Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.03.2022
Share:

By Village Missionary Movement

Saturday, 19-Mar-2022

ಧೈನಂದಿನ ಧ್ಯಾನ(Kannada) – 19.03.2022

ಬಡ ಆತ್ಮ

“ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು" - ಮತ್ತಾಯ 5:3

ಮಾಜಿ ಅಮೆರಿಕ ಅಧ್ಯಕ್ಷರಾಗಿದ್ದ  ಅಬ್ರಹಾಂ ಲಿಂಕನ್ ರವರ ತಂದೆ, ಚಪ್ಪಲಿ ಹೊಲಿಯುವ ಕಾರ್ಮಿಕನಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಅವರ ಅಧಿಕಾರಾವಧಿಯಲ್ಲಿ, ವಿರೋಧ ಪಕ್ಷದ ನಾಯಕರಾಗಿದ್ದವರು ಲಿಂಕನ್ ಅವರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದ್ದರು.  ಒಂದು ದಿನ ಅಸೆಂಬ್ಲಿ ಸಭೆಯೊಂದರಲ್ಲಿ, "ನಿಮ್ಮ ತಂದೆ ಹೊಲಿದ ಚಪ್ಪಲಿಯನ್ನು ನಾನು ಈಗಲೂ ಧರಿಸುತ್ತಿದ್ದೇನೆ" ಎಂದರು.  ಲಿಂಕನ್ ತಕ್ಷಣ ಹೇಳಿದರು, “ಹೌದಾ ನನ್ನ ತಂದೆ ಹೊಲಿದ ಚಪ್ಪಲಿಗಳು ಎಷ್ಟು ದಿನ ಬಾಳಿಕೆ ಬರುತ್ತಿದೆ ನೋಡಿ. ಯಾವತ್ತಾದರೂ ಒಂದು ದಿನ ಕಿತ್ತು ಹೋದರೆ ಅದು ನನಗೆ ಕೊಡಿ ಹೊಲಿದು ಕೊಡುತ್ತೇನೆ.  ಅಧ್ಯಕ್ಷನಾಗಿದ್ದರೂ ನನಗೆ, ಚಪ್ಪಲಿ ಹೊಲಿಯುವುದು ತಿಳಿದಿದೆ” ಎಂದು ವಿನಯದಿಂದ ಹೇಳಿದರು.  ಅವರ ಆತ್ಮದಲ್ಲಿ ಕಂಡುಬರುವ ಸರಳ ಆಲೋಚನೆಯನ್ನು ನೋಡಿ.

ನಾವು ಇಂದಿನ ಸತ್ಯವೇದ ಭಾಗದಲ್ಲಿ ಓದಿದಂತೆ, ಓಬೇದೋಮನ ಮನೆಯಿಂದ ದಾವೀದನಗರಕ್ಕೆ ಕರ್ತನ ಮಂಜೂಷವನ್ನು ತರುವಾಗ ಅರಸನಾದ ದಾವೀದನು ಪೂರ್ಣಾಸಕ್ತಿಯಿಂದ  ಕರ್ತನ ಮುಂದೆ ಕುಣಿದಾಡಿದರು. ಸೌಲನ ಮಗಳು ಮತ್ತು ದಾವೀದನ ಹೆಂಡತಿಯಾಗಿದ್ದ ಮೀಕಲಳು ಇದನ್ನು ಕಿಟಕಿಯ ಮೂಲಕ ಹಣಿಕಿ ನೋಡಿ ತನ್ನ ಮನಸ್ಸಿನಲ್ಲಿ ದಾವೀದನನ್ನು ತಿರಸ್ಕರಿಸಿದಳು.  "ನೀವು ಈ ಹೊತ್ತು ಇಸ್ರಾಯೇಲ್ಯರ ಅರಸನಂತೆಯಾ ನಡೆದುಕೊಂಡಿರಿ, ನೀಚರಲ್ಲೊಬ್ಬನಂತೆ ಅಲ್ಲವೇ ಕುಣಿದಾಡಿದಿರಿ" ಎಂದು ಹೀನವಾಗಿ ಮಾತನಾಡಿದಳು. ಆದರೆ ದಾವೀದನು ಈ ಕೃತ್ಯಕ್ಕಾಗಿ ತನ್ನ ಹೆಂಡತಿಗೆ ಕಠಿಣ ಮಾತುಗಳನ್ನು ಅಥವಾ ಶಿಕ್ಷೆಯನ್ನು ನೀಡಿರಬಹುದು.  ಆದರೆ ಅವರೋ ಒಬ್ಬ ಗಂಡನೆಂದು, ರಾಜನೆಂದು ತನ್ನ ಸ್ಥಾನಕ್ಕೆ ತಕ್ಕ ಹಾಗೆಯೂ ತೀರ್ಪು ಕೊಡದೆ ತನ್ನನ್ನು ನೆಲದ ಮಟ್ಟಿಗೆ ತಗ್ಗಿಸಿಕೊಂಡರು.  "ನೀನು ನನ್ನ ಬಗ್ಗೆ ಯೋಚಿಸುವುದಕ್ಕಿಂತಲೂ ನಾನು ನನ್ನ ದೃಷ್ಟಿಯಲ್ಲಿ ಇನ್ನೂ ಹೆಚ್ಚು ನೀಚನಾಗಿದ್ದೇನೆ"  ಎಂದರು. ಇದು ಸಾಮಾನ್ಯ ಪದವಲ್ಲ ಅವರ ಆತ್ಮದಲ್ಲಿದ್ದ ಸರಳ ಚಿಂತನೆಯನ್ನು ತೋರಿಸುತ್ತದೆ, "ನಾನು ರಾಜ" ಎಂದು ನಿಮಿಷ ನಿಮಿಷಕ್ಕೆ ಯೋಚಿಸದೆ ದೇವರ ಮುಂದೆ ತಾನು ಯಾರೆಂದು ಅವರು ತನ್ನ ಆತ್ಮದಲ್ಲಿ ತಿಳಿದಿದ್ದರು.  ಹೌದು, ಆತ್ಮದಲ್ಲಿ ಬಡವರಾಗಿರುವವರು ಧನ್ಯರು.

ಪ್ರಿಯರೇ!  ನಿಮ್ಮ ಬಗ್ಗೆ ಏನು?  ನೀವು ಇತರರ ಮುಂದೆ ತಗ್ಗಿಸಲ್ಪಡುವಾಗ ನಿಮಗೆ ಹೇಗೆ ಅನಿಸುತ್ತಿದೆ?  ಇತರರ ಮುಂದೆ ಅವಮಾನ ಮತ್ತು ಅಪಮಾನಕ್ಕೆ ಒಳಗಾಗುವುದು ಒಂದು ಕಷ್ಟದ ವಿಷಯವೇ.  ಆದರೂ ಆ ಅವಮಾನವನ್ನು ಸ್ವೀಕರಿಸಿ ಅಲ್ಲಿ ಸರಳ ಮನೋಭಾವದಿಂದ ಕಾಣುವುದು ಕೂಡ ಪ್ರಬುದ್ಧ ಅನುಭವವೇ!  ಹೌದು, ನಮ್ಮ ಆತ್ಮ, ಮನಸ್ಸು ಮತ್ತು ಆಲೋಚನೆ ಯಾವಾಗಲೂ ಸರಳ ಮತ್ತು ತಾಳ್ಮೆಯಿಂದಿರಲಿ.  ಖಂಡಿತವಾಗಿಯೂ ನಾವು ಕರ್ತನ ದೃಷ್ಟಿಯಲ್ಲಿ ಧನ್ಯರೇ, ಪರಲೋಕ ರಾಜ್ಯವು ನಮ್ಮದೇ! 
-    Mrs.  ರೂತ್ ಅನೀಸ್

ಪ್ರಾರ್ಥನಾ ಅಂಶ:
7000 ಸೇವಕರ ಮೂಲಕ 1 ಲಕ್ಷ ಹಳ್ಳಿಗಳನ್ನು ತಲುಪುವ ಯೋಜನೆಯಲ್ಲಿ ಸಮರ್ಪಣೆಯುಳ್ಳ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin