Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.04.2022
Share:

By Village Missionary Movement

Friday, 15-Apr-2022

ಧೈನಂದಿನ ಧ್ಯಾನ(Kannada) – 15.04.2022

 

ಶಿಲುಬೆಯನ್ನು ಹೊತ್ತ ಸೀಮೋನನು

 

"...ಸೀಮೋನ... ಆತನ ಶಿಲುಬೆಯನ್ನು ಹೊರುವಂತೆ ಅವರು ಅವನನ್ನು ಬಲವಂತ ಮಾಡಿದರು." - ಮಾರ್ಕ 15:21

 

ಸೈನಿಕರ ಗುಂಪು ದೇವರನ್ನು ಅಪಹಾಸ್ಯ ಮಾಡಿದ ನಂತರ ಆತನನ್ನು ಶಿಲುಬೆಗೇರಿಸಲು ಕೊಂಡೊಯ್ದರು. ಹೋಗುವ ದಾರಿಯಲ್ಲಿ ಅವರು ಯೇಸುವಿನ ಶಿಲುಬೆಯನ್ನು ಒಯ್ಯುವಂತೆ ಕುರೇನ್ಯದ ಸೀಮೋನನನ್ನು ಒತ್ತಾಯಿಸಿದರು. ಯೇಸು ಶಿಲುಬೆಯ ದಾರಿಯಲ್ಲಿ ಮೌನವಾಗಿದ್ದಂತೆಯೇ, ಸೀಮೋನನೂ ಸಹ ಒಂದು ಮಾತೂ ಆಡದೇ ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ದೇವರನ್ನು ಸ್ವಲ್ಪ ವಿಶ್ರಾಂತಿ ಪಡೆದು ಕೊಳ್ಳುವಂತೆ ಮಾಡಿದರು.

 

ಯೇಸುವನ್ನು ಶಿಲುಬೆಗೇರಿಸಿದ ಮಾರ್ಗದಲ್ಲಿ ಅನೇಕರಿದ್ದರೂ ಸೈನಿಕರ ಕಣ್ಣುಗಳು ಸೀಮೋನನ ಮೇಲೆ ಮಾತ್ರ ಬಿದ್ದ ಹಾಗೆ, ನೀವಿರುವ ಸ್ಥಳದಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಅನೇಕರಿದ್ದರೂ ನೀತಿವಂತರಾಗಿ ನಡೆಯುವ ನೀವು ಮಾತ್ರ ಸತತವಾಗಿ ಪಾಡು ಪಡುತ್ತಿದ್ದೀರಾ? ಭಾರವಾದ ಶಿಲುಬೆಯನ್ನು ಹೊರುತ್ತಿದ್ದೀರಾ? ಚಿಂತಿಸಬೇಡಿರಿ. ತಾವಿದ್ದ ಸ್ಥಾನದಲ್ಲಿ ಏಕಾಂಗಿಗಳಾಗಿದ್ದರೂ 

ದಾನಿಯೇಲ, ಯೋಬ ಮತ್ತು ಯೋಸೇಫರನ್ನು ಬಿಡಿಸಿ ಉನ್ನತಕ್ಕೇರಿಸಿದ ದೇವರು ನಿಮ್ಮನ್ನೂ ಹೆಚ್ಚಿಸುತ್ತಾರೆ.

 

ಅಷ್ಟೇ ಅಲ್ಲ, ದೇವರ ಶಿಲುಬೆಯನ್ನು ಸೀಮೋನನು ಸ್ವಲ್ಪ ಹೊತ್ತುಕೊಂಡಿದ್ದರಿಂದ ಇವನ ಮಕ್ಕಳಾದ ಅಲೆಕ್ಸಾಂದ್ರ ಮತ್ತು ರೂಫ ಎಂಬವರಲ್ಲಿ ಒಬ್ಬರನ್ನು ಸಭೆಯ ಮುಖ್ಯಸ್ಥನಾಗಿಯೂ ಮತ್ತೊಬ್ಬರನ್ನು ಸರ್ಕಾರದ ಉನ್ನತ ಅಧಿಕಾರಿಯ ಸ್ಥಾನಕ್ಕೂ ಏರಿಸಲಾಯಿತು ಎಂದು ಸಭೆಯ ಇತಿಹಾಸ ಹೇಳುತ್ತದೆ.

 

ಆದ್ದರಿಂದ ಈ ದೊಡ್ಡ ಶುಭ ಶುಕ್ರವಾರದಂದು ನಿಮ್ಮ ಶಿಲುಬೆಯನ್ನು ಪ್ರತಿದಿನ ಸಂತೋಷದಿಂದ ಸಾಗಿಸಲು ನಿರ್ಧರಿಸಿ. ಸೀಮೋನನಿಗೆ ಮಾಡಿದಂತೆಯೇ ಕರ್ತನಾದ ಯೇಸು ಕ್ರಿಸ್ತನು ನಿಮ್ಮ ಸಂತತಿಯನ್ನು ಹೆಚ್ಚಿಸುತ್ತಾರೆ. ಅನೇಕ ಮುತ್ತುಗಳಿಂದ ಕೂಡಿದ ಅದ್ಭುತವಾದ ಕಿರೀಟವು ಪರಲೋಕದಲ್ಲಿ ನಿಮಗಾಗಿ ಕಾಯುತ್ತಿದೆ.

 

ನೆನಪಿಡಿ: ಈಗ ನಾನು ನಿಮಗಾಗಿ ಅನುಭವಿಸುತ್ತಿರುವ ಸಂಕಟಗಳಲ್ಲಿ ಸಂತೋಷಪಟ್ಟು, ಕ್ರಿಸ್ತನ ಉಪದ್ರವಗಳಿಗಿಂತ ಕಡಿಮೆಯಾದದ್ದನ್ನು ಅವರ ದೇಹವಾಗಿರುವ ಸಭೆಗಾಗಿ ನನ್ನ ಶರೀರದಲ್ಲಿ ಪೂರೈಸುತ್ತಿದ್ದೇನೆ.

 - ಪೌಲನು

- Selected

 

ಪ್ರಾರ್ಥನಾ ಅಂಶ:

WhatsApp, You Tube, Twitter, email ಮೂಲಕ ಹೊರಬರುವ ದೈನಂದಿನ ಧ್ಯಾನ ಸಂದೇಶವನ್ನು ಓದುವವರು, ಕೇಳುವವರು ಕರ್ತನಿಗಾಗಿ ಫಲ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al