Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.03.2022
Share:

By Village Missionary Movement

Friday, 18-Mar-2022

ಧೈನಂದಿನ ಧ್ಯಾನ(Kannada) – 18.03.2022

ವ್ಯರ್ಥವೇ ವ್ಯರ್ಥ

"...ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು." - ಲೂಕ 12:15

ಜಾನ್ ಮೈಕ್ರೋ ಎಂಬ ಪ್ರಸಿದ್ಧ ಟೆನಿಸ್ ಆಟಗಾರರೊಬ್ಬರಿದ್ದರು. ಆಟದ ಸಲುವಾಗಿ ಹಣ ಮತ್ತು ಖ್ಯಾತಿಯ ಉತ್ತುಂಗದಲ್ಲಿ ಕಾಣಲ್ಪಟ್ಟರು.  ತನ್ನ ಇಪ್ಪತ್ತನಾಲ್ಕನೇ ವರ್ಷದಲ್ಲಿ ದೊಡ್ಡ ಕೋಟ್ಯಾಧಿಪತಿಯಾಗಿದ್ದರು ಜಾನ್. ಅಷ್ಟು ಮಾತ್ರವಲ್ಲದೆ ದೊಡ್ಡ ಹಡಗೊಂದನ್ನೂ ಸಹ ಹೊಂದಿದ್ದರು.  ಒಂದು ಸಭೆಯಲ್ಲಿ ಅವರಿಗೆ ನಿರ್ದಿಷ್ಟ ಪ್ರಶ್ನೆಯೊಂದನ್ನು ಕೇಳಲಾಯಿತು.  "ನಿಮಗಿರುವ  ಸವಾಲೇನು ಎಂದರೆ  ಏನು ಹೇಳುತ್ತೀರಿ?"  ಎಂದು ಕೇಳಿದರು. ಸ್ವಲ್ಪ ಸಮಯದ ಮೌನದ ನಂತರ, ಜಾನ್ ಹೇಳಿದರು, "ನಾನು ಪ್ರತಿದಿನ ಸವಾಲನ್ನು ಎದುರಿಸುತ್ತಲೇ ಇದ್ದೇನೆ"  ಎಂದರು. ನೆರೆದಿದ್ದ ಜನರೆಲ್ಲಾ ಆ ಚಾಲೆಂಜ್ ಏನು ಎಂದು ಯೋಚಿಸಿದರು.  ಜಾನ್ ಮುಂದುವರಿಸಿದರು, "ನಾನೇ ಆ ಸವಾಲು ಎಂದರಂತೆ. ಕೋಟಿ ಕೋಟಿ ಹಣ ಇರುವುದರಿಂದ ನಾನು ಎಲ್ಲವನ್ನೂ ಸಾಧಿಸಿದ್ದೇನೆ ಎಂದು ನೀವು ಎಣಿಸಬಾರದು ಎಂದರು.

ಲೂಕ 12 ರಲ್ಲಿ ಯೇಸು ಲೋಭಕ್ಕೆ ಎಚ್ಚರದಿಂದಿರಿ ಎಂದು ಹೇಳುತ್ತಾರೆ.  ಪಾಪದ ಪಟ್ಟಿಯಲ್ಲಿ ಭೌತವಾದದ ಬಗ್ಗೆ ಅನೇಕ ಸ್ಥಳಗಳಲ್ಲಿ ಹೇಳಿರುವುದನ್ನು ನೀವು ಸತ್ಯವೇದದಲ್ಲಿ ಓದಬಹುದು.  ಹಣ ಮತ್ತು ಆಸ್ತಿ ಹೇರಳವಾಗಿದ್ದರೆ ಮನುಷ್ಯನು ಎಲ್ಲವನ್ನೂ ಹೊಂದಿದ್ದಾನೆ ಎಂದು ಪರಿಗಣಿಸಲಾಗುತ್ತದೆ.  ಆದರೆ ಇಲ್ಲಿನ ವಿಷಯವೇ ಬೇರೆ ಎಂಬುದು ಆನಂತರವೇ ತಿಳಿಯುತ್ತದೆ.  ಮನುಷ್ಯನಿಗೆ ಹೆಚ್ಚು ಹಣವಿದ್ದಷ್ಟು ಮನಃಶಾಂತಿ ಕಡಿಮೆಯಾಗಿ ಸಮಾಧಾನವೆಂಬುದು ನೀರಿನ ಗುಳ್ಳೆಗಳಂತೆ ಕಾಣದೆ ಹೋಗುತ್ತದೆ.  ಅಂತಿಮವಾಗಿ ಅವನ ಜೀವನವು ಕೊನೆಗೊಳ್ಳುತ್ತದೆ.  ಇದನ್ನೇ ಪ್ರಸಂಗಿ ಎಲ್ಲಾ ವ್ಯರ್ಥ ಎಂದು ಹೇಳುತ್ತಾರೆ.

ನಮಗೆ ಹಣ ಅಗತ್ಯವೇ.  ಆದರೆ ಅದು ಮಾತ್ರವೇ ಮನುಷ್ಯನಿಗೆ ಸಂಪೂರ್ಣ ತೃಪ್ತಿಯನ್ನು ನೀಡುವುದು ಎಂದು ಹೇಳಲು ಸಾಧ್ಯವಿಲ್ಲ.  ಹಣದ ಆಸೆಯು ಎಲ್ಲಾ ದುಷ್ಟತನಕ್ಕೆ ಮೂಲವಾಗಿದೆ ಎಂದು ಪೌಲನು ಹೇಳುತ್ತಾರೆ.  ದೇವರು ಅಹಂಕಾರವನ್ನು ವಿರೋಧಿಸುವವರಾಗಿ ಕಾಣಲ್ಪಡುತ್ತಾರೆ.  ಇದನ್ನೇ, ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಎಂದು ಲೂಕ 12:15 ರಲ್ಲಿ ಹೇಳಲ್ಪಟ್ಟಿದೆ. ಈ ಲೋಕವು ಭ್ರಮೆಯಿಂದ ತುಂಬಿದೆ.  ಆದ್ದರಿಂದ ನಾವು ಸಹ ಸೌಲ ಮತ್ತು ಸೊಲೊಮೋನರಂತೆ ಈ ಭ್ರಮೆಯ ಜಗತ್ತನ್ನು ಮತ್ತು ಭೌತಿಕತೆಯನ್ನು ದ್ವೇಷಿಸಿ ದೇವರ ಕಡೆಗೆ ತಿರುಗಿದಾಗ, ನಮಗೆ ಶಾಂತಿ ಮತ್ತು ನೆಮ್ಮದಿಯು ಉಂಟಾಗುತ್ತದೆ.  ಇದನ್ನು ಪಡೆದುಕೊಳ್ಳಲು ನಾವು ತಾಳ್ಮೆಯಿಂದ ಓಡೋಣ.  ಆಮೆನ್!
-    P.  ಜೇಕಬ್ ಶಂಕರ್

ಪ್ರಾರ್ಥನಾ ಅಂಶ:
ಒಂದು ಲಕ್ಷ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ 1 ಲಕ್ಷ ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş