Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.04.2022
Share:

By Village Missionary Movement

Tuesday, 19-Apr-2022

ಧೈನಂದಿನ ಧ್ಯಾನ(Kannada) – 20.04.2022

 

ಇರೋದು ಸಾಕು!

 

“ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ" - 1 ತಿಮೊ. 6: 6

 

ಒಬ್ಬ ಶಿಲ್ಪಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು, ಅದರೊಳಗೆ ಚಿತ್ರವನ್ನು ಕೆತ್ತಲು ಪ್ರಾರಂಭಿಸಿದನು. ಬಿಸಿಲಿನ ತಾಪ ಅವರ ತಲೆಯ ಮೇಲೆ ತಟ್ಟಿತು, “ಛೇ, ಇದೇನು ಜೀವನಾನೋ ಏನೋ, ಯಾವಾಗ ನೋಡಿದರೂ ಈ ಬಿಸಿಲಿನಲ್ಲಿ ನಿಂತು ಈ ಉಳಿಯನ್ನು ಕೈಯಲ್ಲಿಡಿದು ಕೆತ್ತುತ್ತಲೇ ಇದ್ದೇನೆ! ನನಗೆ ಬೇರೆ ಒಳ್ಳೆಯ ಕೆಲಸ ಸುಲಭವಾಗಿ ಹೆಚ್ಚು ಸಂಬಳ ದೊರೆತರೆ ಚೆನ್ನಾಗಿರುತ್ತದೆ" ಎಂದು ನೆನೆಸಿದರು. ಆಗ ಆ ಮಾರ್ಗದಲ್ಲಿ ಆ ದೇಶದ ರಾಜ ಕುದುರೆಯ ಮೇಲೆ ಬರುವುದನ್ನು ಕಂಡರು.

 

ಆಹಾ, ನಾನು ಈ ರಾಜನಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸಿದರು. ಏನು ಆಶ್ಚರ್ಯ! ತಕ್ಷಣವೇ ಅವರು ರಾಜನಾಗಿ ಮಾರ್ಪಟ್ಟರು. ಅವರು ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದಾಗ ಸೂರ್ಯನ ಶಾಖವು ಅಧಿಕವಾಗಿ ಅವರ ಮೇಲೆ ಏರಿತು ಮತ್ತು ಈ ಸೂರ್ಯನೇ ರಾಜನಿಗಿಂತ ದೊಡ್ಡವನು ಎಂದು ಭಾವಿಸಿದ ತಕ್ಷಣವೇ ಅವರು ಸೂರ್ಯನಾಗಿ ಮಾರ್ಪಟ್ಟರು.

         

ಹಾಗೆ ಸೂರ್ಯನಂತೆ ಬೆಳಗುತ್ತಿರುವಾಗ, ಮೋಡವೊಂದು ಕಾಣಿಸಿಕೊಂಡು ಭೂಮಿಯ ಮೇಲೆ ಮಳೆಸುರಿಯಿತು. ನೀರನ್ನು ಹೊಡೆದುಕೊಂಡು ಹೋಗುವ ದಾರಿಯಲ್ಲಿ ದೊಡ್ಡ ಬಂಡೆಯನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಹೊಡೆದುಕೊಂಡು ಹೋಯಿತು. ತಕ್ಷಣ ಆ ಶಿಲ್ಪಿ ಆಹಾ, ಆ ಕಲ್ಲೇ ಗಟ್ಟಿಯಾದದ್ದು, ಏನು ಬಂದರೂ ಕದಲಲಿಲ್ಲವೇ ಎಂದುಕೊಂಡ ಕ್ಷಣ ಮಾತ್ರದಲ್ಲೇ ಅವರು ದೊಡ್ಡ ಕಲ್ಲಾಗಿ ಮಾರ್ಪಟ್ಟರು. ಆಗ ಇನ್ನೊಬ್ಬ ಶಿಲ್ಪಿ ಬಂದು ಒಂದು ಉಳಿಯನ್ನು ಮತ್ತು ಸುತ್ತಿಗೆಯನ್ನು ತಂದು ಕಲ್ಲನ್ನು ಕೆತ್ತಲು ಪ್ರಾರಂಭಿಸಿದಾಗ ಆ ಶಿಲ್ಪಿಯ ಕೆಲಸ ಎಷ್ಟು ಚೆನ್ನಾಗಿದೆ ಎಂದು ಯೋಚಿಸಿದನು. ಅವರು ಮಾಡುತ್ತಿದ್ದ ಕೆಲಸವನ್ನು, ದೇವರು ತನಗೆ ಕೊಟ್ಟ ಸ್ಥಾನವನ್ನು ತೃಪ್ತಿಯಿಂದ ಸ್ವೀಕರಿಸಿದರು.

        

ಸತ್ಯವೇದದಲ್ಲಿ, ಅಪೊ. ಪೌಲನು ತನ್ನ ಪತ್ರಿಕೆಯಲ್ಲಿ ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ ಎಂದು ಬರೆಯುತ್ತಾರೆ. ಅಂದರೆ ನಿಮ್ಮ ಬಳಿಯಲ್ಲಿ ಇರುವುದೇ ಸಾಕೆಂದು ಪರಿಗಣಿಸಿ ಎಂದು ಉಲ್ಲೇಖಿಸುತ್ತಾರೆ .

 

ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಬಳಿ ಇರುವುದೇ ಸಾಕು ಎಂದು ಭಾವಿಸಿ. ಅದು ಯೇಸುಕ್ರಿಸ್ತನೇ ನಿಮ್ಮ ಕೈಗಳಲ್ಲಿ ನೀಡಿದ ಆಶೀರ್ವಾದವಾಗಿರಬಹುದು, ಅದು ಉದ್ಯೋಗವಾಗಿರಬಹುದು, ಅದು ಪ್ರತಿಭೆಯಾಗಿರಬಹುದು, ಅದು ಕುಟುಂಬ ಮತ್ತು ಸಂಬಂಧಗಳಾಗಿರಬಹುದು. ಅವರು ನಿಮಗಾಗಿ ಏನನ್ನು ಅಳೆದುಕೊಟ್ಟಿದ್ದಾರೋ ಅದರಲ್ಲಿ ತೃಪ್ತರಾಗಿರಿ. ನಿಮ್ಮ ಬಳಿ ಇಲ್ಲದಿರುವ ಯಾವುದೋ ಒಂದರ ಬಗ್ಗೆ ಚಿಂತೆಯೋ ಕಳವಳವೋ ಬೇಡ. ಇರುವುದು ಸಾಕು ಎಂದು ನೆನೆಸಿ ಕೃತಜ್ಞತೆ ಸಲ್ಲಿಸಿರಿ. ನೀವು ಊಹಿಸಿರದ ಆಶೀರ್ವಾದಗಳೊಂದಿಗೆ ಕರ್ತನು ನಿಮ್ಮನ್ನು ತುಂಬಿಸುತ್ತಾರೆ. ಆಮೆನ್!

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಕಛೇರಿಯ ಕೆಲಸಗಾರರು ಪ್ರತಿಯೊಬ್ಬರನ್ನೂ ದೇವರು ವಿಶೇಷವಾದ ಜ್ಞಾನದಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin