By Village Missionary Movement
Saturday, 16-Apr-2022ಧೈನಂದಿನ ಧ್ಯಾನ(Kannada) – 16.04.2022
ಕರ್ತನಿಗೆ ಮೆಚ್ಚಿಕೆಯಾದದ್ದು
“ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ" - ಎಫೆಸ 5:10
ಒಂದು ರಾತ್ರಿ ಸೇವಕರೊಬ್ಬರು ಚರ್ಚ್‌ಗೆ ಹೋಗುತ್ತಿದ್ದರು. ಕಳ್ಳನೊಬ್ಬ ಚಾಕು ತೋರಿಸಿ ತನ್ನ ಬಳಿ ಇದ್ದ ಹಣ ನೀಡುವಂತೆ ಬೆದರಿಕೆ ಹಾಕಿದನು. ಹಣವನ್ನು ತೆಗೆದುಕೊಳ್ಳಲು ಸೇವಕರು ತನ್ನ ಕೈಚೀಲವನ್ನು ತೆರೆದಾಗ, ಅವರೊಂದು ಸೇವಕರು ಎಂದು ತಿಳಿದುಕೊಂಡ ಕಳ್ಳ, “ನೀವೊಂದು ಸೇವಕರಾಗಿರುವುದರಿಂದ ನಿಮ್ಮನ್ನು ಬಿಟ್ಟು ಬಿಡುತ್ತಿದ್ದೇನೆ ಹಣವನ್ನು ತೆಗೆಯಬೇಡಿ” ಎಂದು ಹೇಳಿದನು. ಅವನ ಇಂತಹ ಭಕ್ತಿಯನ್ನು ಸ್ವಲ್ಪವೂ ಊಹಿಸಿದ ಸೇವಕರು, ಅವನಿಗೆ ಒಂದು ಕಲ್ಲು ಸಕ್ಕರೆಯ ಅಚ್ಚನ್ನು ಕೊಟ್ಟರು. ಆ ಅಪಹರಣಕಾರನು, "ನಿಮಗೆ ಧನ್ಯವಾದಗಳು, ನಾನು ಲೆಂಟ್ ದಿನಗಳಲ್ಲಿ ಕಲ್ಲುಸಕ್ಕರೆಯನ್ನು ತಿನ್ನುವುದಿಲ್ಲ" ಎಂದು ಹೇಳಿದನಂತೆ. ನೋಡಿ! ಸಿಹಿತಿನಿಸುಗಳನ್ನು ಲೆಂಟ್ ದಿನಗಳಲ್ಲಿ ತಿನ್ನದೇ ಇರುವುದು ಕರ್ತನಿಗೆ ಮೆಚ್ಚಿಕೆಯಾದದ್ದು ಎಂದು ಭಾವಿಸಿದನು. ಆದರೆ ಅವನ ಜೀವನವೋ ಕರ್ತನನ್ನು ದುಃಖಪಡಿಸುತ್ತಿತ್ತು. ಒಬ್ಬ ಕ್ರೈಸ್ತನು ಆಚರಿಸುವ ಆಚರಣೆಗಳು ಅವನಿಗೆ ಕ್ರಿಸ್ತನ ಮೇಲಿರುವ ಪ್ರೀತಿಯನ್ನು ತೋರಿಸುವುದಿಲ್ಲ. ಅವನ ಆಂತರಿಕ ಪರಿಶುದ್ಧತೆ, ಮಾತು ಮತ್ತು ಕ್ರಿಯೆಗಳ ಮೂಲಕ ಮಾತ್ರ ಕ್ರಿಸ್ತನ ಮೇಲಿನ ಪ್ರೀತಿಯನ್ನು ತೋರಿಸಲು ಸಾಧ್ಯ. ಹೃದಯವು ಶುದ್ಧವಾಗಿದ್ದರೆ, ಮಾತುಗಳು ಮತ್ತು ಕ್ರಿಯೆಗಳು ಎಲ್ಲವೂ ಕರ್ತನನ್ನು ಮೆಚ್ಚಿಸುತ್ತದೆ. ಅದಕ್ಕಾಗಿಯೇ ಯೇಸು ಮತ್ತಾಯ 23:26 ರಲ್ಲಿ "ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು" ಎಂದು ಹೇಳಿದರು. ಆದ್ದರಿಂದ ನಾವು ಈ ವರ್ಷ ಲೆಂಟ್‌ನ ದಿನಗಳನ್ನು ಆಚರಿಸುವುದರೊಂದಿಗೆ ತೃಪ್ತರಾಗದೇ, ನಮ್ಮಲ್ಲಿ ಶುದ್ಧ ಹೃದಯವನ್ನು ಸೃಷ್ಟಿಸುವಂತೆ ಮತ್ತು ನಮ್ಮಲ್ಲಿ ದೃಢವಾದ ಚೈತನ್ಯವನ್ನು ನವೀಕರಿಸುವಂತೆ ಕರ್ತನನ್ನು ಕೇಳಿಕೊಳ್ಳೋಣ.
ಈ 40 ದಿನಗಳ ಲೆಂಟ್ ದಿನಗಳಲ್ಲಿ ಕರ್ತನನ್ನು ಮೆಚ್ಚಿಸುವುದು ಯಾವುದು? ಆತನಿಗೆ ಇನ್ನೂ ಮೆಚ್ಚಿಕೆಯಾಗಿ ಜೀವಿಸುವುದು ಹೇಗೆ? ಎಂದು ನಾವು ಕಲಿತುಕೊಂಡದ್ದನ್ನು ನಮ್ಮ ಜೀವನವಿಡೀ ಕೈಕೊಂಡು ಜೀವಿಸಲು ಪ್ರಯಾಸ ಪಡುವುದೇ ಕರ್ತನಿಗೆ ಇಷ್ಟ. ಹೌದು, ಇನ್ನು ಮುಂದೆ ಬರುವ ಪ್ರತಿಯೊಂದು ದಿನವೂ ಕರ್ತನನ್ನು ಮೆಚ್ಚಿಸುತ್ತಾ ಜೀವಿಸಲು ಪ್ರಯತ್ನಿಸೋಣ!
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
VBS ಸೇವೆಗಳಿಗಾಗಿ ತೆಗೆದುಕೊಳ್ಳುವ ಪ್ರಯತ್ನಗಳನ್ನು ದೇವರು ಆಶೀರ್ವದಿಸುವಂತೆ, ಹಳ್ಳಿಗಳಲ್ಲಿ ಸೇವೆಗೆ ತೆರೆದ ಬಾಗಿಲುಗಳನ್ನು ದೇವರು ದಯಪಾಲಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482