Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.04.2022
Share:

By Village Missionary Movement

Monday, 11-Apr-2022

ಧೈನಂದಿನ ಧ್ಯಾನ(Kannada) – 11.04.2022

 

ದೇವರು ಎಲ್ಲಿದ್ದಾರೆ?

 

"ಸುಮಾರು ಮೂರು ಗಂಟೆಗೆ ಯೇಸು - ಏಲೀ, ಏಲೀ, ಲಮಾ ಸಬಕ್ತಾನೀ, ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು" - ಮತ್ತಾಯ 27:46

 

ಯೇಸು ಶಿಲುಬೆಯ ಮೇಲೆ ನುಡಿದ ನಾಲ್ಕನೇ ಮಾತು:

"ಕ್ರಿಶ್ಚಿಯನ್ ಮತ್ತು ಮಿಷನರಿ ಅಲೈಯನ್ಸ್" ಎಂಬ ಜಾಗತಿಕ ಮಿಷನರಿ ಚಳುವಳಿಯನ್ನು ಸ್ಥಾಪಿಸಿದವರು ಶ್ರೀ. A.B ಸಿಂಪ್ಸನ್. ಇವರ ಜೀವನ ಚರಿತ್ರೆಯನ್ನು A.W. ಡೋಜರ್ ಬರೆದಿರುವ Wingspread ಎಂಬ ಒಂದು ಉತ್ತಮವಾದ ಪುಸ್ತಕದಲ್ಲಿ ಓದಬಹುದು. ರಕ್ಷಣೆ ಹೊಂದಿ ಸೇವೆ ಮಾಡಲು ಪ್ರಾರಂಭಿಸಿದ ಸಿಂಪ್ಸನ್ ನ ಜೀವನದಲ್ಲಿ, ಬೆಳವಣಿಗೆಯು ತುಂಬಾ ವೇಗವಾಗಿತ್ತು. ಆದರೆ ನಿರ್ದಿಷ್ಟವಾದ ಕಾಲ ಘಟ್ಟದಲ್ಲಿ ದೈಹಿಕ ದೌರ್ಬಲ್ಯದೊಂದಿಗೆ, ಆಧ್ಯಾತ್ಮಿಕ ಕತ್ತಲೆಯೊಂದು ಅವರ ಜೀವನದಲ್ಲಿ ಬಂತು. ನನ್ನ ದೇವರೇ! ನನ್ನ ದೇವರೇ! ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂಬ ಒಂದು ಕೂಗು ಅವರ ಮನದಾಳದಲ್ಲಿ ಮೂಡಿತ್ತು. ಆ ಪರಿಸ್ಥಿತಿಯಲ್ಲಿ ಪ್ರಾರ್ಥನೆ ಮತ್ತು ಸತ್ಯವೇದ ಓದುವಂತಹ ಯಾವ ಕಾರ್ಯವೂ ಅವರಿಗೆ ಸಹಾಯ ಮಾಡಲಿಲ್ಲ. ಈ ಖಿನ್ನತೆಯ ಕೆಸರಿನಲ್ಲಿ ಸಿಕ್ಕಿಬಿದ್ದ ಅವರು ಚೇತರಿಸಿಕೊಳ್ಳಲು ಹಲವು ದಿನಗಳು ಬೇಕಾಯಿತು.

 

ಹೀಗೆ ದೇವರ ಪ್ರಸನ್ನತೆ ಇಲ್ಲದೆ, ಒಂದು ವೇಳೆ ದೇವರು ಇಲ್ಲವೋ ಎಂದೆನಿಸುವ ಸಂದರ್ಭಗಳು ಕ್ರೈಸ್ತ ಜೀವನದ ಒಂದು ಭಾಗವೇ ಎಂದು A.W. ಡೋಸರ್ ಬರೆಯುತ್ತಾರೆ. ವಿಶೇಷವಾಗಿ ದೇವರನ್ನು ಮಿತಿ ಮೀರಿ ಪ್ರೀತಿಸಿ ಆತನಿಗಾಗಿ ಏನನ್ನಾದರೂ ಮಾಡುವವರ ಜೀವನದಲ್ಲಿ ಇದು ಸಹಜವೇ ಎಂದು ಹೇಳುತ್ತಾರೆ. ನಾವು ನಮ್ಮ ಭಾವನೆಗಳು ಮತ್ತು ಸಂದರ್ಭಗಳನ್ನು ಲೆಕ್ಕಿಸದೆ ದೇವರನ್ನೇ ನಂಬಿ ಒರಗಿಕೊಂಡಿರಲು ಅಧ್ಯಯನ ಮಾಡಲು ನಮಗೆ ಸಹಾಯ ಮಾಡುವ ಕ್ಷಣಗಳು ಇವೇ!

 

ಮನುಷ್ಯನಿಗೂ ಮತ್ತು ದೇವರಿಗೂ ನಡುವೆ ಇರುವ ಸಂಬಂಧವನ್ನು ಮತ್ತು ಅದರ ಸ್ವಭಾವವನ್ನು ಕೊಂಡಾಡುವ ಪುಸ್ತಕ, ಕೀರ್ತನೆ ಪುಸ್ತಕ, ಕೀರ್ತನೆ 16:11 ರಲ್ಲಿ, "ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ...ಶಾಶ್ವತಭಾಗ್ಯವಿದೆ" ಎಂದು ಅನುಭವದಿಂದ ಹೇಳಿದ ಅರಸನಾದ ದಾವೀದನು, ಕೀರ್ತನೆಗಳು 22:1 ರಲ್ಲಿ, ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ" ಎಂದು ಕೂಗಿದರು. ಸಭೆಯ ಇತಿಹಾಸವನ್ನು ಹಿಂತಿರುಗಿ ನೋಡಿದಾಗ, ಈ ಅನುಭವಗಳು ತಮ್ಮದೇ ಆದ ರೀತಿಯಲ್ಲಿವೆ ಎಂದು ಅನೇಕ ಕ್ರೈಸ್ತ ವ್ಯಕ್ತಿಗಳು ಸಾಕ್ಷಿ ನೀಡುತ್ತಾರೆ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಸಹ ಶಿಲುಬೆಯ ಮೇಲೆ ದೇವರ ಮುಖವು ಮರೆಯಾಗುವ ಈ ಘೋರವಾದ ಅನುಭವವನ್ನು ಅನುಭವಿಸಿದರು. ಕೀರ್ತನೆ 22:1 ರ ಮಾತುಗಳನ್ನು ಹೇಳಿ ಅವರೂ ಸಹ ಕೂಗಿದರು. ಆದ್ದರಿಂದ ಅವರಿಗೂ ಸಹ ನಮ್ಮ ಅನುಭವಗಳು ಅರ್ಥವಾಗುತ್ತದೆ.

 

ಪ್ರಿಯರೇ! ಇಂತಹ ಆಧ್ಯಾತ್ಮಿಕ ಕತ್ತಲೆ ನಮ್ಮ ಜೀವನದಲ್ಲಿ ಬಂದಾಗ ನಾವು ದೇವರನ್ನು ನಂಬಿ ಕುಳಿತಿರೋಣ. ಇತರ ವಿಶ್ವಾಸಿಗಳೊಂದಿಗೆ ಇರುವ ಐಕ್ಯತೆಯಲ್ಲಿ ದೇವರ ಮುಖದ ಬೆಳಕು ಶೀಘ್ರದಲ್ಲೇ ನಮ್ಮ ಮೇಲೆ ಪ್ರಕಾಶಿಸುತ್ತದೆ.

- J.ಸಂತೋಷ್

 

ಪ್ರಾರ್ಥನಾ ಅಂಶ:

ಕಚೇರಿ ಕೆಲಸಕ್ಕಾಗಿ ಹೆಚ್ಚಿನ ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş