Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.03.2022
Share:

By Village Missionary Movement

Tuesday, 29-Mar-2022

ಧೈನಂದಿನ ಧ್ಯಾನ(Kannada) – 29.03.2022

ದೃಢವಾದ ಅಸ್ತಿವಾರ ಕ್ರಿಸ್ತನೇ

"ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ." - ಎಫೆಸದವರಿಗೆ 2:21

ಇಟಲಿಯಲ್ಲಿ 200 ವರ್ಷಗಳ ಹಿಂದೆ ನಿರ್ಮಿಸಲಾದ ಪೈಸಾದ ಲೀನಿಂಗ್ ಟವರ್, ಅದು ಕಟ್ಟಿ ಪೂರ್ಣಗೊಳ್ಳುವ ಮೊದಲೇ ವಾಲಲು ಪ್ರಾರಂಭಿಸಿತು.  ಇದಕ್ಕೆ ಕಾರಣ ಜೌಗು ಪ್ರದೇಶದಲ್ಲಿ ನಿರ್ಮಿಸಿ ಅಲ್ಲಿ ಎರಡು ನದಿಗಳು ಹರಿದು ನೀರು ಕೊರೆದು ಮರಳಿಗೆ ತಳಪಾಯ ಹಾಕಿರುವುದೇ!  ಆದ್ದರಿಂದ ಮೊದಲ ಮೂರು ಮಹಡಿಗಳನ್ನು ಅನಿರ್ದಿಷ್ಟವಾಗಿ ನಿರ್ಮಿಸಿದ ತಕ್ಷಣ ಗೋಪುರವು ವಾಲಲು ಪ್ರಾರಂಭಿಸಿತು.  ಅಲ್ಲದೆ, ಅಡಿಪಾಯ ಕೇವಲ ಹತ್ತು ಅಡಿ ಆಳ!  ಸ್ವಲ್ಪ ವಾಲಿರುವ ಗೋಪುರವನ್ನು ಸರಿಪಡಿಸದಿದ್ದರೆ ಮುಂದೊಂದು ದಿನ ಸಂಪೂರ್ಣ ವಾಲುವುದು ಖಚಿತ.  ಒಂದು ಕಟ್ಟಡದ ಸ್ಥಿರತೆಯು ಅದರ ಅಡಿಪಾಯವನ್ನು ಅವಲಂಬಿಸಿರುತ್ತದೆ.  ಇದಕ್ಕಿಂತ ಎತ್ತರದ ಕಟ್ಟಡಗಳು ಮತ್ತು ಗೋಪುರಗಳು ಎಂದಿಗೂ ವಾಲುವುದಿಲ್ಲ.  ಏಕೆಂದರೆ ಇವುಗಳ ತಳಹದಿ ಗಟ್ಟಿಯಾಗಿಯು ಮತ್ತು ಆಳವಾಗಿಯು ಇರುವುದರಿಂದಲೇ!

ಯೇಸು ಕ್ರಿಸ್ತನು ಒಂದು ಸಾಮ್ಯವನ್ನು ಹೇಳಿದರು.  ಅವರು ಹೇಳುವ ಮಾತನ್ನು ಕೇಳಿ ಅದನ್ನು ಮಾಡುವವನು ಕ್ರಿಸ್ತನೆಂಬ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿಕೊಳ್ಳುತ್ತಾನೆ.  ಆಗ ಎಷ್ಟೇ ಬಿರುಗಾಳಿ, ಎಷ್ಟೇ ಸಮಸ್ಯೆ, ಸಂಕಟ ಬಂದರೂ ಮನೆ ನಿಂತಲ್ಲೇ ನಿಲ್ಲುತ್ತದೆ.  ಅದು ಓರೆಯಾಗುವುದಿಲ್ಲ.  ಅಡಿಪಾಯದ ಮೇಲೆ ಹಾಕಿರುವುದರಿಂದ ಅದು ಕದಲುವುದಿಲ್ಲ.  ನಮ್ಮ ಹೃದಯವಾಗಿರುವ ಕರ್ತನ ಆಲಯವು ಕರ್ತನ ಮನೆಯಾಗಿ ಸುಂದರವಾದ ಮನೆಯಾಗಬೇಕಾದರೆ, ಅಪೊಸ್ತಲರ ಉಪದೇಶದಲ್ಲಿ ನೆಲೆಗೊಂಡು ಬಂಡೆಯಾಗಿರುವ ಕ್ರಿಸ್ತನೆಂಬ ಅಡಿಪಾಯದ ಮೇಲೆ ಅದನ್ನು ನಿರ್ಮಿಸಿರಬೇಕು.  ಅವರ ಮೇಲೆ ನಿರ್ಮಿಸಿದ ಮನೆ ಶಾಶ್ವತವಾಗಿ ಉಳಿಯುತ್ತದೆ. ಉಳಿದವುಗಳು ಬಿದ್ದು ನಾಶವಾಗುತ್ತದೆ.
  
ಪ್ರಿಯರೇ!  ಹಣದ ಮೇಲೆ, ಸೌಂದರ್ಯದ ಮೇಲೆ, ಸಂಬಂಧಗಳ ಮೇಲೆ, ಸ್ನೇಹಿತರ ಮೇಲೆ ನಿರ್ಮಿಸಲಾದ ಮನೆಗಳು ಬಿರುಗಾಳಿ ಅಥವಾ ಬಲವಾದ ಗಾಳಿ ಬೀಸಿದಾಗ ಕೆಲವು ದಿನಗಳಲ್ಲೇ ಕುಸಿದು ಬೀಳುತ್ತವೆ.  ಕ್ರಿಸ್ತನೇ ನಮ್ಮ ಜೀವನದ ಅಡಿಪಾಯವಾಗಿರಲಿ.  ಬೇರೆ ಯಾವ ಅಡಿಪಾಯವೂ ದೃಢವಾದದ್ದಲ್ಲ.  ಅವರನ್ನೇ ಅಸ್ತಿವಾರವಾಗಿಟ್ಟುಕೊಂಡು ಕಟ್ಟಲಾಗುವ ಮನೆ ಶಾಶ್ವತವಾಗಿ ಉಳಿಯುತ್ತದೆ.  ನಮ್ಮ ಪ್ರತಿಯೊಂದು ಕುಟುಂಬಗಳೂ ಹಾಗೆಯೇ  ಕಟ್ಟಲ್ಪಟ್ಟಿರಲಿ.  ಸೈತಾನನು ಅವರನ್ನು ಉರುಳಿಸುವ ಮಾರ್ಗವನ್ನು ಹುಡುಕುತ್ತಾ ಬಂದರೂ ಅದು ಕುಸಿದು ಬೀಳುವುದಿಲ್ಲ. ಕದಲದೇ ನಿಲ್ಲುತ್ತದೆ. ಹಾಗೆಯೇ ನಂಬಿಕೆಯುಳ್ಳ ದೇವರ ಮೇಲೆ ಕಟ್ಟಲ್ಪಟ್ಟ ಜೀವನವಾಗಿ ಕದಲಿಸಲ್ಪಡಲಾರದಂತೆ ನಮ್ಮ ಜೀವನವೂ ಸಹ ಇರಲಿ.
-    Bro.  ಹನೀಶ್ ಸಮುವೇಲ್

ಪ್ರಾರ್ಥನಾ ಅಂಶ:
ನಮ್ಮ ಸೇವೆಯಲ್ಲಿರುವ 790 ಸೇವಕರ ಸ್ವಸ್ಥತೆ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş