Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.04.2022
Share:

By Village Missionary Movement

Friday, 08-Apr-2022

ಧೈನಂದಿನ ಧ್ಯಾನ(Kannada) – 08.04.2022

ಪರದೈಸಿಯಲ್ಲಿ ಪಾಲು

"ಅದಕ್ಕೆ ಯೇಸು - ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು" - ಲೂಕ 23:43

ಯೇಸು ಶಿಲುಬೆಯ ಮೇಲೆ ನುಡಿದ ಎರಡನೆಯ ಮಾತು:
ಕ್ರಿಯೆಗಳಿಂದಲ್ಲ, ಕೃಪೆಯಿಂದಲೇ ವಿಶ್ವಾಸವಿಟ್ಟು ರಕ್ಷಣೆ ಹೊಂದಲು ಸಾಧ್ಯ ಎಂಬುದಕ್ಕೆ ಸತ್ಯವೇದದಲ್ಲಿರುವ  ಸರಿಯಾದ ಉದಾಹರಣೆ ಯೇಸುವೊಂದಿಗೆ ಶಿಲುಬೆಗೇರಿಸಲ್ಪಟ್ಟ ಒಬ್ಬ ಕಳ್ಳ. ಅವನು ಯಾವ ಸಭೆಗೂ ಸೇರಿದವನಲ್ಲ, ಮತ್ತು ಯಾವ ಸೇವೆಯನ್ನೂ ಮಾಡಲಿಲ್ಲ. ಆದರೆ ಅವನ  ಜೀವನದ ಕೊನೆಯ ಗಳಿಗೆಯಲ್ಲಿ ಉಂಟಾದ “ನಂಬಿಕೆ” ಅವನು ರಕ್ಷಣೆ ಹೊಂದಲು ಪರಲೋಕಕ್ಕೆ ಹೋಗಲು ದಾರಿ ಮಾಡಿಕೊಟ್ಟಿತು.  ಅವನ ಆಧ್ಯಾತ್ಮಿಕ ಬೆಳವಣಿಗೆಯು ಕೆಲವೇ ಗಂಟೆಗಳಾಗಿದ್ದರೂ ಅದು ಅವನನ್ನು ಕ್ರಿಸ್ತನ ಕಡೆಗೆ ಕರೆದೊಯ್ಯಿತು ಮತ್ತು ಅವನನ್ನು ನರಕದಿಂದ ರಕ್ಷಿಸಿತು.

ಇವನೊಬ್ಬ ದುಷ್ಟನೇ, ಕೊಲೆಗಾರನೇ ಮತ್ತು ಮರಣದಂಡನೆಗೆ ಗುರಿಯಾದವನೇ, ಇವನನ್ನು ನೋಡಿದವರು "ಇನ್ನು ಇವನ ಕರುಣೆಗೆ ಸ್ಥಳವಿಲ್ಲ, ಕಾಲವು ಕಳೆದು ಹೋಯಿತು"  ಎಂದು ನೆನೆಸಿರಬಹುದು. ಆದರೆ ಯೇಸು ಕ್ರಿಸ್ತನು ಇವನ ಕೋರಿಕೆಗೆ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ.  ಇವನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ, ಅವನನ್ನು ಸಂಪೂರ್ಣವಾಗಿ ಕ್ಷಮಿಸುತ್ತಾರೆ.  ಪಾಪಗಳನ್ನು ಸಂಪೂರ್ಣವಾಗಿ ತೊಳೆದರು.  ಕರುಣೆಯಿಂದ ಸ್ವೀಕರಿಸಿದರು.  ಉಚಿತವಾಗಿ ನೀತಿವಂತನಾಗಿ ಮಾಡಿದರು. ತಾನು ಮರಣ ಹೊಂದುತ್ತಿರುವ ಸಮಯದಲ್ಲೂ ಸಹ,  ಕ್ರಿಸ್ತನು ಒಂದು ಪಾಪಿಗೆ ನಿತ್ಯ ಜೀವವನ್ನು ಖಾತರಿಪಡಿಸಿದರು.
 
ಈ ದೈನಂದಿನ ಧ್ಯಾನವನ್ನು ಓದುತ್ತಿರುವ ನೀವು ಯಾರಾಗಿದ್ದರೂ ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿರಿ.  ಯೇಸು ಎರಡು ಸಾವಿರ ವರ್ಷಗಳ ಹಿಂದೆ ಇದ್ದ ಹಾಗೆಯೇ ಇಂದೂ ಇದ್ದಾರೆ.  ನಿಮ್ಮ ಪಾಪಗಳು ತಲೆಯ ಕೂದಲುಗಳಿಗಿಂತ ದೊಡ್ಡದಾಗಿದ್ದರೂ ಏನು?  ನಿಮ್ಮೊಂದಿಗೆ ಕೆಟ್ಟ ಅಭ್ಯಾಸಗಳೂ ಬೆಳೆದರೆ ಏನು?  ಇವು ದುಃಖಕರವಾದದ್ದೇ.  ಆದರೂ ನೀವು ಇನ್ನೂ ಆತ್ಮವಿಶ್ವಾಸದಿಂದ ಇರಬಹುದು.  ಕ್ರಿಸ್ತನು ನಿಮ್ಮನ್ನು ಗುಣಪಡಿಸಲು ಸಾಧ್ಯ.  ಧೂಳಿನಿಂದ ನಿಮ್ಮನ್ನು ಎಬ್ಬಿಸಲೂ ಸಾಧ್ಯ. ಪರಲೋಕವು ನಿಮಗೆ ಮುಚ್ಚಲ್ಪಟ್ಟಿಲ್ಲ.  ನೀವು ತಾಳ್ಮೆಯಿಂದ ನಿಮ್ಮ ಆತ್ಮವನ್ನು ಆತನ ಕೈಗೆ ಒಪ್ಪಿಸಿದರೆ ಅವರು ನಿಮ್ಮನ್ನು ಸ್ವೀಕರಿಸುತ್ತಾರೆ.  ಅವರು ತುಂಬಾ ದಯೆ ಮತ್ತು ಕರಗುವಂತಹ ಮನಸ್ಸುಳ್ಳವರು.  ಈಗ ಯೇಸುವಿನ ಬಳಿಗೆ ಬನ್ನಿರಿ!  ನಿತ್ಯ ಜೀವವನ್ನು ಪಡೆದುಕೊಳ್ಳಿರಿ.
-    J. C. ರೇಲ್

ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳಲ್ಲಿ ಅನುಭವವಿರುವ ಅನೇಕ ಯೌವನಸ್ಥರನ್ನು ದೇವರು ನಮ್ಮೊಂದಿಗೆ ಸೇರಿಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al