Village Missionary Movement         கிராம மிஷனரி இயக்கம்

ದೈನಂದಿನ ಧ್ಯಾನ 17-04-2022  (Kids special)
Share:

By Village Missionary Movement

Sunday, 17-Apr-2022

ದೈನಂದಿನ ಧ್ಯಾನ 17-04-2022 

(Kids special)

 

ಕ್ರಿಸ್ತನ ಸ್ವಾರೂಪ್ಯ

 

 “...ನಿಮ್ಮ ವೈರಿಗಳನ್ನು ಪ್ರೀತಿಸಿರಿ, ...ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ."

- ಮತ್ತಾಯ 5:44

 

Hello friends, ಇವತ್ತು ಯಾವ Day ಗೊತ್ತಾ? ಈಸ್ಟರ್. ಯೇಸುಕ್ರಿಸ್ತನ ಪುನರುತ್ಥಾನದ ದಿನವನ್ನು ಆಚರಿಸುವುದು ತಾನೇ! ಹೌದು ಪುಟಾಣಿಗಳೇ, ಯೇಸಪ್ಪ ಮರಣವನ್ನು ಜಯಿಸಿ ಇಂದಿಗೂ ಜೀವಿಸುತ್ತಿರುವ ದೇವರಾಗಿ ನಮ್ಮೊಂದಿಗಿದ್ದಾರೆ. ಅವರ ಸ್ವಾರೂಪ್ಯದಂತೆ ಜೀವಿಸಿ ಪ್ರತಿಬಿಂಬಿಸುವುದೇ ನಾವು ಅವರಿಗೆ ಕೊಡುವ ಉಡುಗೊರೆಯಾಗಿದೆ. ಎಸ್ತೇರ್ Jesu - ಗೆ ಏನು ಉಡುಗೊರೆ ನೀಡಿದಳು ಎಂದು ಕಥೆ ಕೇಳೋಣ್ವಾ?

 

7 ನೇ ತರಗತಿ ಓದುತ್ತಿರುವ ಸುಗಂಧಿ, ತುಂಬಾ ತೀಟೆ ಹುಡುಗಿ. ಅವಳು ಎಲ್ಲರನ್ನೂ ಜಗಳಕ್ಕೆ ಎಳೆಯುತ್ತಾಳೆ. ಪ್ರತಿಯಾಗಿ ಇತರ ಮಕ್ಕಳು ಅವಳೊಂದಿಗೆ ಜಗಳವಾಡುತ್ತಾರೆ. ರಿಬ್ಬನ್ ಹಿಡಿದು ಎಳೆಯುವುದು, ಪೆನ್ನು ಎತ್ತಿಕೊಂಡು ಬಚ್ಚಿಡುವುದು ಇಂಥಾ ಚೇಷ್ಟೆ ಮಾಡುವುದು ಕೆಲವೊಮ್ಮೆ ಜಗಳ ಹೊಡೆದಾಟದಲ್ಲಿಯೂ ಸಹ ಮುಗಿಯುತ್ತಿತ್ತು. ಶಿಕ್ಷಕರು ಇದನ್ನು ಖಂಡಿಸಿ ಸುಗಂಧಿಗೆ ಬುದ್ಧಿ ಹೇಳುತ್ತಿರಲಿಲ್ಲ. ಒಂದು ದಿನ ಎಸ್ತೇರ್ ನ ಸೈನ್ಸ್ ನೋಟ್ ತೆಗೆದುಕೊಂಡು ಅದನ್ನು ಹರಿದು ಹಾಕಿದಳು. ಎಸ್ತೇರ್ ಇತರ ಮಕ್ಕಳಂತೆ ಜಗಳವಾಡುವುದಿಲ್ಲ, ಅವಳು ಮೌನವಾಗಿರುತ್ತಾಳೆ. ಎಸ್ತೇರ್ ನ ಆಪ್ತ ಸ್ನೇಹಿತೆ ಜ್ಯೋತಿ ವೇಗವಾಗಿ ಬಂದಳು. "ಆ ಸುಗಂಧಿ ನಿನ್ನ ನೋಟ್ ಹರಿದು ಹಾಕಿದ್ದನ್ನು ನೋಡಿದೆ. ಇಷ್ಟು ಮೌನವಾಗಿದ್ದೀಯಲ್ಲಾ, ನಾನಾಗಿದ್ದರೆ ಪ್ರತಿಯಾಗಿ ಅವಳ ಪುಸ್ತಕವನ್ನು ಹರಿದು ಹಾಕುತ್ತಿದ್ದೆ" ಎಂದು ಅಧಿಕಾರವಾಗಿ ಬೈದು ಬಿಟ್ಟು ಹೊರಟು ಹೋದಳು.

 

ಒಂದು ದಿನ ಸುಗಂಧಿಗೆ ಇದ್ದಕ್ಕಿದ್ದಂತೆ ಜ್ವರ ಬಂತು. ಒಂದು ವಾರ ಶಾಲೆಗೆ ಬರಲಿಲ್ಲ. ಎಸ್ತೇರ್ ಸುಗಂಧಿಯನ್ನು ನೋಡಬೇಕೆಂದು ಯೋಚಿಸುತ್ತಾ ತನಗೆ ಇಷ್ಟವಾದ Cream biscuit ನ್ನು ತೆಗೆದುಕೊಂಡು ಹೋದಳು. ಸುಗಂಧಿಗೆ ಎಸ್ತೇರನ್ನು ನೋಡಿ ಆಶ್ಚರ್ಯವಾಯಿತು. ಅವಳ ಸಹಪಾಠಿಗಳ್ಯಾರೂ ಅವಳನ್ನು ನೋಡಲು ಬರಲಿಲ್ಲ. ಆದರೆ ಎಸ್ತೇರ್ ನನ್ನ ಮೇಲೆ ಇಷ್ಟೊಂದು ಪ್ರೀತಿಯಿಟ್ಟಿದ್ದಾಳೆ! ಎಂದು ತನ್ನ ತಪ್ಪನ್ನು ಅರಿತು ಪಶ್ಚಾತ್ತಾಪ ಪಟ್ಟಳು. ಮರುದಿನ Sunday school ಗೆ ಹೋದಳು. ಸುಗಂಧಿಯನ್ನು ಕಂಡ ಎಸ್ತೇರ್ ಸಂತೋಷದಿಂದ ಓಡಿಬಂದು, ಏನಪ್ಪಾ ಮೈ ಸರಿಹೋಯ್ತಾ ಹುಷಾರಾದಾ? ಎಂದಳು. ಓ, ಸರಿ ಹೋಯ್ತೇ! ನಿನ್ನೆ ನೀನು ನನಗಾಗಿ ಪ್ರಾರ್ಥಿಸುವಾಗಲೇ ಸರಿಹೋಯ್ತು. ನಾನು ನಿನ್ನಂತೆ ಒಳ್ಳೆಯ ಮಗುವಾಗಿರಬೇಕೆಂದು ಆಸೆಯಾಗಿತ್ತು. ಅದಕ್ಕಾಗಿಯೇ ಇಲ್ಲಿಗೆ ಬಂದೆ ಎಂದು ಸುಗಂಧಿ ಹೇಳಿದ ಕೂಡಲೇ, ಎಸ್ತೇರ್ ಸಂತೋಷದಿಂದ ದೇವರಿಗೆ ಕೃತಜ್ಞತೆ ಸಲ್ಲಿಸಿದಳು.

 

ಪ್ರೀತಿಯ ತಮ್ಮ- ತಂಗಿ ಯೇಸಪ್ಪನ ಸ್ವಾರೂಪ್ಯ, ಅಂದರೆ ತಪ್ಪು ಮಾಡಿದಾಗ ಕ್ಷಮಿಸಿ ಪ್ರೀತಿಸುವ ಸ್ವಭಾವ ಎಸ್ತೇರ್ ಬಳಿ ಇದ್ದದರಿಂದ ತೀಟೆ ಹುಡುಗಿ ಸುಗಂಧಿ ಯೇಸುವನ್ನು ಅರಿತುಕೊಂಡಳು. ನೀವೂ ಕೂಡ ಯೇಸುವಿನ ಸ್ವಾರೂಪ್ಯದಂತೆ ಪ್ರತಿಬಿಂಬಿಸುವುದೇ ನೀನು ಅವರಿಗೆ ಕೊಡುವ ಉಡುಗೊರೆಯಾಗಿದೆ. Happy Easter.

Mrs. ಜೀವಾ ವಿಜಯ್



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice