Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.04.2022
Share:

By Village Missionary Movement

Thursday, 21-Apr-2022

ಧೈನಂದಿನ ಧ್ಯಾನ(Kannada) – 21.04.2022

 

ಕಷ್ಟಗಳನ್ನು ಸಹಿಸಿಕೊಳ್ಳೋಣ.

 

"ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು;..." - 2 ತಿಮೊಥೆ 2:12

 

ಇಂಗ್ಲೆಂಡಿನಲ್ಲಿ ಜನಿಸಿದ ವಿಲಿಯಂ ಆಲ್ಟ್ ಎಂಬವರು ಶ್ರೀಲಂಕಾದಲ್ಲಿ ಸೇವೆ ಮಾಡುವ ವ್ಯಕ್ತಿಗಳು ಬೇಕಾಗಿದ್ದಾರೆ ಎಂಬ ಕರೆಯನ್ನು ಕೇಳಿ ತನ್ನನ್ನು ಸೇವೆಗೆ ಸಮರ್ಪಿಸಿಕೊಂಡರು. ದೇವರು ತನಗೆ ಕೊಟ್ಟ ಸೇವೆಯಲ್ಲಿ ಹೆಗಲು ಕೊಡುವ ಹುಡುಗಿಯನ್ನು ಮದುವೆಯಾದರು. ನಂತರ ಅವರು ತನ್ನ ಹೆಂಡತಿ ಮತ್ತು ಕೆಲವು ಕುಟುಂಬಗಳೊಂದಿಗೆ ನೌಕಾಯಾನ ಹಡಗಿನಲ್ಲಿ ಪ್ರಯಾಣಿಸಿದರು. ಇದ್ದಕ್ಕಿದ್ದಂತೆ ಚಂಡಮಾರುತವು ಹಡಗನ್ನು ಅಲುಗಾಡಿಸಿತು ಮತ್ತು ಅನೇಕರು ಗಾಯಗೊಂಡರು. ವಿಲಿಯಂ ಆಲ್ಟ್ ರವರ ಪತ್ನಿಯ ದೈಹಿಕ ಸ್ಥಿತಿಯು ಬಾಧಿಸಲ್ಪಟ್ಟು, ವೈದ್ಯಕೀಯ ಸೌಲಭ್ಯಗಳಿಲ್ಲದೆ ಅವರೂ ಸಹ ನಿಧನರಾದರು. ದುರಂತವೆಂದರೆ ಅವರು ತನ್ನ ಹೆಂಡತಿಯ ಶವವನ್ನು ಸಮುದ್ರಕ್ಕೆ ಎಸೆದು ಪ್ರಯಾಣವನ್ನು ಮುಂದುವರೆಸಿದರು. ವಿಲಿಯಂ ದುಃಖದಿಂದ ಶ್ರೀಲಂಕಾದ ಬ್ಯಾಟಿಕಲೋವಾಕ್ಕೆ ಬಂದರು. ಶ್ರೀಮಂತ ಜೀವನ ನಡೆಸಿದ ಅವರು ಶ್ರೀಲಂಕಾದ ಒಂದು ಗುಡಿಸಲಿನಲ್ಲಿ ಸರಿಯಾದ ಆಹಾರವಿಲ್ಲದೆ ಎರಡು ತಿಂಗಳಲ್ಲಿ ತಮಿಳು ಕಲಿತರು. ಅದಲ್ಲದೇ 8 ತಿಂಗಳಲ್ಲಿ 8 ಗ್ರಾಮಗಳಲ್ಲಿ ಶಾಲಾ-ಕಾಲೇಜು ಮತ್ತು ಕಾರ್ಯ ಸ್ಥಳಗಳನ್ನು ಸ್ಥಾಪಿಸಿದರು. ವಿಲಿಯಂ ಆಲ್ಟ್ ಜೀವನದಲ್ಲಿ ಅನೇಕ ಹೋರಾಟಗಳು ಮತ್ತು ಕಷ್ಟಗಳು ಇದ್ದರೂ ಸಹ, ಎಂದಿಗೂ ಹಿಂದೆ ಸರಿಯಲಿಲ್ಲ, ಗೊಣಗಲಿಲ್ಲ ಆಯಾಸಗೊಳ್ಳಲಿಲ್ಲ. ಇಂದು ಅನೇಕರಿಗೆ ಕೆಲಸದಲ್ಲಿ, ಕುಟುಂಬದಲ್ಲಿ, ಸೇವೆಯಲ್ಲಿ, ಸಮಸ್ಯೆಗಳು, ಹೋರಾಟಗಳು ಬಂದುಬಿಟ್ಟರೆ ಈ ಸೇವೆಯೇ ಬೇಡ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಇಲ್ಲದಿದ್ದರೆ ಬೇರೆ ಕೆಲಸಕ್ಕೆ, ಬೇರೆ ಕಡೆಗೆ ಹೊರಟು ಹೋಗುತ್ತಾರೆ. ಸತ್ಯವೇದದಲ್ಲಿಯೂ ಸಹ ದೇವರಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡಿದ ಎಲೀಯ, ಯೋನ ಎಂಬವರ ಜೀವನದಲ್ಲಿ ಸಮಸ್ಯೆ ಹೋರಾಟಗಳು ಬಂದಾಗ ದೇವರೇ ನನ್ನ ಪ್ರಾಣವನ್ನು ತೆಗೆದುಕೊಳ್ಳಿ ಎಂದು ಪ್ರಾರ್ಥಿಸಿದರು. ಆದರೆ ಯೇಸು ಕ್ರಿಸ್ತನು ಈ ಲೋಕದಲ್ಲಿ ಮನುಷ್ಯನಾಗಿ ಬಂದು ತಲೆಯಿಡಲೂ ಸಹ ಸ್ಥಳವಿಲ್ಲದೇ ಜೀವಿಸಿ ಶಿಲುಬೆಯ ಮರಣ ಬಹುಘೋರ ಎಂದು ತಿಳಿದರೂ ಅದನ್ನು ಸ್ವೀಕರಿಸಿ ನಮಗಾಗಿ ಎಲ್ಲವನ್ನೂ ಸಹಿಸಿಕೊಂಡು ಮರಣ ಹೊಂದಿದರು.

 

ಪ್ರಿಯರೇ, ನಿಮಗೆ ನೀಡಲಾದ ಕೆಲಸ, ಪದವಿ, ಸೇವೆ ಇವುಗಳಲ್ಲಿ ಸಮಸ್ಯೆಗಳು, ಗೊಂದಲಗಳು ಮತ್ತು ಹೋರಾಟಗಳು ಇರುತ್ತವೆ. ಆದರೆ ಅವುಗಳನ್ನು ತಿರಸ್ಕರಿಸಿ, ಗುಣುಗುಟ್ಟಿ, ಬೇಸರ ಮಾಡಿಕೊಳ್ಳದೇ ದೇವರ ಬಳಿ ಬಲವನ್ನು ಕೇಳಿ ಪಡೆದು ಸತತವಾಗಿ ಓಡೋಣ. ಶೋಧನೆ, ಹೋರಾಟಗಳನ್ನು ಸಹಿಸಿಕೊಂಡು ಕ್ರಿಸ್ತನನ್ನು ನೆನೆದು ಮುನ್ನಡೆಯೋಣ, ಖಂಡಿತವಾಗಿಯೂ ಪರಲೋಕದಲ್ಲಿ ಉನ್ನತಿಯನ್ನು ಪಡೆಯುತ್ತೇವೆ.

- Mrs. ಅನ್ಬು ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

ಸಹ ಸೇವಕರು ಕೆಲಸ ಮಾಡುವ ದೇವಾಲಯಗಳಿಲ್ಲದ ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin