Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.04.2022
Share:

By Village Missionary Movement

Tuesday, 19-Apr-2022

ಧೈನಂದಿನ ಧ್ಯಾನ(Kannada) – 19.04.2022

 

ಪೋಷಕಾಂಶದ ರಹಸ್ಯ

 

"ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು... ಉಪಯುಕ್ತವಾಗಿದೆ” - 2 ತಿಮೊಥೆಯ 3:16

 

"Boost is the secret of My Energy" ಎಂಬ ಜಾಹೀರಾತಿನ ಮಾತುಗಳು 90ರ ದಶಕದಲ್ಲಿ ಹುಡುಗರು ಮತ್ತು ಹದಿಹರೆಯದವರು ಮಾತ್ರವಲ್ಲದೆ ವಯಸ್ಕರನ್ನೂ ಆಕರ್ಷಿಸಿದವು. ಮತ್ತು ಈ ಪದಗಳನ್ನು ಉಚ್ಚರಿಸುವ ವ್ಯಕ್ತಿ ಪ್ರಸಿದ್ಧ ಕ್ರಿಕೆಟಿಗನಾಗಿರುವುದರಿಂದ, ಈ ಪದವು ಮೂಲೆ ಮೂಲೆಯಲ್ಲಿ ಸದ್ದು ಮಾಡಿತು. ನಿಜವಾಗಲೂ ಅದೇ ಅವರ ಶಕ್ತಿಯ ಗುಟ್ಟಾ ಎಂದು ಯೋಚಿಸಿದರೆ ಉತ್ತರ ಪ್ರಶ್ನಾರ್ಹ. ಕಾರಣವೇನೆಂದರೆ ಅನೇಕ ಕಂಪನಿಗಳು ಮತ್ತು ಅದರ ಉತ್ಪನ್ನಗಳು ಹೆಚ್ಚಾಗಿವೆ. ಹೊಸದು ಬರುತ್ತಿದ್ದಂತೆ ಹಳೆಯದನ್ನು ಜನರು ತಿರಸ್ಕರಿಸತೊಡಗಿದರು. ಇಂದು ನಾವು ಹಲವು ವರ್ಷಗಳನ್ನು ದಾಟಿ ನಿಂತಿದ್ದೇವೆ. ನಿರ್ದಿಷ್ಟ ಆ ಪಾನೀಯವೂ ಇದೆ. ಇನ್ನೂ ಅನೇಕವೂ ಇವೆ. ಜನರು ಎಲ್ಲವನ್ನೂ ಹತ್ತರಲ್ಲಿ ಹನ್ನೊಂದರಂತೆ ನೋಡಲು ಅಭ್ಯಾಸ ಮಾಡಿಕೊಂಡು ಬಿಟ್ಟರು. ಆದರೆ ಅಂದು ಹೇಳಿದ ಮಾತುಗಳನ್ನು ಹೇಳಲು ಇಂದು ಯಾರೂ ಮುಂದೆ ಬರುವುದಿಲ್ಲ. ಇದು ನಮಗೊಂದು ಪಾಠ!

 

ಅಪೊಸ್ತಲನಾದ ಪೌಲನು ತನ್ನ ಯೌವನಸ್ಥ ಸೇವಕನಾದ ತಿಮೊಥೆಯನಿಗೆ ಪತ್ರವನ್ನು ಬರೆಯುವಾಗ ಒಂದು ಕಾರ್ಯವನ್ನು ಬರೆಯುವುದನ್ನು 2 ತಿಮೊ. 3: 14-17 ರವರೆಗೆ ನೋಡುತ್ತೇವೆ. ಅದರಲ್ಲಿ ಅವರು ಏನು ಹೇಳಲು ಬಯಸುತ್ತಿದ್ದಾರೆಂದರೆ ಬಾಲ್ಯದಿಂದಲೂ ಕಲಿತುಕೊಂಡ ಕಾರ್ಯಗಳಲ್ಲಿ ನೆಲೆಗೊಂಡಿರು. ದೇವ ವಾಕ್ಯಗಳೆಲ್ಲಾ ದೇವರಾತ್ಮನಿಂದ ಕೊಡಲ್ಪಟ್ಟಿದೆ. ಅವು ಒಂದು ಮನುಷ್ಯನನ್ನು ರೂಪಿಸಲು ಉಪಯುಕ್ತವಾಗಿದೆ. ಅಂದರೆ ಬಾಲ್ಯದಿಂದಲೂ ನಿಮಗೆ ತಿಳಿದಿರುವ ಸತ್ಯವೇದವನ್ನು ಯಾವುದೋ ಒಂದು ಪ್ರಾಚೀನ ಕಾರ್ಯವೆಂದು ಭಾವಿಸದೆ ಅವುಗಳಲ್ಲಿ ನೆಲೆಗೊಂಡಿರು. ಅದೇ ನಿನ್ನನ್ನು ರೂಪಿಸುತ್ತದೆ. ಅವುಗಳು ದೇವರ ಆತ್ಮದಿಂದ ಅನುಗ್ರಹಿಸಲ್ಪಟ್ಟಿದೆ. ಹೀಗೆ ಸತ್ಯವೇದದ ಬಗ್ಗೆ ಸುಂದರವಾಗಿ ವಿವರಿಸಿ ತಿಳಿಸುತ್ತಾರೆ.

 

ಪ್ರಿಯರೇ! ನಮ್ಮ ಕೈಯಲ್ಲಿರುವುದು ಪ್ರಾಚೀನ ಬೈಬಲ್. ಆದರೆ ಅದನ್ನು ಧ್ಯಾನಿಸುತ್ತಾ ಧ್ಯಾನಿಸುತ್ತಾ ಸಿಗುವುದೆಲ್ಲಾ ಹೊಸತನ! ಸತ್ಯವೇದ ನಮಗೆ ಹತ್ತರಲ್ಲಿ ಹನ್ನೊಂದಲ್ಲ. ಅದೊಂದೇ ನಮಗೆ ಮಾರ್ಗದರ್ಶಿ. ನಾವು ಪರಿಶುದ್ಧ ಗ್ರಂಥವನ್ನು ಪ್ರತಿದಿನ, ಹಗಲು ರಾತ್ರಿ ಧ್ಯಾನಿಸಿದರೆ, ಅದು ನಮ್ಮನ್ನು ಫಲವತ್ತಾದ ಮರವಾಗಿ ಪರಿವರ್ತಿಸುತ್ತದೆ. ಕ್ರೈಸ್ತ ಜೀವನವನ್ನು ನಡೆಸಲು ಆತ್ಮಬಲವು ತುಂಬಾ ಅವಶ್ಯಕವಾಗಿದೆ. ಆ ಬಲವನ್ನು ನೀಡುವ ಏಕೈಕ ಪೋಷಕಾಂಶ ಸತ್ಯವೇದ. ಈಗಿರುವ ಚಿಕ್ಕ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಸತ್ಯವೇದದ ಮಹತ್ವವನ್ನು ಕಲಿಸಿಕೊಡುವ ದೊಡ್ಡ ಜವಾಬ್ದಾರಿ ನಮ್ಮ ಕೈಗಳಲ್ಲಿಯೇ ಇದೆ. "Bible is the secret of My Energy" ಎಂದು ಈಗಿನ ಪೀಳಿಗೆಯು ಸುಮ್ಮನೆ ಹೇಳುವವರಾಗಿ ಮಾತ್ರವಲ್ಲ, ಅದರ ಪ್ರಕಾರ ನಡೆಯುವವರಾಗಿ ಮಾರ್ಪಡಿಸೋಣ!

- T. ಶಂಕರರಾಜ್

 

ಪ್ರಾರ್ಥನಾ ಅಂಶ:

ದೇವರು ನಮಗೆ ನೀಡಿರುವ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ಯಾವುದೇ ರೀತಿಯ ರಿಪೇರಿಯೂ ಬರದೇ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş