Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.04.2022 (Kids Special)
Share:

By Village Missionary Movement

Sunday, 10-Apr-2022

ಧೈನಂದಿನ ಧ್ಯಾನ(Kannada) – 10.04.2022 (Kids Special)

 

Gift ಬೇಕೇ?

 

“ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ" - ಪ್ರಕಟನೆ 22:12

 

ಹಲೋ ಪುಟಾಣಿಗಳೇ! ಸಂಗೀತವನ್ನು ಇಷ್ಟಪಡದವರು ಯಾರೂ ಇರೋದಿಲ್ಲಾ ಅಲ್ವಾ? keyboard, drum-set, Gittar ಮುಂತಾದ ವಿವಿಧ ಸಂಗೀತ ವಾದ್ಯಗಳನ್ನು ನುಡಿಸಲು ನಿಮಗೂ ತುಂಬಾ ಇಷ್ಟ ತಾನೇ. ಕೆಲವರು ಅದನ್ನು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೀರ Very Good. ನಿಮ್ಮಂತೆಯೇ ರಾಜನ್ ಎಂಬ ತಮ್ಮನಿಗೆ keyboard ನುಡಿಸಲು ಆಸೆ. ಆದರೆ ಸಂಗೀತ ಉಪಕರಣಗಳನ್ನು ಖರೀದಿಸಲು ಅಥವಾ ತರಬೇತಿಗೆ ಹೋಗಲು ಮನೆಯಲ್ಲಿ ಸಾಕಷ್ಟು ಸೌಲಭ್ಯಗಳಿರಲಿಲ್ಲ.

 

ಒಂದು ದಿನ ರಾಜನ್ ತನ್ನ ತಂದೆಯೊಂದಿಗೆ ಅಂಗಡಿಗೆ ಹೋದನು. ಅಲ್ಲಿ ಎಲ್ಲಾ ಸಂಗೀತ ಉಪಕರಣಗಳನ್ನು ಮಾರುವ ಅಂಗಡಿಯತ್ತ ಆಸೆಯಿಂದ ನೋಡುತ್ತಿದ್ದನು. ಆಗ ಏನು ತಮ್ಮ ತುಂಬಾ ತುಂಬಾ ಯೋಚನೆ ಮಾಡ್ತಿದೀಯ! ಎಂದು ಅಂಗಡಿಯವರು ಕೇಳಿದರು. ಕೀಬೋರ್ಡ್ ನುಡಿಸಲು ತುಂಬಾ ಇಷ್ಟ. ಆದರೆ.... ಹೀಗೆ ಹೇಳುತ್ತಲೇ ಅಂಗಡಿಯವರು ನೀನು ಪ್ರತಿದಿನ ಸಂಜೆ ನಮ್ಮ ಮನೆಗೆ ಬಾ ನಾನು ಹೇಳಿಕೊಡುತ್ತೇನೆ ಎಂದು ಮನೆ ಅಡ್ರೆಸ್ ಕೊಟ್ಟರು. ಅದಕ್ಕೆ Fees-ಆಗಿ ರಾಜನ್ ಅಂಗಡಿಯವರ ಬಳಿ ನಾನು ಬೆಳಿಗ್ಗೆಯೇ ಅಂಗಡಿಗೆ ಬಂದು ಗುಡಿಸಿ ಒರೆಸಿ ಕ್ಲೀನ್ ಮಾಡಿಡುತ್ತೇನೆ ಎಂದನು. ಅವರು ಸರಿ ಎಂದು ಹೇಳಲು ರಾಜನ್ ಖುಷಿಯಿಂದ ಮನೆಗೆ ಹೋದನು.

 

ಮರುದಿನ ಬೆಳಿಗ್ಗೆ ಎದ್ದು ಕೀಗಳನ್ನು ತೆಗೆದುಕೊಂಡು ಅಂಗಡಿಯನ್ನು ಸ್ವಚ್ಛಗೊಳಿಸಿ ಅಚ್ಚುಕಟ್ಟಾಗಿ ಇಟ್ಟಿದ್ದನು. ಅಂಗಡಿಯವರು ಬಂದ ಕೂಡಲೇ ಶಾಲೆಗೆ ಹೊರಟು ಹೋಗುತ್ತಿದ್ದನು. ಒಂದು ದಿನ ಮುಂಜಾನೆ ಅಂಗಡಿಯವರು ಬೇಗ ಬಂದರು. ಮಧುರವಾದ ಹಾಡುಗಳ ರಾಗಗಳು ಗಾಳಿಯಲ್ಲಿ ತೇಲುತ್ತಾ ಬಂದಿತು. ಕೇಳಲು ಮಧುರವಾಗಿತ್ತು. ಇದನ್ನು ಯಾರು ನುಡಿಸುತ್ತಿದ್ದಾರೆಂದು ನೋಡಿದರೆ ರಾಜನ್. ಸುಂದರವಾಗಿ Keyboard ನುಡಿಸುತ್ತಿದ್ದನು! ಅಂಗಡಿಯವರು ಬಂದ ಕೂಡಲೇ ರಾಜನ್ ಭಯಪಟ್ಟು ಗಾಬರಿಯಾಗಿ ನಿಂತಿದ್ದನು. ನಿನಗೆ ಇದನ್ನೆಲ್ಲಾ ಇನ್ನೂ ನಾನು ಕಲಿಸಿಕೊಟ್ಟಿಲ್ಲವೇ ನೋಡು, ನಿನಗೆ ಏನು ಶಿಕ್ಷೆ ಕೊಡುತ್ತೇನೆ ಎಂದ ಕೂಡಲೇ ರಾಜನ್ ಅಳುತ್ತಾ ನಿಂತಿದ್ದನು. ಅವರು ನಗುತ್ತಾ ನಿನಗೆ ಯಾವ Keyboard ಬೇಕೋ ಅದನ್ನು ತೆಗೆದುಕೋ. ಅದೇ ನಾನು ನಿನಗೆ ಕೊಡುವ ಉಡುಗೊರೆ ಎಂದ ಕೂಡಲೇ ರಾಜನ್ ನ ಮುಖವು ನಕ್ಷತ್ರದಂತೆ ಹೊಳೆಯಿತು ತನಗೆ ಒಳ್ಳೆಯ ಸೌಕರ್ಯ ಅವಕಾಶ ಇಲ್ಲದೇ ಹೋದರೂ ತನ್ನ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಬಯಸಿದ ರಾಜನ್ ಗೆ ಬಹುಮಾನ ಸಿಕ್ಕಿಬಿಟ್ಟಿತು ಹಾಗೆ ತಾನೇ!

 

ಮುದ್ದು ಪುಟಾಣಿಗಳೇ! ನೀವೂ ಕೂಡ ಯೇಸಪ್ಪ ಕೊಟ್ಟ ತಲಾಂತುಗಳನ್ನು ಉಪಯೋಗಿಸಿ ಬೆಳೆಸಿಕೊಳ್ಳಬೇಕು. ಸಮಯವೂ ಇಲ್ಲ, ಸೌಲಭ್ಯವೂ ಇಲ್ಲ.... ಹಾಗೆಲ್ಲಾ ಹೇಳಬಾರದು. ತಲಾಂತುಗಳನ್ನು ಉಪಯೋಗಿಸುವಾಗ ಅದಕ್ಕೆ ತಕ್ಕ ಬಹುಮಾನವನ್ನು ಯೇಸಪ್ಪ ಖಂಡಿತವಾಗಿಯೂ ನೀಡುತ್ತಾರೆ. Ok.

- Sis. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al