Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2022
Share:

By Village Missionary Movement

Friday, 01-Apr-2022

ಧೈನಂದಿನ ಧ್ಯಾನ(Kannada) – 01.04.2022

ಕ್ರಿಸ್ತನ ಪಾಡುಗಳಲ್ಲಿ ದೇವರ ಪ್ರೀತಿ

"ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು;..." - ಯೋಹಾನ 3:16

1963 ರಲ್ಲಿ, ಯುಎಸ್ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆಗೀಡಾದರು. ನಂತರ ಅವರ ಸಹೋದರ ರಾಬರ್ಟ್ ಕೆನಡಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರು.  ಒಂದು ದಿನ ಅವರು ಚುನಾವಣಾ ಕೂಟವೊಂದರಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೂ ಗುಂಡು ಹಾರಿಸಿದರು.  ಅವರು ರಕ್ತದ ಪ್ರವಾಹದಲ್ಲಿ ಸಂಕಟದಿಂದ ಮಿಡಿಯುತ್ತಿದ್ದರು.  ಅವರ ಕಣ್ಣುಗಳು ಮುಚ್ಚಲ್ಪಟ್ಟಿದ್ದವು.  ಅಂಥಾ ಸಮಯದಲ್ಲೂ ಅವರನ್ನು ಸುತ್ತುವರೆದಿದ್ದ ಸ್ನೇಹಿತರನ್ನು ಮುಟ್ಟಿ ನೋಡಿ ನೀವು ಸುರಕ್ಷಿತವಾಗಿದ್ದೀರಾ?  ಎಂದು ಕೇಳಿದರಂತೆ.  ಎಷ್ಟು ಕಾಳಜಿ ನೋಡಿ.  ಕೆಲವೇ ನಿಮಿಷಗಳಲ್ಲಿ ಅವರೂ ಸತ್ತುಹೋದರು. ಲೋಕದ ಮನುಷ್ಯನೇ ಇಷ್ಟು ಪ್ರೀತಿ ತೋರಿಸುವುದಾದರೆ, ನಿಮ್ಮನ್ನೂ ನನ್ನನ್ನು ಉಂಟುಮಾಡಿದ, ಆಕಾಶ ಭೂಮಿಯನ್ನು ಸೃಷ್ಟಿಸಿದ ದೇವರ ಪ್ರೀತಿ ಎಷ್ಟು ದೊಡ್ಡದು ಎಂಬುದನ್ನು ತೋರಿಸುವುದೇ ಯೇಸುಕ್ರಿಸ್ತನು ಶಿಲುಬೆಯಲ್ಲಿ ಪಟ್ಟ ಪಾಡುಗಳು! ಯೇಸು ಕ್ರಿಸ್ತನು ಅನುಭವಿಸಿದ ಕಷ್ಟಗಳ ಬಗ್ಗೆ ನಾವು ಸ್ವಲ್ಪ ಯೋಚಿಸಿ ನೋಡುವುದಾದರೆ, ಆತನು ನಮಗಾಗಿ ಚಾಟಿಯಿಂದ ಹೊಡೆಯಲು ತನ್ನನ್ನು ಒಪ್ಪಿಸಿಕೊಟ್ಟರು.  ರೋಮನ್ನರು ಶಿಕ್ಷೆಗೆ ಬಳಸುತ್ತಿದ್ದ ಚಾಟಿಯ ತುದಿಗೆ ಮೊಳೆ ಮತ್ತು ಸಣ್ಣ ಕಬ್ಬಿಣದ ತುಂಡನ್ನು ಜೋಡಿಸಲಾಗಿತ್ತು.  ಪ್ರತಿಯೊಂದು ಏಟಿನಲ್ಲಿ ಮಾಂಸವು ಕಿತ್ತು ಹೊರಬರುತ್ತಿತ್ತು.  ಅವರ ಬೆನ್ನು ಉಳುಮೆ ಮಾಡಿದ ಭೂಮಿಯಂತಾಯಿತು.  ಮುಳ್ಳಿನ ಕಿರೀಟವನ್ನು ತಲೆಯ ಮೇಲೆ ಇಟ್ಟು ಹೊಡೆದರು.  ತಲೆಯ ಮೇಲೆ ಚೂಪಾದ ಮುಳ್ಳುಗಳಿಂದ ಹೆಣೆದ ಮುಳ್ಳಿನ ಕಿರೀಟ ಚಿತ್ರಹಿಂಸೆಯ ಪರಮಾವಧಿಯನ್ನು ತೋರಿಸಿತು.  ಯೇಸುಕ್ರಿಸ್ತನು ನೆತ್ತಿಯಿಂದ ಪಾದದವರೆಗೆ ಗಾಯಗೊಂಡರು.

ಪ್ರಿಯರೇ!  ಪಾಪ, ಶಾಪ ಮತ್ತು ಅನಾರೋಗ್ಯದಿಂದ ನಾವು ರಕ್ಷಿಸಲ್ಪಡುವಂತೆ ಆತನು ಶಿಲುಬೆಯಲ್ಲಿ ನಮಗಾಗಿ ತನ್ನನ್ನು ಒಪ್ಪಿಸಿಕೊಟ್ಟರು.  ಯೇಸುಕ್ರಿಸ್ತನ ಎಲ್ಲಾ ನೋವುಗಳಿಗೆ ಒಂದೇ ಕಾರಣವೆಂದರೆ ತಂದೆಯಾದ ದೇವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಮಾತ್ರವೇ!  ಯೇಸುಕ್ರಿಸ್ತನ ಪಾಡುಗಳ ಮುಂದೆ ನಮ್ಮ ಎಲ್ಲಾ ನೋವುಗಳು ತುಂಬಾ ಸಣ್ಣದೇ.  ಯೇಸು ಕ್ರಿಸ್ತನು ದುಃಖವನ್ನು ಸಹಿಸಿಕೊಂಡಿದ್ದರಿಂದ ನಾವು ತಂದೆಯ ಪ್ರೀತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.  ಅದೇ ರೀತಿಯಲ್ಲಿ ನಮಗೆ ನಮ್ಮ ಕುಟುಂಬದಿಂದಲೋ, ಸಂಬಂಧಿಕರಿಂದಲೋ ಅಥವಾ ಸ್ನೇಹಿತರಿಂದಲೋ ತೊಂದರೆಗಳು ಬರುವಾಗ, ನಾವು ಸಹ ಅವುಗಳನ್ನು ಸಹಿಸಿಕೊಂಡರೆ, ಅದರ ಮೂಲಕ ಅವರೆಲ್ಲರೂ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುತ್ತಾರೆ.  ಕಷ್ಟಗಳನ್ನು ಸಹಿಸಿಕೊಂಡು ಜೀವಿಸಲು ನಮ್ಮನ್ನು ಸಮರ್ಪಿಸೋಣ. ದೇವರ ಪ್ರೀತಿಯನ್ನು ತಿಳಿಸೋಣ!
-    Bro.  ಶಿವ

ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş