ. ನಾನು ನಿನ್ನನ್ನು ಕೈಬಿಡುವದಿಲ್ಲ, ನಿನ್ನನ್ನು ತೊರೆಯುವದಿಲ್ಲ

 

ಎಂದು ದೇವರು ನಮ್ಮೊಂದಿಗೆ ಮಾತನಾಡಿದ್ದಾರಲ್ಲವೇ. ನೀವು ಏಕಾಂಗಿಯಾಗಿ ಕೈ ಬಿಡಲ್ಪಟ್ಟಿದ್ದರೆ ದೇವರ ವಾಗ್ದಾನಗಳನ್ನು ಅವಲಂಬಿಸಿರಿ. ಕರ್ತನು ನಿಮಗೆ ಮಾರ್ಗದರ್ಶನ ನೀಡುತ್ತಾರೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಮಿಷಿನರಿಗಳು ವಾಸವಾಗಿರಲು ಮತ್ತು ಅಲ್ಲೇ ತರಬೇತಿ ಪಡೆದುಕೊಳ್ಳಲು ಒಂದು "ಮಿಷಿನರಿ ಮನೆ" ಕಟ್ಟಲು ಬೇಕಾಗಿರುವ ರೂ. 2 ಲಕ್ಷ ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al