Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.03.2022 (Kid’s Special)
Share:

By Village Missionary Movement

Sunday, 27-Mar-2022

ಧೈನಂದಿನ ಧ್ಯಾನ(Kannada) – 27.03.2022 (Kid’s Special)

Jesus ಏನು ಇಷ್ಟಪಡುತ್ತಾರೆ?

‘‘ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ" - ಜ್ಞಾನೋಕ್ತಿ 12:22

Hello, ಮುದ್ದು ಪುಟಾಣಿಗಳೇ!  How are you?  ನೀವು ಸುರಕ್ಷಿತವಾಗಿರುತ್ತೀರಿ ಎಂದು ನಾನು ಯೇಸಪ್ಪನಲ್ಲಿ ಭಾವಿಸುತ್ತೇನೆ.  ನಾವು Jesus-ಗೆ ಪ್ರಿಯವಾಗಿ ಜೀವಿಸುವಾಗ Jesus ಸಂತೋಷಪಡುತ್ತಾರಲ್ಲವೇ!  ನಾವು ಪ್ರತಿದಿನ Jesus-ಗೆ ಮೆಚ್ಚುಗೆಯಾದದ್ದನ್ನು ಮಾಡಿದ್ದೇವೆಯೇ?  ನೀವೇ ಅದನ್ನು Check ಮಾಡಿ ನೋಡಿ.  ಸರಿ ತಾನೇ!  ಮಾಡುತ್ತೀರಾ  ಸರಿ ಕಥೆ ಕೇಳೋಣ್ವಾ?

ಯಾರು ಬಸ್ಸಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ, ಓಹ್ ... ಎಲ್ಲರಿಗೂ ಇಷ್ಟವಾಗುತ್ತದೆಯೇ?  ಕಿಟಕಿಯ ಪಕ್ಕದಲ್ಲಿ ಕುಳಿತು ಮೋಜು ಮಾಡುವುದು ಅದಕ್ಕಿಂತ ಹೆಚ್ಚು Super-ಆಗಿ ಇರುತ್ತದಲ್ಲಾ.  ನಾಲ್ವರು  ಸ್ನೇಹಿತರು ಸೇರಿ ಬಸ್ಸಿನಲ್ಲಿ ಪ್ರಯಾಣಿಸಿ ಶಾಲೆಗೆ ತಡವಾಗಿ ಹೋಗುತ್ತಾರೆ.  ಇದನ್ನು ಮಾಡಬಾರದು.  ಇದು ತಪ್ಪು ತಾನೇ!  ಸ್ನೇಹಿತನು ತಪ್ಪು ಮಾಡಿದಾಗ ಖಂಡಿಸಬೇಕು ಅದುವೇ ನಿಜವಾದ ಸ್ನೇಹ.

ಒಂದು ದಿನ  ಶಾಲೆಗೆ ತಡವಾಗಿ ಬಂದು ಬಸ್ ಟೈರ್ ಪಂಕ್ಚರ್ ಆಗಿದೆ ಎಂದು ಸುಳ್ಳು ಹೇಳಿದರು.  ಶಿಕ್ಷಕರೊಬ್ಬರು ಇವರು ಮಾಡುತ್ತಿರುವುದು ತಪ್ಪು ಎಂದು ಸ್ಪಷ್ಟಪಡಿಸಲು ಬಯಸಿದ್ದರು.  ಎಲ್ಲಾ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ ನಂತರ, ನಾಲ್ವರು ಸ್ನೇಹಿತರ ಕೈಗೆ ಕಾಗದವನ್ನು ಕೊಟ್ಟು ಬಸ್ಸಿನಲ್ಲಿ ಯಾವ ಟೈರ್ ಪಂಕ್ಚರ್ ಆಗಿದೆ ಎಂದು ಬರೆಯಲು ಹೇಳಿದರು.  ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.  ನಿಜವಾಗಿದ್ದರೆ ತಾನೇ ಬರೆಯೋಕೆ ಸಾಧ್ಯ,  ಏನು ಬರೆದಿರುತ್ತಾರೆ ಎಂದು ನೀವು ಭಾವಿಸುತ್ತೀರ.  ಬೇರೆ, ಬೇರೆಯಾಗಿ ತಪ್ಪಾಗಿ ಬರೆದಿರಬೇಕು ತಾನೇ!  ಶಿಕ್ಷಕನಿಗೆ ಸತ್ಯ ತಿಳಿಯುತ್ತಿದ್ದಂತೆ ನಾಲ್ವರೂ ತಲೆ ಬೊಗ್ಗಿಸಿಕೊಂಡು ನಿಂತರು.  ಶಿಕ್ಷಕರು ಅವರಿಗೆ ಸಲಹೆ ನೀಡಿದರು.  ತಮ್ಮ ತಪ್ಪಿನ ಅರಿವಾಗಿ ನಾಲ್ವರೂ ಶಿಕ್ಷಕರಲ್ಲಿ ಕ್ಷಮೆ ಕೇಳಿದರು.  ಮುಂದೆ ಅವರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲಾರಂಭಿಸಿದರು.  ಸುಳ್ಳು ಹೇಳುವ ಬದಲು ಒಳ್ಳೆಯ ಮಕ್ಕಳಾಗಿ ಬಾಳಲು ಪ್ರಯತ್ನಿಸೋಣ ಎಂದು ಗೆಳೆಯರು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿ ಟೀಚರ್ ತುಂಬಾ ಖುಷಿಪಟ್ಟರು.
   
ಪ್ರೀತಿಯ ಸಹೋದರ, ಸಹೋದರಿಯೇ, ಸುಳ್ಳು, ಕಳ್ಳತನ, ಕೆಟ್ಟ ಪದ, ಈ ರೀತಿಯ ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು.  ಇದು ಯೇಸಪ್ಪನನ್ನು ದುಃಖಪಡಿಸುತ್ತದೆ.  ಅದನ್ನು ಬಿಟ್ಟು ಬಿಡಲು ಪ್ರಯತ್ನಿಸಿ, ಯೇಸಪ್ಪನನ್ನು ಸಂತೋಷಪಡಿಸಬೇಕು. Ok Bye.
-    Mrs.  ಜೀವಾ ವಿಜಯ್

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino atlasbet bahiscasino atlasbet matbet matbet giriş bahiscasino celtabet queenbet casibom jojobet