By Village Missionary Movement
Wednesday, 23-Mar-2022ಧೈನಂದಿನ ಧ್ಯಾನ(Kannada) – 23.03.2022
ದೊಡ್ಡ ದೇವರು
"...ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ" - 1 ಯೋಹಾನ 4:4
ಒಬ್ಬ ಹುಡುಗ ತನ್ನ ಅಜ್ಜನ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದನು. ದೂರದ ಪ್ರಯಾಣವಾದ್ದರಿಂದ ಬ್ಯಾಗಿನಿಂದ ಪುಸ್ತಕ ತೆಗೆದು ಓದತೊಡಗಿದ. ಅವರ ಪಕ್ಕದಲ್ಲಿ ಬೈಬಲ್ ಕಾಲೇಜಿನ ಪ್ರಾಧ್ಯಾಪಕರು ಕುಳಿತಿದ್ದರು. ಅವನು ಯಾವ ಪುಸ್ತಕವನ್ನು ಓದುತ್ತಿದ್ದಾನೆ ಎಂದು ಇಣುಕಿ ನೋಡಿದರು. ಅದು ಸತ್ಯವೇದವಾಗಿತ್ತು. ಅವರು ತುಂಬಾ ಸಂತೋಷಪಟ್ಟರು. ಅವನೊಂದಿಗೆ ಸ್ವಲ್ಪ ಸಮಯ ಕಳೆಯಬಹುದು ಎಂದು ಯೋಚಿಸಿ, "ತಮ್ಮ, ದೇವರು ಮಾಡಬಹುದಾದ ಒಂದು ದೊಡ್ಡ ಕೆಲಸವನ್ನು ನನಗೆ ಹೇಳು, ಅದು ಸರಿಯಿದ್ದರೆ, ನಾನು ನಿನಗೆ ಒಂದು ದೊಡ್ಡ ಸೇಬು ಕೊಡುತ್ತೇನೆ" ಎಂದರು. ಆ ಹುಡುಗ ಬೈಬಲನ್ನು ಮುಚ್ಚಿಟ್ಟು ಒಂದು ಕ್ಷಣ ಯೋಚಿಸಿದ, "ಅಯ್ಯಾ, ನಾನು ನಿಮ್ಮಲ್ಲಿ ಒಂದು ವಿಷಯ ಕೇಳುತ್ತೇನೆ, ದೇವರು ಮಾಡಲಾಗದ ಮಹತ್ತರವಾದದ್ದೇನಾದರೂ ಇದ್ದರೆ, ನನಗೆ ತಿಳಿಸಿ, ನಾನು ನನ್ನ ಅಜ್ಜನಿಗೆ ಹೇಳಿ ನಿಮಗೆ ಒಂದು ಪೆಟ್ಟಿಗೆ ತುಂಬ ಸೇಬು ತೆಗೆದುಕೊಡುತ್ತೇನೆ" ಎಂದನು.
ನಾವು ಆರಾಧಿಸುವ ದೇವರು ಸರ್ವಶಕ್ತನು. ಅವರು ಹೇಳಿದರೆ ಆಗುತ್ತದೆ, ಅವರು ಅಪ್ಪಣೆ ಕೊಟ್ಟರೆ ನಿಲ್ಲುತ್ತದೆ. ಇಷ್ಟು ದೊಡ್ಡ ಜಗತ್ತನ್ನು ಸೃಷ್ಟಿಸಿದ ದೇವರನ್ನು ನಮ್ಮ ರಕ್ಷಕನಾಗಿ ಹೊಂದಿದ್ದೇವೆ. ಕೆಂಪು ಸಮುದ್ರವನ್ನು ಎರಡು ಭಾಗ ಮಾಡಿದಾತನು, ಯೊರ್ದಾನ್ ನದಿಯನ್ನು ಹಿಂತಿರುಗಿ ಓಡುವಂತೆ ಮಾಡಿದಾತನು, ಗಾಳಿ ಮತ್ತು ಸಮುದ್ರವನ್ನು ಗದರಿಸಿ ಶಾಂತಪಡಿಸುವಾತನು. ಕುಷ್ಠರೋಗಿಗಳನ್ನು ವಾಸಿಮಾಡುವಾತನು, ಕಿವುಡರನ್ನು ಕೇಳುವಂತೆ ಮಾಡಿದಾತನು, ಮೂಕರನ್ನು ಮಾತಾಡುವಂತೆ ಮಾಡಿದಾತನು, ಕುರುಡರನ್ನು ನೋಡುವಂತೆ ಮಾಡಿದಾತನು ಮತ್ತು ಸತ್ತವರನ್ನು ಜೀವಂತವಾಗಿ ಎಬ್ಬಿಸಿದಾತನು ಹೀಗೆ ಹೇಳುತ್ತಾರೆ, “ಇಗೋ, ನಾನೇ ಕರ್ತನು, ಸಮಸ್ತ ಜನರ ದೇವರು; ನನಗೆ ಕಠಿಣವಾದ ಕಾರ್ಯ ಒಂದಾದರೂ ಉಂಟೋ? ಎಂದು ದೇವರು ಕೇಳುತ್ತಿದ್ದಾರೆ (ಯೆರೆ. 32:27).
ಪ್ರಿಯರೇ! ಇಂದು ನಿಮಗೆ ಒಂದು ಅದ್ಭುತ ನಡೆಯಬೇಕೇ? ನಿಮ್ಮ ಜೀವನದಲ್ಲಿ ಪ್ರತಿದಿನ ಹೋರಾಟವಿದೆಯೇ? ಸಮಸ್ಯೆಗಳನ್ನು ನೋಡಿ ಬೇಸತ್ತಿದ್ದೀರಾ? ಮಕ್ಕಳ ಆಲೋಚನೆಯಿಂದ ನೀವು ಅಸಮಾಧಾನಗೊಂಡಿದ್ದೀರಾ? ಸಾಲದ ಸಮಸ್ಯೆಯೊಂದಿಗೆ ಏನು ಮಾಡಬೇಕೆಂದು ಖಚಿತವಾಗಿಲ್ಲವೇ? ಯಾವುದಕ್ಕೂ ಚಿಂತಿಸಬೇಡಿರಿ. ಈ ಎಲ್ಲಾ ಸಮಸ್ಯೆಯನ್ನು ಬದಲಾಯಿಸಬಲ್ಲ ದೊಡ್ಡ ದೇವರು ನಿಮ್ಮೊಂದಿಗೆ ಇದ್ದಾರೆ. ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ ಮತ್ತು ಅವರನ್ನು ಸಂಪೂರ್ಣವಾಗಿ ನಂಬಿರಿ. ಆತನು ನಿಮ್ಮ ದುಃಖವನ್ನು ಸಂತೋಷವಾಗಿ ಮಾರ್ಪಡಿಸುವರು. ಆಮೆನ್.
- P.ಶಿವ
ಪ್ರಾರ್ಥನಾ ಅಂಶ:
ಕಛೇರಿಯ ಕೆಲಸಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ತುರ್ತಾಗಿ ಅಗತ್ಯವಿದೆ. ಇದಕ್ಕಾಗಿ ಸಹಾಯ ಮಾಡುವಂತಹ ಹೃದಯಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482