Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.04.2022 (Kids Special)
Share:

By Village Missionary Movement

Sunday, 03-Apr-2022

ಧೈನಂದಿನ ಧ್ಯಾನ(Kannada) – 03.04.2022 (Kids Special)

ಚಿಂತಿಸಬೇಡ

“...ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" - ಮತ್ತಾಯ 6:33

Hello ಪುಟಾಣಿಗಳೇ!  How are you?  ನಿಮಗೆ ಸಾಕುಪ್ರಾಣಿಗಳನ್ನು ಬೆಳೆಸೋಕೆ ತುಂಬಾ ಇಷ್ಟಾನಾ? ಯಾವ ಪ್ರಾಣಿಗಳನ್ನೆಲ್ಲಾ ಸಾಕುತ್ತಿದ್ದೀರಾ ಹೇಳಿ ನೋಡೋಣ.  ನಾಯಿ, ಬೆಕ್ಕು, ಗಿಳಿ, ಮೇಕೆ ಹೀಗೆ ಹೇಳುತ್ತಲೇ ಇರುತ್ತೀರಲ್ಲಾ?

ನಿಮ್ಮಂತೆಯೇ ರೋಸಿ ಎಂಬ ಅಕ್ಕಾ ಕೂಡ ಮನೆಯಲ್ಲಿ ಬೆಕ್ಕನ್ನು ಸಾಕುತ್ತಿದ್ದರು.  ಅದಕ್ಕೆ ಪ್ರತಿದಿನ ಹಾಲು ಮತ್ತು ಮೀನು ಹೀಗೆ ಅದಕ್ಕೆ ಇಷ್ಟವಾದದ್ದನ್ನೆಲ್ಲಾ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.  ಇದ್ದಕ್ಕಿದ್ದಂತೆ ಒಂದು ದಿನ ಬೆಕ್ಕು ಕಣ್ಮರೆಯಾಯಿತು.

ಎಲ್ಲೆಲ್ಲಿ ಹುಡುಕಿದರೂ ಸಿಗಲಿಲ್ಲ.  ತುಂಬಾ ಚಿಂತಿತರಾಗಿದ್ದರು.  ಕೆಲವು ದಿನಗಳ ನಂತರ ಅನಿರೀಕ್ಷಿತ ಸಮಯದಲ್ಲಿ ಬೆಕ್ಕು ರೋಸಿ ಅಕ್ಕನ ಮನೆಗೆ ಬಂತು.  ಅದನ್ನು ನೋಡಿ ತುಂಬಾ ಸಂತೋಷಪಟ್ಟರು. ನಂತರ ಆ ಬೆಕ್ಕಿಗೆ ಇಷ್ಟವಾದ ಮೀನನ್ನು ಕೊಟ್ಟರು ಆದರೆ ಆ ಬೆಕ್ಕು ಅದನ್ನು ತಿನ್ನದೆ ಬಾಯಲ್ಲಿಟ್ಟುಕೊಂಡು ಹೋಯಿತು.
ನಂತರ ಆ ಬೆಕ್ಕನ್ನು ಹಿಂಬಾಲಿಸಿ ಹೋಗಿ ನೋಡಿದರೆ .... ಅದ್ಭುತವಾದ ದೃಶ್ಯ! ಏನಿರಬಹುದು ಅಂದುಕೊಳ್ಳುತ್ತೀರ?  ಅದರ ಮೂರು ಬೆಕ್ಕಿನ ಮರಿಗಳಿಗೆ ಮೀನನ್ನು ತನ್ನ ಹಲ್ಲುಗಳಿಂದ ಕಚ್ಚಿ ಮೂರು ಪೀಸ್ ಗಳಾಗಿ ಕತ್ತರಿಸಿ ಕೊಟ್ಟಿತು.  ಯೇಸಪ್ಪ ಆ ಬೆಕ್ಕಿಗೆ ಎಷ್ಟು ಜ್ಞಾನವನ್ನು ಕೊಟ್ಟಿದ್ದಾರೆಂದು ರೋಸಿ ಅಕ್ಕ ಆಶ್ಚರ್ಯಚಕಿತರಾದರು.  ಆ ಬೆಕ್ಕಿಗೆ ತನ್ನ ಮರಿಗಳಿಗೆ ಎಲ್ಲಿ ಆಹಾರ ಸಿಗುತ್ತದೆ ನಾವು ಹೇಗೆ ತಿನ್ನುತ್ತೇವೆ ಎಂಬುದರ ಬಗ್ಗೆ ಚಿಂತೆಯೇ ಇಲ್ಲ.  ನೋಡುದ್ರಾ ಪುಟಾಣಿಗಳಾ.

ನೀವು ಸಹ ಈ ಲೋಕದಲ್ಲಿ ಹುಟ್ಟುವ ಮೊದಲೇ ನಿಮಗಾಗಿ ಒಂದು ಸುಂದರವಾದ ಯೋಜನೆಯನ್ನು ಯೇಸಪ್ಪಾ ಇಟ್ಟಿದ್ದಾರೆ.  ನಿಮ್ಮ ಅಗತ್ಯಗಳನ್ನೆಲ್ಲಾ ತಿಳಿದಿದ್ದಾರೆ.  ಊಟವಿಲ್ಲ, ಒಳ್ಳೆಯ ಡ್ರೆಸ್ ಕೂಡ ಇಲ್ಲ, ಭವಿಷ್ಯ ಏನಾಗಬಹುದೋ ಎಂದು ಚಿಂತಿಸಬೇಕಾಗಿಲ್ಲ.

ನಾನು ಅಂದುಕೊಂಡಿದ್ದು ನಡೆಯಲಿಲ್ಲವೇ ಎಂದು Feel ಮಾಡುವ ಅಗತ್ಯವೂ ಇಲ್ಲ.  ನೀವು ಮಾಡಬೇಕಾದದ್ದೆಲ್ಲಾ ಒಂದೇ ಮೊದಲು ದೇವರನ್ನು ಹುಡುಕಬೇಕು.  ಪ್ರತಿದಿನ ಅವರೊಂದಿಗೆ ಮಾತನಾಡಬೇಕು. ಆಗ ನಿಮ್ಮ ಎಲ್ಲಾ ಅಗತ್ಯಗಳನ್ನು ಅವರು ನೋಡಿಕೊಳ್ಳುತ್ತಾರೆ.  ಯೇಸಪ್ಪನನ್ನು ನೀವು ಹುಡುಕಿದರೆ, ಅಗತ್ಯವಾದದ್ದೆಲ್ಲಾ ನಿಮ್ಮನ್ನು ಹುಡುಕಿ ಬರುತ್ತದೆ Ok ತಾನೇ!
-    Mrs.  ಗ್ರೇಸ್ ಸುರೇಶ್ ಕುಮಾರ್

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş