Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.03.2022
Share:

By Village Missionary Movement

Tuesday, 22-Mar-2022

ಧೈನಂದಿನ ಧ್ಯಾನ(Kannada) – 22.03.2022

ಸಾಮಾನ್ಯವಾದ ಉಪದ್ರವ

"...ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ." - ರೋಮಾಪುರ 8:18

ಎರಡನೇ ಮಹಾಯುದ್ಧದ ವಿಜಯದಲ್ಲಿ ಅಮೆರಿಕದ ಆರ್ಮಿ ಕಮಾಂಡರ್ ಐಸೆನ್ ನೋವರ್ ಪ್ರಮುಖ ಪಾತ್ರ ವಹಿಸಿದರು.  ಅವರು ಮೊದಲ ಸಲ ಸೇನೆಗೆ ಸೇರಿದಾಗ, ಅಲ್ಲಿ ತನಗಾಗುವ ಕಷ್ಟನಷ್ಟಗಳ ಬಗ್ಗೆ ಪ್ರತಿನಿತ್ಯ ತಂದೆಗೆ ಬರೆಯುವುದು ಅಭ್ಯಾಸ.  ಅದರಲ್ಲಿ ಬೆಳಗಿನ ಜಾವ 4 ಗಂಟೆಗೆ ಏಳಬೇಕು.ದಿನಕ್ಕೆ 20 ಕಿ.ಮೀ ಓಡಬೇಕು.ಮರುಭೂಮಿಯಲ್ಲಿ ಸುಮಾರು 40-45 ಡಿಗ್ರಿ ಉಷ್ಣತೆಯುಳ್ಳ ಭಾಗದಲ್ಲಿ ತರಬೇತಿ ಪಡೆಯುವಾಗ ಸಿಗುವ ಆಹಾರ 100 ಮಿಲಿ ಹಾಲು ಮಾತ್ರವೇ.  ಇದರಂತೆ, ತಾನು ಅನುಭವಿಸುತ್ತಿರುವ ಕಷ್ಟಗಳನ್ನು ಪತ್ರವಾಗಿ  ಬರೆದು ಕಳುಹಿಸಿದರೂ ತಂದೆಯ ಬಳಿಯಿಂದ ಒಂದು ಉತ್ತರವೂ ಬರಲಿಲ್ಲ. ಹೀಗೆ ಅವರು 100ಕ್ಕೂ ಹೆಚ್ಚು ಪತ್ರಗಳನ್ನು ತಂದೆಗೆ ಬರೆದರು.

ಈ ನೂರು ಪತ್ರಗಳಿಗೆ ಉತ್ತರವಾಗಿ ಅವರ ತಂದೆ ಪೋಸ್ಟ್‌ಕಾರ್ಡ್‌ನಲ್ಲಿ ಒಂದು ಘಟನೆಯನ್ನು ಬರೆದರು.  "ಇಬ್ಬರು ವ್ಯಕ್ತಿಗಳು ಜೈಲು ಪಾಲಾದರು. ಒಬ್ಬನು ತನ್ನ ದಯನೀಯ ಸ್ಥಿತಿಯನ್ನು ಕಂಡು ಕಣ್ಣೀರು ಸುರಿಸುತ್ತಾ ತಲೆ ಬಾಗಿಸಿಕೊಂಡೇ ಆ ಕೋಣೆಯ ಮರಳನ್ನು ನೋಡಿ ದುಃಖಿಸುತ್ತಾ ತನ್ನ ದಿನಗಳನ್ನು ಕಳೆದನು.  ಮತ್ತೊಬ್ಬನೋ ತುಕ್ಕು ಹಿಡಿದ ಕಿಟಕಿಯ ಮೂಲಕ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಅವುಗಳ ಸೌಂದರ್ಯ ಮತ್ತು ಬೆಳಕನ್ನು ನೋಡುತ್ತಾ ಸಂತೋಷದಿಂದ ತನ್ನ ಕಾಲ ಕಳೆದನು.  ನೀನು ಯಾರಂತೆ ಇದ್ದೀಯ? ”  ಎಂದು ಬರೆದು ತನ್ನ ಮಗನಿಗೆ ಕಳುಹಿಸಿದರು.  ಈ ಪತ್ರವನ್ನು ಓದಿದ ನಂತರ, ಐಸೆನ್ ಉತ್ಸಾಹದೊಂದಿಗೆ, ಸಂತೋಷದಿಂದ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿದರು, ಅಮೆರಿಕ ದೇಶದ 34 ನೇ ಅಧ್ಯಕ್ಷರಾಗಿ ಮಾರ್ಪಟ್ಟರು.

ಅಪೊಸ್ತಲನಾದ ಪೌಲನು ಪಟ್ಟ ನೋವುಗಳು, ಹಿಂಸೆಗಳು ಅತ್ಯಲ್ಪವಾಗಿರಲಿಲ್ಲ, ಎಷ್ಟೋ ಕಷ್ಟಗಳ ನಡುವೆ ಅವರು ಹಾದು ಹೋದರೂ ಕ್ರಿಸ್ತನಿಗಾಗಿ ಅಷ್ಟು ಕಷ್ಟಗಳನ್ನು ತಾಳ್ಮೆಯಿಂದ  ಸಹಿಸಿಕೊಂಡರು. ಆ ಹೋರಾಟಗಳ ನಿಮಿತ್ತವಾಗಿ ಅವರು ಸೋತುಹೋಗದೆ ಕ್ರಿಸ್ತನು ತನ್ನನ್ನು ಕರೆದ ಕರೆಯುವಿಕೆಗೆ ನಂಬಿಗಸ್ಥರಾಗಿದ್ದದರಿಂದ ಅವುಗಳೆಲ್ಲವೂ ಸಾಮಾನ್ಯ ಉಪದ್ರವವೇ ಎಂದು ಆಶ್ಚರ್ಯಪಡುವ  ರೀತಿಯಲ್ಲಿ  ಹೇಳಿದರು. ಆ ಉಪದ್ರವವು  ಅತ್ಯಧಿಕವಾಗಿ ಶಾಶ್ವತವಾದ ವೈಭವವನ್ನು ತರುತ್ತದೆ ಎಂದು ಅವರು ನಂಬಿದ್ದರು.

ಪ್ರಿಯರೇ!  ನಾವೂ ಕೂಡ ಅನೇಕ ಹೋರಾಟಗಳ ನಡುವೆ ಹಾದು ಹೋಗುತ್ತಿರಬಹುದು, ಹೋರಾಟಗಳನ್ನೇ ನಾವು ನೋಡುತ್ತಿದ್ದರೆ, ಅದು ದೊಡ್ಡದಾಗಿಯೇ ಕಾಣುತ್ತದೆ.  ನಮ್ಮ ಯಾವುದೇ ಕಷ್ಟಗಳು ಶಾಶ್ವತವಲ್ಲ, ಒಂದು ದಿನ ಅವು ನಮ್ಮನ್ನು ಬಿಟ್ಟು ಹಾದು ಹೋಗುತ್ತವೆ.  ಆದರೆ ಹೀಗಾಯಿತು ಎಂದು ದುಃಖದಲ್ಲಿ ಮುಳುಗಿದರೆ ಯಾರೂ ನಮಗೆ ಸಹಾಯ ಮಾಡಲಾರರು.
-    Bro.ಶಂಕರರಾಜ್

ಪ್ರಾರ್ಥನಾ ಅಂಶ:
ಪ್ರತಿದಿನ ಮುಂಜಾನೆ  5 ಗಂಟೆಗೆ ಪ್ರಸಾರವಾಗುವ "Healing service" ಮೂಲಕ ಅನೇಕರು ಅದ್ಭುತವಾದ ಸ್ವಸ್ಥತೆಯನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al