By Village Missionary Movement
Tuesday, 05-Apr-2022ಧೈನಂದಿನ ಧ್ಯಾನ(Kannada) – 05.04.2022
ರಕ್ತದಲ್ಲಿ ಬರೆಯಲ್ಪಟ್ಟದ್ದು
"ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ" - ಗಲಾತ್ಯ 6:14
ಒಂದು ದೊಡ್ಡ ವಾಹನ ಅಪಘಾತದಲ್ಲಿ ಸಿಲುಕಿ ಅದರಲ್ಲಿದ್ದ ಜನರೆಲ್ಲಾ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದರು. ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳನ್ನು ಕರೆಸಲಾಯಿತು. ಅಪಘಾತಕ್ಕೀಡಾದ ಆ ವಾಹನದ ಸೀಟಿನ ಮೇಲೆ, ಬರೆದಿದ್ದ ಒಂದು ಸಂದೇಶವನ್ನು ನೋಡಿದರು. ಇದು ಅವರ ಕಣ್ಣಲ್ಲಿ ನೀರು ತರಿಸಿತು. ಆ ಅಪಘಾತದಲ್ಲಿ ಬಾಧಿಸಲ್ಪಟ್ಟ ಒಬ್ಬರು, ತಾನು ಸಾಯುತ್ತಿದ್ದೇನೆ ಎಂದು ಭಾವಿಸಿ ತನ್ನ ರಕ್ತವನ್ನು ಹೊರತೆಗೆದು ತನ್ನ ಮುಂದಿನ ಸೀಟಿನಲ್ಲಿ "ನಾನು ನನ್ನ ಹೆಂಡತಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದಿದ್ದರು. ಒಬ್ಬ ಮನುಷ್ಯನು ತನ್ನ ಕುಟುಂಬದ ಮೇಲೆ ಹೊಂದಿರುವ ಪ್ರೀತಿಯನ್ನು ನೋಡಿದರೇನೆ ಸೆಳೆಯಲ್ಪಡುತ್ತೇವೆ. ಯೇಸುಕ್ರಿಸ್ತನು ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ವ್ಯಕ್ತಪಡಿಸಲು ತನ್ನ ಸಂಪೂರ್ಣ ರಕ್ತವನ್ನೇ ಸುರಿಸಿದರೇ! ಎಂತಹ ದೊಡ್ಡ ತ್ಯಾಗ!
ಅಪೊ.ಪೌಲನು ಗಲಾತ್ಯದವರಿಗೆ ಪತ್ರಿಕೆಯನ್ನು ಬರೆದು ಮುಗಿಸುವಾಗ ಕ್ರಿಸ್ತನಿಗಾಗಿ ತನ್ನ ಜೀವನದಲ್ಲಿ ಪಟ್ಟ ಪಾಡುಗಳನ್ನು ಮರೆಯಾಗಿ ನೆನಪಿಸಿಕೊಂಡು ಬರೆದರು. ಪೌಲನು ತನ್ನ ಸುರಕ್ಷತೆಗಾಗಿ ಶಿಲುಬೆಯ ಮರಣವನ್ನು ಬದಲಿಸಿ ಬರೆಯಲು ಬಯಸಲಿಲ್ಲ. ತನ್ನ ಸ್ವಂತ ಜೀವನವನ್ನು ಶಿಲುಬೆಯ ಮಾರ್ಗಕ್ಕೆ ಜೋಡಿಸುವ ಮೂಲಕ, ದೇವರು ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಯೇಸುಕ್ರಿಸ್ತನು ಶಿಲುಬೆಯಲ್ಲಿ ಸುರಿಸಿದ ರಕ್ತದ ಮೂಲಕ ಬರೆಯಲಾಗಿದೆ ಎಂದು ಅವರು ಸ್ಪಷ್ಟವಾಗಿ ಮತ್ತು ನಿಸ್ಸಂದಿಗ್ಧವಾಗಿ ತಿಳಿಸಿದರು.
ಪ್ರಿಯರೇ! ನಮ್ಮ ಒಳ್ಳೆಯ ಕಾರ್ಯಗಳು ಮತ್ತು ನ್ಯಾಯವು ಎಲ್ಲವೂ ನಾಶವಾಗುವ ಚೂರುಗಳೆಂದು ನಮಗೆ ತಿಳಿದಿದೆ. ನಮ್ಮ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಕ್ರಿಸ್ತನು ಶಿಲುಬೆಯ ಮೇಲೆ ತನ್ನ ರಕ್ತವನ್ನು ಸುರಿಸಿದರು. ಆ ಕಲ್ವಾರಿಯ ದೃಶ್ಯವನ್ನು ನೋಡುತ್ತಾ, ಅವರ ಪ್ರೀತಿಯನ್ನು ಸಹ ಮನುಷ್ಯರಿಗೆ ವ್ಯಕ್ತಪಡಿಸುತ್ತಾ ಜೀವಿಸುವ ಜೀವನವನ್ನು ನಾವು ಜೀವಿಸಲು, ನಾವು ಅವರಿಗಾಗಿ ಅನುಭವಿಸುವ ಕಷ್ಟಗಳನ್ನು ಸಹಿಸಿಕೊಳ್ಳಲು ನಿರ್ಧರಿಸೋಣ. ಕ್ರಿಸ್ತನು ನಮ್ಮನ್ನು ಆಳಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಕ್ರಿಸ್ತನ ಶಿಲುಬೆಯನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ನಾವು ಹೆಮ್ಮೆಪಡದೇ ಇರೋಣ. ಆಮೆನ್.
- A. ಬ್ಯೂಲ
ಪ್ರಾರ್ಥನಾ ಅಂಶ:
ಸತ್ಯಂ ಟಿವಿಯಲ್ಲಿ ಪ್ರಸಾರವಾಗುವ ನಮ್ಮ ಕಾರ್ಯಕ್ರಮದ ಮೂಲಕ ಅನೇಕರು ಕ್ರಿಸ್ತನಿಗಾಗಿ ವೈರಾಗ್ಯದಿಂದ ಕಾರ್ಯ ಮಾಡಲು ಎದ್ದೇಳುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482