Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.04.2022
Share:

By Village Missionary Movement

Tuesday, 12-Apr-2022

ಧೈನಂದಿನ ಧ್ಯಾನ(Kannada) – 12.04.2022

 

ನನಗೆ ನೀರಡಿಕೆಯಾಗಿದೆ

 

‘‘...ಶಾಸ್ತ್ರದ ಮಾತು ನೆರವೇರುವಂತೆ - ನನಗೆ ನೀರಡಿಕೆ ಆಗಿದೆ ಅಂದನು." - ಯೋಹಾನ 19:28

 

ಯೇಸು ಶಿಲುಬೆಯ ಮೇಲೆ ನುಡಿದ ಐದನೆಯ ಮಾತು:

ಭಾರತ ಸ್ವಾತಂತ್ರ್ಯ ಪಡೆದ ದಿನಗಳವು. ರಾಜಸ್ಥಾನವನ್ನು ಅಂಟಿಕೊಂಡಿದ್ದ ಪಾಕಿಸ್ತಾನವನ್ನು ವಿಭಜಿಸಲು ಅಧಿಕಾರಿಗಳು ಭೂಮಾಪನದಲ್ಲಿ ತೊಡಗಿದ್ದರು. ಈ ಕೆಲಸದಲ್ಲಿ ಇಂಗ್ಲೆಂಡಿನ ವೆಲ್ಡ್‌ಮೆನ್ ಎಂಬವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಅವರು ಭಕ್ತಿಯುಳ್ಳ ಕ್ರೈಸ್ತರಾಗಿದ್ದರು. ಹಗಲಿನಲ್ಲಿ ಅವರು ಮರುಭೂಮಿಯ ಬಿಸಿಲಿನಲ್ಲಿ ಭೂಮಿಯನ್ನು ಅಳೆಯುತ್ತಿದ್ದರು ಮತ್ತು ಸಂಜೆ ತನ್ನ ಬಳಿ ಕೆಲಸ ಮಾಡುವವರಿಗೆ ಸುವಾರ್ತೆಯನ್ನು ಸಾರುತ್ತಿದ್ದರು. ಒಂದು ರಾತ್ರಿ ಹುಣ್ಣಿಮೆಯಲ್ಲಿ ಅವರು 40 ಜನರ ಗುಂಪಿನೊಂದಿಗೆ ಯೇಸುವಿನ ಬಗ್ಗೆ ಮಾತನಾಡಿದರು. ಅವರು ರಕ್ಷಣೆ, ಪರಿಶುದ್ಧತೆ, ನ್ಯಾಯತೀರ್ಪು ಮತ್ತು ಪರಲೋಕದ ಬಗ್ಗೆ ಸತತವಾಗಿ ಮಾತನಾಡುವುದನ್ನು ಮುಂದುವರೆಸಿದರು. ಆಗ ಗುಂಪಿನ ಮಧ್ಯದಲ್ಲಿದ್ದ ಒಬ್ಬರು ನೀವು ಮಾತನಾಡುತ್ತಿರುವ ಈ ಕಾರ್ಯಗಳಿಗೆಲ್ಲಾ ಲಿಖಿತ ಸಾಕ್ಷ್ಯವಿದೆಯೇ ಎಂದು ಕೇಳಿದರು. ಹೌದು ಇದೆ, ನಿಮ್ಮ ಭಾಷೆಯಲ್ಲಿ ನನ್ನ ಬಳಿ ಎರಡು ಬೈಬಲ್‌ಗಳಿವೆ. ನಾನು ಅದನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಟೆಂಟ್ ಒಳಗೆ ಹೋದರು. ಹಿಂತಿರುಗಿ ಬರುವಾಗ, ಬೈಬಲ್ ಸ್ವೀಕರಿಸಲು 40 ಜನರ ಕೈಗಳೂ ಚಾಚಲ್ಪಟ್ಟಿತ್ತು.

 

ಇದನ್ನು ನೋಡಿದ ವೆಲ್ಡ್‌ಮೆನ್‌ಗೆ ತುಂಬಾ ಆಶ್ಚರ್ಯವಾಯಿತು. ಆ ಪುಸ್ತಕವನ್ನು ನನಗೆ ಕೊಡಿ ಎಂದು ಕೇಳಿದ 40 ಮಂದಿಯ ಆಸೆಯನ್ನು, ದಾಹವನ್ನು ಕಂಡು ಬೆರಗಾದರು. ಭಾರತೀಯರು ಬೈಬಲ್ ಅನ್ನು ಸ್ವೀಕರಿಸಲು ಎಷ್ಟು ದಾಹದಿಂದಿದ್ದಾರೆ ಎಂದು ಭಾವಿಸಿ ಇನ್ನೂ ಉತ್ಸಾಹದಿಂದ ಅವರು ದೇವರ ಸೇವೆ ಮಾಡಲು ಪ್ರಾರಂಭಿಸಿದರು. ಭಾರತೀಯರೆಲ್ಲರೂ ಯೇಸುವನ್ನು ತಿಳಿದುಕೊಳ್ಳುವುದು ನನ್ನ ಬಾಯಾರಿಕೆಯಾಗಿದೆ ಎಂದು ವೆಲ್ಡ್ ಮೆನ್ ಹೇಳಿದರು.

 

ಇಂದಿನ ಧ್ಯಾನ ಸಂದೇಶದಲ್ಲಿ ಕರ್ತನಾದ ಯೇಸು ನನಗೆ ನೀರಡಿಕೆಯಾಗಿದೆ ಎಂದು ಹೇಳಿರುವುದನ್ನು ನಾವು ಓದುತ್ತೇವೆ. ಲೋಕದ ಪಾಪವನ್ನು ಹೊತ್ತು ತೀರಿಸಿದವರು ಒಬ್ಬರೂ ಕೆಟ್ಟು ಹೋಗದೇ ಎಲ್ಲರೂ ಮಾನಸಾಂತರಗೊಳ್ಳಲು, ರಕ್ಷಣೆ ಹೊಂದಲು ದಾಹದಿಂದಿದ್ದಾರೆ. ಒಬ್ಬ ಪಾಪಿಯು ದುಷ್ಟತನದ ಮಾರ್ಗದಿಂದ ಹಿಂತಿರುಗಿ ಯೇಸುವಿನ ಬಳಿಗೆ ಬರುವಾಗ, ಇಡೀ ಪರಲೋಕವೇ ಸಂತೋಷಪಡುತ್ತದೆ. ಒಂದು ಮನುಷ್ಯನು ಮಾನಸಾಂತರ ಹೊಂದಿದರೇನೆ ಪರಲೋಕ ಸಂತೋಷಪಡುತ್ತದೆ ಎಂದರೆ ಬಹುಸಂಖ್ಯೆಯ ಜನರು ಗುಂಪು ಗುಂಪಾಗಿ ರಕ್ಷಿಸಲ್ಪಟ್ಟಾಗ ಇಡೀ ಪರಲೋಕವು ಹರ್ಷಿಸುತ್ತದೆ. ಇದೇ ನಮಗಾಗಿ ತನ್ನ ರಕ್ತವನ್ನು ಸುರಿಸಿದ ಯೇಸು ಕ್ರಿಸ್ತನ ದಾಹವನ್ನು ನೀಗಿಸುವ ಕಾರ್ಯವಾಗಿದೆ. ಅಂದರೆ, ದೇವರ ಚಿತ್ತವನ್ನು ಪೂರೈಸುವ ಭಾಗವಾಗಿದೆ. ಆತ್ಮಗಳ ರಕ್ಷಣೆಯೇ ದೇವರ ಬಾಯಾರಿಕೆಯನ್ನು ನೀಗಿಸುವಂಥದ್ದಾಗಿದೆ. ಯೇಸುವಿನ ಬಾಯಾರಿಕೆಯನ್ನು ನೀಗಿಸಲು ಆತ್ಮಗಳನ್ನು ಸಂಪಾದಿಸಲೂ ಮುಂದೆ ಬನ್ನಿರಿ. ದೇವರು ನಿಮ್ಮನ್ನು ಬಲಪಡಿಸಲಿ!

- Bro.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

"60 ಮಿಷನರಿ ಮನೆಗಳನ್ನು" ನಿರ್ಮಿಸಲು ದೇವರು ಪಾಲುದಾರರನ್ನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş