Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.03.2022
Share:

By Village Missionary Movement

Wednesday, 16-Mar-2022

ಧೈನಂದಿನ ಧ್ಯಾನ(Kannada) – 16.03.2022

ಎಚ್ಚರಿಕೆ ಮತ್ತು ಉತ್ತರ

 "...ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ." - 1 ಥೆಸಲೋನಿಕ 5:6

ಇತ್ತೀಚಿನ ವರ್ಷಗಳಲ್ಲಿ ಮಾರಣಾಂತಿಕ ವ್ಯಾಧಿಯಾದ ಕರೋನಾ ಪ್ರಪಂಚದಾದ್ಯಂತ ಹರಡಿದೆ ಮತ್ತು ಜನರು ಮಾಸ್ಕ್ ಧರಿಸಲು ಮತ್ತು ಆಗಾಗ್ಗೆ ಕೈ ತೊಳೆಯಲು ಎಚ್ಚರಿಕೆ ನೀಡಲಾಗಿದೆ.  ವಾಯು, ಭೂ ಮತ್ತು ಸಮುದ್ರ ಸಾರಿಗೆ ಅಸ್ತವ್ಯಸ್ತಗೊಂಡಿದೆ.  ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ವ್ಯಾಪಾರಗಳನ್ನು ಮುಚ್ಚಲಾಯಿತು.  ಹಬ್ಬಗಳು, ಸಮಾರಂಭಗಳು ಮತ್ತು ಧಾರ್ಮಿಕ ಸೇವೆಗಳನ್ನು ನಿಷೇಧಿಸಲಾಯಿತು.  ಜನರು, ವೈದ್ಯರು, ಸರ್ಕಾರ ನೀಡಿದ ಎಲ್ಲಾ ಎಚ್ಚರಿಕೆಗಳನ್ನು ಸರಿಯಾದ ರೀತಿಯಲ್ಲಿ ಗೌರವಿಸಿದ್ದೇವೆ.

ಆದರೆ ದೇವರು ನಮಗೆ ನೀಡಿದ ಎಚ್ಚರಿಕೆಯನ್ನು ನಾವು ಎಷ್ಟು ಜಾಗರೂಕತೆಯಿಂದ ಪರಿಗಣಿಸುತ್ತೇವೆ.  ಅಪೊಸ್ತಲನಾದ ಪೌಲನು ತನ್ನ ಪತ್ರಿಕೆಯಲ್ಲಿ ಬರೆಯುವಾಗ ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನದೂತನ ಶಬ್ದದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಿಂದ ಇಳಿದು ಬರುವರು ಎಂದು ಹೇಳುತ್ತಾರೆ. ಯೇಸುಕ್ರಿಸ್ತನ ಬರೋಣವು ನೆನೆಸದ ಗಳಿಗೆಯಲ್ಲಿ ಇರುತ್ತದೆ. ಈ ಮಾತುಗಳನ್ನು ನಾವು ಹೇಗೆ ಗೌರವಿಸುತ್ತಿದ್ದೇವೆ.  ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದೇವಾ?

ಕ್ರಿಸ್ತನ ಮೊದಲ ಬರುವಿಕೆಯಲ್ಲಿ ಕ್ರಿಸ್ತನೆಂಬ ರಕ್ಷಕನು ಜನಿಸಿದರು ಎಂಬ ಸುದ್ದಿಯನ್ನು ನಂಬಿ ಎಷ್ಟು ಸಂತೋಷದಿಂದ, ಆರ್ಭಟದಿಂದ ಕೊಂಡಾಡುತ್ತಿದ್ದೇವೆ.  ಹಾಗೆಯೇ ಎರಡನೇ ಬರುವಿಕೆಯ ಸುದ್ದಿಯನ್ನು ಕೇಳಿದ ನಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೇವೆ.   ಸಿದ್ಧರಾಗುತ್ತಿದ್ದೇವೆಯೇ?  ಇದನ್ನು ಸಂಭ್ರಮದೊಂದಿಗೆ, ಆರ್ಭಟದೊಂದಿಗೆ ಎದುರುಗೊಳ್ಳಲು ಸಿದ್ಧರಾಗೋಣ.  ನಾವು ಸಿದ್ಧರಾಗದಿದ್ದರೆ, ಯೇಸು ಹೇಳಿದ ಹತ್ತು ಮಂದಿ ಕನ್ಯೆಯರ ದೃಷ್ಟಾಂತದಲ್ಲಿ ಇರುವ  ಬುದ್ಧಿ ಇಲ್ಲದ ಕನ್ಯೆಯರಾಗಿ ನಾವೂ ಸಹ ಇರುತ್ತೇವೆ.  ಆದ್ದರಿಂದ ನಾವು ಬುದ್ಧಿಯುಳ್ಳ  ಕನ್ಯೆಯರಂತೆ ಎಚ್ಚರವಾಗಿದ್ದು ಅವರ ರಾಜ್ಯವನ್ನು ಸ್ವತಂತ್ರಿಸಿಕೊಳ್ಳೋಣ.  ಇಷ್ಟು ದಿನ ಬರದವರು ಇನ್ನು ಮುಂದೆ ಬರುತ್ತಾರೋ ಎಂದು ನಿದ್ದೆ ಮಾಡುವವರಂತೆ ಈ ಸಂದೇಶವನ್ನು ಕೇಳಿಯೂ ಕೇಳದವರಂತೆ ಇದ್ದರೆ ಅವರೊಂದಿಗೆ  ಹೋಗಲು ಸಾಧ್ಯವೇ ಇಲ್ಲ!  ಆದ್ದರಿಂದ ಎಚ್ಚರಗೊಂಡು ಕ್ರಿಸ್ತನನ್ನು ಭೇಟಿಯಾಗಲು ಸಿದ್ಧರಾಗೋಣ, ಅವರೊಂದಿಗೆ ಹೋಗೋಣ.
-    A.  ಬ್ಯೂಲ

ಪ್ರಾರ್ಥನಾ ಅಂಶ:
ಹಳ್ಳಿಗಳಲ್ಲಿ ನಡೆಯುವ ಮಕ್ಕಳ ಮತ್ತು ಯೌವನಸ್ಥರ ಸೇವೆಗಳನ್ನು  ವಿರೋಧಿಸುವ ಸೇವಾ ವಿರೋಧಿಗಳನ್ನು ದೇವರು ಭೇಟಿಯಾಗುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş