Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.04.2022
Share:

By Village Missionary Movement

Monday, 18-Apr-2022

ಧೈನಂದಿನ ಧ್ಯಾನ(Kannada) – 18.04.2022

 

ಚೆನ್ನಾಗಿರಲು ಆಸೆಯಾ?

 

"ಅವನು ಬಿದ್ದುಕೊಂಡಿರುವದನ್ನು ಯೇಸು ನೋಡಿ ಅವನು ಬಹುಕಾಲದಿಂದ ಆ ಸ್ಥಿತಿ ಯಲ್ಲಿ ಇದ್ದಾನೆಂದು ತಿಳಿದು ಅವನಿಗೆ--ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ ಎಂದು ಕೇಳಿದನು." - ಯೋಹಾನ 5:6

 

ಈ ಪತ್ರಿಕೆಯನ್ನು ಓದುತ್ತಿರುವ ನಿಮ್ಮನ್ನು ನೋಡಿ ಒಂದು ಮಾತನ್ನು ಕೇಳುತ್ತೇನೆ. "ಚೆನ್ನಾಗಿರಬೇಕೆಂದು ಬಯಸುತ್ತೀರಾ?" ಅಬ್ಬಬ್ಬಾ, ಇಂಥಾ ಒಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ, ಯಾರಿಗೆ ತಾನೆ ಚೆನ್ನಾಗಿರಬೇಕೆಂಬ ಆಸೆ ಇರೋದಿಲ್ಲಾ ಅಂಥಾ ಹೇಳ್ತೀರ. ಒಮ್ಮೆ ನಾನು ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವಾಗ ಸೇತುವೆಯ ಪಕ್ಕದಲ್ಲಿ ಬಹಳಷ್ಟು ಜನ ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದರು. ಅದನ್ನು ನೋಡುತ್ತಾ ಹಾದು ಹೋಗುತ್ತಿರುವ ಸಂದರ್ಭದಲ್ಲಿ, ಕೊನೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ಏನೆಂದು ಗಮನವಿಟ್ಟು ನೋಡುತ್ತಿದ್ದೆ. ಆ ವ್ಯಕ್ತಿ ತೊಟ್ಟಿದ್ದ ಡ್ರೆಸ್ ನಿಂದ ಸ್ವಲ್ಪ ಕಳಚಿಕೊಂಡಿದ್ದ. ಎಂಥಾ ಘೋರ! ಅವರ ಕಾಲಿನಲ್ಲಿ ಕೊಳೆತ ಹುಣ್ಣುಗಳು, ಮೂಳೆಗಳು ಕಾಣುತ್ತಿದ್ದ ಆ ದೃಶ್ಯವನ್ನು ನನ್ನಿಂದ ನೋಡಲಾಗಲಿಲ್ಲ. ಆ ಕೊಳೆತ ಹುಣ್ಣುಗಳನ್ನು ತೋರಿಸುತ್ತಾ ಅವರು ಭಿಕ್ಷೆ ಬೇಡುತ್ತಿದ್ದರು. ನಾನು ಅವರ ಹತ್ತಿರ ಹೋಗಿ, ಅಯ್ಯಾ ನಾನೊಬ್ಬ ಡಾಕ್ಟರ್. ನಾನು ಕೆಲಸ ಮಾಡುವ ಆಸ್ಪತ್ರೆ ಹತ್ತಿರದಲ್ಲಿದೆ. ಎಷ್ಟೋ ಔಷಧಿಗಳನ್ನು ಕಂಡುಹಿಡಿದಿದ್ದಾರೆ. ಬನ್ನಿ, ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದಾಗ, ಅವರು ನಗುತ್ತಾ ಹೇಳಿದರು, "ನಾನು ನನ್ನ ಗಾಯಗಳನ್ನು ತೋರಿಸೇ ಭಿಕ್ಷೆ ಬೇಡಿಕೊಳ್ಳುತ್ತಿದ್ದೇನೆ. ಅದನ್ನು ಸರಿಪಡಿಸಿದರೆ ಜೀವನೋಪಾಯಕ್ಕೆ ನಾನೇನು ಮಾಡಲಿ?'' ಎಂದು ಹೇಳಿ ಹತ್ತಿರದಲ್ಲಿದ್ದ ಇತರ ಭಿಕ್ಷುಕರಿಗೂ ಹೇಳಿ ಮುಗುಳ್ನಕ್ಕರು.

 

ಇಂದು ಇದೇ ಪರಿಸ್ಥಿತಿಯಲ್ಲೇ ನಾವು ಸಹ ಇದ್ದೇವೆ. 38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ಮನುಷ್ಯನನ್ನು ನೋಡಿ ಯೇಸು ಕೇಳುತ್ತಾರೆ, "ನಿನಗೆ ಸ್ವಸ್ಥವಾಗುವುದಕ್ಕೆ ಮನಸ್ಸುಂಟೋ?" ಎಂದು. ಆತನು ಇಷ್ಟಾರ್ಥಗಳನ್ನು ಮತ್ತು ಬಯಕೆಗಳನ್ನು ಪೂರೈಸಲು ಆಸೆಪಡುತ್ತಿದ್ದಾರೆ. ಇಂದು ಇದನ್ನು ಓದುತ್ತಿರುವ ನೀವು, ಹಾಯಾಗಿರಬೇಕು, ಚೆನ್ನಾಗಿ ವಿಧ್ಯಾಭ್ಯಾಸ ಮಾಡಬೇಕು ಮತ್ತು ಯೇಸುವಿಗಾಗಿ ಪರಿಶುದ್ಧ ಜೀವನವನ್ನು ಜೀವಿಸಬೇಕು ಹೀಗೆ ಯಾವ ಬಯಕೆಗಳನ್ನೆಲ್ಲಾ ಹೊಂದಿದ್ದೀರಿ? ಒಂದು ವೇಳೆ 38 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆ ರೋಗಿಯು ಬೇಸರದಿಂದ, ಸ್ವಸ್ಥನಾಗಬೇಕೆಂಬ ಬಯಕೆಯೇ ಇಲ್ಲದೆ ಮಲಗಿರಬಹುದು. ಆದರೆ ನಿಮ್ಮ ಹೃದಯದ ಆಲೋಚನೆಗಳನ್ನು ತಿಳಿದು ಯೇಸು ಕ್ರಿಸ್ತನು ಕೇಳುತ್ತಿದ್ದಾರೆ. "ನೀನು ಸ್ವಸ್ಥನಾಗಲು ಬಯಸುತ್ತೀಯಾ?" ಎಂದು. ನಿಮ್ಮ ಆಸೆಗಳನ್ನು ಮತ್ತು ಬಯಕೆಗಳನ್ನು ಪೂರೈಸಲೆಂದೇ ಅವರು ನಿಮ್ಮ ಹೃದಯದ ಬಾಗಿಲನ್ನು ತಟ್ಟುತ್ತಲೇ ಇದ್ದಾರೆ. ಮಗನೇ, ಮಗಳೇ, ನಿನಗೆ ಏನು ಬೇಕೆಂದು ಆಸೆ ಪಡುತ್ತಿದ್ದೀಯ. ನಿನಗಾಗಿಯೇ ಬಾಗಿಲಲ್ಲಿ ಕಾಯುತ್ತಿದ್ದಾರೆ. ಈಗಲೇ ನಿನ್ನ ಹೃದಯದ ಬಾಗಿಲನ್ನು ತೆರೆಯುವೆಯಾ? ಅಪ್ಪ ನಿನ್ನ ಇಚ್ಛೆಯನ್ನು ಕೇಳಲು ಹಂಬಲಿಸುತ್ತಿದ್ದಾರೆ; ನೀನೂ ಕೂಡ ನಿನ್ನ ಇಚ್ಛೆಯನ್ನು ತಿಳಿಸು, ತಡಮಾಡಬೇಡ!

- Sis. ವಿಶಾಲಿ

 

ಪ್ರಾರ್ಥನಾ ಅಂಶ:

ಆಫೀಸ್ ಕೆಲಸಕ್ಕೆ Tally, Designing ಅನುಭವ ಹೊಂದಿರುವ ಉದ್ಯೋಗಿಗಳನ್ನು ದೇವರು ನಮಗೆ ದೊರಕಿಸಿ ಕೊಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş