By Village Missionary Movement
Saturday, 09-Apr-2022ಧೈನಂದಿನ ಧ್ಯಾನ(Kannada) – 09.04.2022
ಇಗೋ, ನಿನ್ನ ತಾಯಿ
"ತನ್ನ ತಾಯಿಯು... ನಿಂತಿರುವದನ್ನು ಯೇಸು ನೋಡಿ ತನ್ನ ತಾಯಿಗೆ--ಸ್ತ್ರೀಯೇ, ಇಗೋ, ನಿನ್ನ ಮಗನು ಅಂದನು." - ಯೋಹಾನ 19:26
ಯೇಸು ಶಿಲುಬೆಯ ಮೇಲೆ ನುಡಿದ ಮೂರನೆಯ ಮಾತು:
ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟಾಗ ಹೇಳಿದ ಪ್ರತಿಯೊಂದು ಪದಕ್ಕೂ ಹೆಚ್ಚಿನ ಅರ್ಥವಿದೆ. ಸಾಮಾನ್ಯವಾಗಿ ಮರಣದ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಜವಾಬ್ದಾರಿಯನ್ನು ಅರ್ಹರಿಗೆ ಹಸ್ತಾಂತರಿಸುತ್ತಾನೆ. ಅವನು ತಂದೆಯಾಗಿದ್ದರೆ ಇತರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಂಡತಿಗೆ ಅಥವಾ ಅವನಿಗೆ ಹೆಚ್ಚು ಮಕ್ಕಳಿದ್ದರೆ ಹಿರಿಯ ಮಗನಿಗೆ ಒಪ್ಪಿಸುತ್ತಾನೆ. ಅದೇ ರೀತಿಯಲ್ಲಿ, ನಮ್ಮ ಯೇಸು ಕ್ರಿಸ್ತನು ಗಂಡನಿಲ್ಲದ ತನ್ನ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಪ್ರೀತಿಯ ಶಿಷ್ಯನಾದ ಯೋಹಾನನಿಗೆ ವಹಿಸಿದರು. ತನ್ನ 33½ವರ್ಷಗಳ ಲೌಕಿಕ ಜೀವನದಲ್ಲಿ ತಂದೆ ತನಗೆ ಕೊಟ್ಟಿದ್ದನ್ನೆಲ್ಲಾ ಪೂರೈಸಿದರು. ಆ ಭೀಕರ ನೋವಿನ ನಡುವೆಯೂ ಕುಟುಂಬದಲ್ಲಿ ತನಗಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದನ್ನು ಕಾಣುತ್ತೇವೆ.
ಪ್ರಪಂಚದಲ್ಲಿ ಯಾರಿಗೂ ಸಿಗದ ಭಾಗ್ಯ ಮರಿಯಾಳಿಗೆ ಲಭಿಸಿತು. ಕರ್ತನಾದ ಯೇಸುವನ್ನು ತನ್ನ ಗರ್ಭದಲ್ಲಿ ಹೊತ್ತುಕೊಂಡು ಬರುವುದೇ ಒಂದು ದೊಡ್ಡ ಸೌಭಾಗ್ಯ! ಆದರೂ ನಿನ್ನ ಆತ್ಮವನ್ನೂ ಸಹ ಒಂದು ಕತ್ತಿಯು ತೆಗೆದುಕೊಳ್ಳುತ್ತದೆ ಎಂಬ ಪ್ರವಾದನೆಯು ನೆರವೇರುತ್ತಿರುವುದನ್ನು, ಯೇಸು ಶಿಲುಬೆಯಲ್ಲಿ ನೇತಾಡುತ್ತಿರುವುದನ್ನು ನೋಡಿ ತಡೆಯಲಾಗದೆ ಕಣ್ಣೀರಿಟ್ಟಳು. ಇನ್ನು ಮುಂದೆ ತನ್ನನ್ನು ಯಾರು ನೋಡಿಕೊಳ್ಳುತ್ತಾರೋ ಏನೋ ಎಂಬ ಆಲೋಚನೆ ಮರಿಯಳಿಗೆ ಇತ್ತೋ ಇಲ್ಲವೋ, ಆದರೆ ದುಃಖದ ನಡುವೆಯೂ ಯೇಸುಕ್ರಿಸ್ತನಿಗೆ ಆ ಆಲೋಚನೆ ಇತ್ತು. ಯೇಸುವನ್ನು ಶಿಲುಬೆಗೇರಿಸಿದಾಗ ಅನೇಕ ಶಿಷ್ಯರು ಓಡಿಹೋದರು. ಯೋಹಾನನು ಮಾತ್ರ ಮರಿಯಳ ಪಕ್ಕದಲ್ಲೇ ನಿಂತಿದ್ದನು. ತನ್ನ ಎದೆಯ ಮೇಲೆ ಒರಗಿಕೊಂಡಿದ್ದ ಯೋಹಾನನಿಗೆ ತನ್ನ ಹೃದಯದ ಭಾರವು ಅರ್ಥವಾಗುತ್ತದೆ, ಅವರೇ ಅರ್ಹರು ಎಂದು ಮರಿಯಳನ್ನು ಒಪ್ಪಿಸಿದರು. ತಂದೆ ತಾಯಿಯನ್ನು ಪರಾಮರ್ಶಿಸುವುದರಲ್ಲಿ ಜಗತ್ತಿಗೇ ಮೂಲ ಮಾದರಿ ಯೇಸುಕ್ರಿಸ್ತನೇ.
ಪ್ರಿಯರೇ! ಈ ಜವಾಬ್ದಾರಿ ನಮಗೂ ಉಂಟು. ಅದನ್ನು ಖಂಡಿತವಾಗಿಯೂ ನೆರವೇರಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮದುವೆ ಅಥವಾ ಕೆಲಸಕ್ಕಾಗಿ ದೂರದ ಸ್ಥಳಗಳಿಗೆ ಅಥವಾ ದೇಶಗಳಿಗೆ ಹೋಗುತ್ತಾರೆ. ತಂದೆ-ತಾಯಿಯನ್ನು ನೋಡಿಕೊಳ್ಳುವುದೇ ಒಂದು ಸೌಭಾಗ್ಯ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಕೆಲವರು ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಆಶೀರ್ವಾದದೊಂದಿಗೆ ಜೋಡನೆಯಾಗಿರುವ ಏಕೈಕ ಆಜ್ಞೆಯೆಂದರೆ, "ನಿನ್ನ ತಂದೆ ತಾಯಿಯನ್ನು ಸನ್ಮಾನಿಸು" ಎಂಬುದೇ! ನಾವು ಯೇಸುವಿನ ಮೂಲ ಮಾದರಿಯನ್ನು ಅನುಸರಿಸಿ ಆಶೀರ್ವಾದವಾದ ಸಂತತಿಯಾಗಿ ಈ ಲೋಕದಲ್ಲಿ ಜೀವಿಸೋಣ.
- Mrs. ಭುವನಾ ಧನಬಾಲನ್
ಪ್ರಾರ್ಥನಾ ಅಂಶ:
ಯೌವನಸ್ಥ ಹೆಣ್ಣುಮಕ್ಕಳಿಗಾಗಿ ಪ್ರತಿ ಭಾನುವಾರ ಸಂಜೆ 6 ರಿಂದ 6.30 ರವರೆಗೆ ಪ್ರಸಾರವಾಗುವ "ಕಣ್ಮಣಿಯೇ ಕೇಳ್" ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದೇವೆ. ಇದರ ಮೂಲಕ ದೇವರು ಅನೇಕ ಯೌವನಮಕ್ಕಳನ್ನು ಮುಟ್ಟುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482