By Village Missionary Movement
Sunday, 03-Apr-2022ಧೈನಂದಿನ ಧ್ಯಾನ(Kannada) – 04.04.2022
ಒಂದು ಲೋಟ ಹಾಲು
"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;..." - ಮಾರ್ಕನು 14: 8
ಮೇಲೆ ಕೊಡಲ್ಪಟ್ಟ ಸತ್ಯವೇದ ಭಾಗದಲ್ಲಿ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಹೊಯಿದ ಘಟನೆಯನ್ನು ಓದುತ್ತೇವೆ. ಅವಳು ಹಾಗೆ ಮಾಡಿದಾಗ, ಅವಳ ಸುತ್ತಲಿನ ಜನರು ಅವಳ ಬಗ್ಗೆ ಗೊಣಗಲು ಪ್ರಾರಂಭಿಸಿದರು. ಆಗ ಯೇಸು, ಅವಳು ನನಗೆ "ಒಳ್ಳೇದನ್ನು" ಮಾಡಿದ್ದಾಳೆ ಎಂದು ಹೊಗಳುತ್ತಾರೆ. ಬಹುಬೆಲೆಯುಳ್ಳ ತೈಲ. ಅವಳು ಯೇಸುವನ್ನು ಅಮೂಲ್ಯವೆಂದು ಕಂಡು, ಆತನ ಮೇಲಿನ ಪ್ರೀತಿಯಿಂದ ಅದನ್ನು ಮಾಡಿದಳು.
ಇಂದು ನಾವು ನಮ್ಮ ಜೀವನವನ್ನು ಸ್ವಲ್ಪ ಆಳವಾಗಿ ಶೋಧಿಸಿ ನೋಡೋಣ. ದೇವರು ನಮ್ಮ ಬಗ್ಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಹೇಳುವ ಮಟ್ಟಿಗೆ ಇದ್ದೇವಾ? ನಮ್ಮ ಕೈಲಾದದ್ದನ್ನು ದೇವರಿಗಾಗಿ ಮಾಡುತ್ತಿದ್ದೇವಾ? ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ. ಬಹುಶಃ ನೀವು ನನ್ನಿಂದ ಏನು ಮಾಡಲು ಸಾಧ್ಯ ಎಂದು ಭಾವಿಸಬಹುದು. ಆದರೆ ಕೆಲವು ಒಳ್ಳೆಯ ಕಾರ್ಯಗಳು
ಪ್ರತಿಯೊಬ್ಬರೂ ಮಾಡುವಂತಿವೆ. ಉದಾಹರಣೆಗೆ, ನೀವು ಹಸಿದವರಿಗೆ ಆಹಾರವನ್ನು ನೀಡಬಹುದು, ಬೆತ್ತಲೆಯವರಿಗೆ ಸರಳವಾದ ಬಟ್ಟೆಗಳನ್ನು ತೆಗೆದುಕೊಡಬಹುದು, ಟ್ಯೂಷನ್ ತೆಗೆದುಕೊಳ್ಳಬಹುದು, ರೋಗಿಗಳನ್ನು ಭೇಟಿ ಮಾಡಬಹುದು ಮತ್ತು ಅವರಿಗೆ ಸಾಂತ್ವನ ನೀಡಬಹುದು. ಇಂತಹ ಅನೇಕ ಇವೆ.
ಒಮ್ಮೆ ರಸ್ತೆಯಲ್ಲಿ ತುಂಬಾ ದಣಿದಿದ್ದ ಒಬ್ಬ ಹುಡುಗನಿಗೆ ತಾಯಿಯೊಬ್ಬರು ಒಂದು ಲೋಟ ಹಾಲು ಕೊಟ್ಟರಂತೆ. ಕೆಲವು ದಿನಗಳ ನಂತರ ಆ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದೊಂದು ದೊಡ್ಡ ಖಾಸಗಿ ಆಸ್ಪತ್ರೆ, ಬಹಳ ದುಡ್ಡು ಖರ್ಚಾಗುತ್ತದೆ ಎಂದು ತಾಯಿ ಅಂದುಕೊಂಡಿದ್ದರು. ಅಂತಿಮ ದಿನದ ಚಿಕಿತ್ಸೆಯ ನಂತರ ಬಿಲ್ ಬಂದಿತು. ಅದರಲ್ಲಿ ಒಟ್ಟು ಎಂಬ ಸ್ಥಳದಲ್ಲಿ ಒಂದು ಲೋಟ ಹಾಲು ಎಂದು ಬರೆದಿತ್ತು. ನಂತರವೇ ಅವರಿಗೆ ಗೊತ್ತಾಯಿತು. ಆ ಆಸ್ಪತ್ರೆಯ ವೈದ್ಯರು ಈಕೆ ಒಂದು ಲೋಟ ಹಾಲು ಕೊಟ್ಟ ಹುಡುಗ ಎಂದು.
ಹೌದು ಪ್ರಿಯರೇ! ನಾವು ಅಳೆಯುವ ಪ್ರಕಾರವೇ ದೇವರು ಖಂಡಿತವಾಗಿಯೂ ನಮಗೆ ಮತ್ತೆ ಅಳೆದುಕೊಡುತ್ತಾರೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡೋಣ! ನಮ್ಮ ಕೈಲಾದಷ್ಟು ಮಾಡೋಣ!
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
10ನೇ ಮತ್ತು 12ನೇ ತರಗತಿ ಓದುತ್ತಿರುವ ಮಿಷನರಿಗಳ ಮಕ್ಕಳು, ಅನಾಥಾಶ್ರಮದ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಲೆಂದು ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482