Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2022
Share:

By Village Missionary Movement

Thursday, 17-Mar-2022

ಧೈನಂದಿನ ಧ್ಯಾನ(Kannada) – 17.03.2022

ಕಣ್ಣುಗಳು ಜೋಪಾನ

“ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು ಧಿಕ್ಕರಿಸುವವನ ಕಣ್ಣನ್ನು ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು" - ಜ್ಞಾನೋಕ್ತಿ 30:17

ನಮ್ಮನ್ನು ಸೃಷ್ಟಿಸಿದ ದೇವರನ್ನು ಮೆಚ್ಚಿಸುವುದೇ ನಮ್ಮ ಜೀವನದ ಮುಖ್ಯ ಉದ್ದೇಶ. ಸತ್ಯವೇದವನ್ನು ಧ್ಯಾನಿಸುವುದರ ಮೂಲಕ ದೇವರಿಗೆ ಯಾವುದು ಇಷ್ಟ ಎಂಬುದನ್ನು ಕಲಿತುಕೊಳ್ಳುತ್ತೇವೆ.  ಹೆತ್ತ ತಾಯಿ ಮತ್ತು ತಂದೆಯನ್ನು ಗೌರವಿಸುವುದು ಬಹಳ ಮುಖ್ಯ ಎಂದು ನಾವು ಹತ್ತು ಆಜ್ಞೆಗಳಲ್ಲಿ ಕಾಣುತ್ತೇವೆ.  (ವಿಮೋ. 20:12) ಗೌರವವನ್ನು ಒತ್ತಿಹೇಳುವ ವಿಷಯ ಬಂದಾಗ, ಅದು ಹೃದಯದಿಂದ ಪ್ರಾರಂಭವಾಗಿ ಮಾತಿನಲ್ಲಿ ಮತ್ತು ಕಾರ್ಯಗಳಲ್ಲಿ ವ್ಯಕ್ತಪಡಿಸಬೇಕು.

ಸೊಲೊಮೋನನ ಜೀವನದಲ್ಲಿ ಪೋಷಕರ ಗೌರವದ ಅದ್ಭುತ ಉದಾಹರಣೆಯನ್ನು ಕಾಣಬಹುದು.  1 ಅರಸು.  2:19 ರಲ್ಲಿ, ಅರಸನಾದ ಸೊಲೊಮೋನನು ತನ್ನ ತಾಯಿಯು ತನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆಂದು ತಿಳಿದುಕೊಂಡು, ಎದ್ದು ಅವರನ್ನು ಭೇಟಿಯಾಗಲು ಹೋಗಿ, ಅವರನ್ನು ನಮಸ್ಕರಿಸಿ ಅವರ ಸಿಂಹಾಸನದ ಪಕ್ಕದಲ್ಲೇ ಒಂದು ಆಸನದ ಮೇಲೆ ಕೂರಿಸಿದ್ದನ್ನು ನಾವು ಓದುತ್ತೇವೆ.  ಹೀಗೆ ಗೌರವಿಸುವವರಿಗೆ ಕರ್ತನು  ಮೇಲನ್ನು, ದೀರ್ಘಾಯುಷ್ಯನ್ನು ವಾಗ್ದಾನ ಮಾಡಿದ್ದಾರೆ.(ಎಫೆಸದವರಿಗೆ 6: 2,3).

ಪ್ರಿಯರೇ!  ನಿಮ್ಮ ಹೆತ್ತವರನ್ನು ಗೌರವಿಸುವುದರ ವಿಷಯದಲ್ಲಿ ನೀವು ಗಮನಹರಿಸಿದ್ದೀರಾ? ಇಲ್ಲವಾದರೆ ಅದು ಶಾಪ ಎಂದು ಧರ್ಮೋಪದೇಶಕಾಂಡ 27:16 ರಲ್ಲಿ ಓದುತ್ತೇವೆ.  ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು ಧಿಕ್ಕರಿಸುವವನ ಕಣ್ಣನ್ನು ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು ಎಂದು ಜ್ಞಾನೋಕ್ತಿ 30:17 ರಲ್ಲಿ ಓದುತ್ತೇವೆ.  ಅಂದರೆ, 1 ಯೋಹಾನ 2:11 ಹೇಳುತ್ತದೆ, “ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ, ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕಾಣದ ಹಾಗೆ ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಅವನಿಗೆ ತಿಳಿಯದು" ಎಂದು ಓದುತ್ತೇವೆ. ಹೌದು, ದ್ವೇಷವು ಒಬ್ಬನನ್ನು ಆಧ್ಯಾತ್ಮಿಕ ಅಂಧಕಾರದಲ್ಲಿ ತಳ್ಳಿಬಿಡುತ್ತದೆ.  ಜೀವನದ ಸಮಾಧಾನವನ್ನು ಕಳೆದುಕೊಳ್ಳುವಂತೆ ಮಾಡಿ ಅಸ್ತವ್ಯಸ್ತವಾಗಿರುವ ಮನಸ್ಥಿತಿಯನ್ನು ಈ ಕತ್ತಲು ಬರಮಾಡುತ್ತದೆ.  ಪೋಷಕರನ್ನು ನಿರ್ಲಕ್ಷಿಸುವಾಗ ಇದರಂತೆಯೇ ಆಗುತ್ತದೆ.  ಅದನ್ನೇ ಕಾಗೆಯು ಕಣ್ಣುಗಳನ್ನು ಕಿತ್ತುಕೊಳ್ಳುತ್ತದೆ ಎಂದು ಸತ್ಯವೇದವು ಹೇಳುತ್ತದೆ.  ನಾವು ಪ್ರೀತಿಯಲ್ಲಿ ನಡೆದು, ಹೆತ್ತವರನ್ನು ಗೌರವಿಸಿ ಆಧ್ಯಾತ್ಮಿಕ ಬೆಳಕನ್ನು ಕಾಪಾಡಿಕೊಳ್ಳುವುದರ ಮೂಲಕ ನಮ್ಮ ಕಣ್ಣುಗಳನ್ನು ಜೋಪಾನ ಮಾಡಿಕೊಳ್ಳುತ್ತೇವೆ.
-    J.  ಸಂತೋಷ್

ಪ್ರಾರ್ಥನಾ ಅಂಶ:
ಸತತ ಸರಪಳಿ ಪ್ರಾರ್ಥನಾ ಸೇವೆಗಳಲ್ಲಿ ಸೇರಿ ಪ್ರಾರ್ಥಿಸುತ್ತಿರುವ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ  ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş