Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.03.2022
Share:

By Village Missionary Movement

Monday, 28-Mar-2022

ಧೈನಂದಿನ ಧ್ಯಾನ(Kannada) – 28.03.2022

ಕ್ರಿಸ್ತನ ಸ್ನೇಹಿತರಾಗಲು ಬಯಸುವಿರಾ?
    
''…ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ…‘’ - ಯೋಹಾನ 15:15

ಕಾಡಿನಿಂದ ಒಬ್ಬ ವ್ಯಕ್ತಿಯ ಅಭಯಸ್ವರ ಕೇಳಿಸಿತು.  "ನನ್ನನ್ನು ಉಳಿಸಿ, ನನ್ನನ್ನು ಉಳಿಸಿ. ನನ್ನನ್ನು ಈ ಗುಂಡಿಯಿಂದ ಮೇಲೆತ್ತಲು ಯಾರೂ ಇಲ್ಲವೇ?  ಇದರಲ್ಲೇ ನಾನು ಸಾಯಬೇಕಾ?'' ಎಂದು ಬೇಡುವ ಶಬ್ದವು ನಾಲ್ಕು ದಿಕ್ಕಿನಲ್ಲೂ ಪ್ರತಿಧ್ವನಿಸಿತು.  ಆ ದಾರಿಯಲ್ಲಿ ಬಂದ ಒಬ್ಬ ಒಳ್ಳೆಯ ಮನುಷ್ಯ ಅವನ ಅಳುವಿನ ಸದ್ದು ಕೇಳಿ ಪ್ರಾಣವನ್ನೂ ಲೆಕ್ಕಿಸದೆ ಪಾತಾಳದಿಂದ ಆತನನ್ನು ಮೇಲೆತ್ತುತ್ತಾನೆ.  ಅಂದಿನಿಂದ ಅವರಿಬ್ಬರೂ ಸ್ನೇಹಿತರಾದರು.
      
ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡಿಕೊಳ್ಳುತ್ತಿದ್ದರು.  ಆದರೂ ಹಳ್ಳದಿಂದ ಮೇಲೆತ್ತಲ್ಪಟ್ಟ ವ್ಯಕ್ತಿ ಸಹಾಯಕನೊಂದಿಗಿನ ಸ್ನೇಹವನ್ನು ಪ್ರಶಂಸಿಸಲು ಮುಂದುವರಿಸಲು ಸಾಧ್ಯವಾಗಲಿಲ್ಲ.  ಏಕೆಂದರೆ ಅವನ ಆಲೋಚನೆಗಳು, ಕಾರ್ಯಗಳು ಮತ್ತು ಮಾತುಗಳು ಆ ಒಳ್ಳೆಯ ಮನುಷ್ಯನ ಕಾರ್ಯಗಳಿಗೆ ಹೊಂದಿಕೆಯಾಗಲಿಲ್ಲ.  ಹೀಗಾಗಿ ಆ ಮನುಷ್ಯ ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡ.  ಪರಿಶುದ್ದ ಗ್ರಂಥದಲ್ಲಿ, ಅರಸನಾದ ಸೌಲನು ಪ್ರವಾದಿಯಾದ ಸಮುವೇಲನೊಂದಿಗೆ ಉತ್ತಮ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.  ಕಾರಣವೇನೆಂದರೆ, ಸಮುವೇಲನ ಹೃದಯವು ದೇವರಿಗೆ ವಿಧೇಯವಾಗಿತ್ತು ಮತ್ತು ಸೌಲನ ಕಾರ್ಯಗಳು ಮನುಷ್ಯರಿಗೆ ಇಷ್ಟವಾಗಿದ್ದವು.  ಆದ್ದರಿಂದ ಪ್ರವಾದಿ ಸಮುವೇಲನು ಸೌಲನನ್ನು ತೊರೆದನು.
   
ಹೌದು, ಪ್ರಿಯರೇ!  ಒಳ್ಳೆಯ ಸ್ನೇಹಿತರು ಇರಬೇಕಾದರೆ ಇಬ್ಬರ ಹೃದಯವೂ ಒಂದೇ ಆಗಿರಬೇಕು.  ಇಲ್ಲದಿದ್ದರೆ ಆ ಒಗ್ಗಟ್ಟು ಉಳಿಯುವುದು ಅನುಮಾನ.  ನಾವು ಸಹ ಪಾಪ, ದುಷ್ಟತನ, ಅನಾರೋಗ್ಯ ಮತ್ತು ಸೈತಾನನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ.  ನಾವು ಸ್ವಾತಂತ್ರ್ಯವಿಲ್ಲದೆ, ಶಾಂತಿಯಿಲ್ಲದೆ ನರಳುತ್ತಿದ್ದೆವು.  ತನ್ನ ಪ್ರಾಣವನ್ನೂ ಲೆಕ್ಕಿಸದ ಯೇಸುಕ್ರಿಸ್ತನ ಶಿಲುಬೆಯ ಮರಣದಿಂದ, ನಾವು ಇವೆಲ್ಲವುಗಳಿಂದ ರಕ್ಷಿಸಲ್ಪಟ್ಟಿದ್ದೇವೆ.  ಹಾಗಾಗಿ ನಾವು ಅವರೊಂದಿಗೆ ಸ್ನೇಹ ಬೆಳೆಸಿದೆವು.  ಆ ಗೆಳೆತನ ಉತ್ತಮ ರೀತಿಯಲ್ಲಿ ಮುಂದುವರಿಯಬೇಕಾದರೆ ನಮ್ಮ ಹೃದಯವು ಆತನ ಹೃದಯಕ್ಕೆ ಅನುಗುಣವಾಗಿರಬೇಕು.  ನಾವು ಅವರೊಂದಿಗೆ ಸ್ನೇಹದಿಂದ ಇರಬೇಕಾದರೆ ಅವರಿಗೆ ಇಷ್ಟವಾಗದ ಆಲೋಚನೆಗಳು ಮತ್ತು ಕಾರ್ಯಗಳು ನಮ್ಮಿಂದ ದೂರವಾಗಬೇಕು.  ಯೇಸು ಕ್ರಿಸ್ತನ ಸ್ನೇಹದಲ್ಲಿ ಪ್ರತಿದಿನವೂ ನೆಲೆಗೊಳ್ಳೋಣ.  ಆಮೆನ್!
-    A ಸಿಮಿಯೋನ್

ಪ್ರಾರ್ಥನಾ ಅಂಶ:
ಸಾಮಾನ್ಯ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ ಪ್ರೀತಿಯ ವಿದ್ಯಾರ್ಥಿಗಳನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice