Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.03.2022
Share:

By Village Missionary Movement

Tuesday, 15-Mar-2022

ಧೈನಂದಿನ ಧ್ಯಾನ(Kannada) – 15.03.2022

ಮೊಣಕಾಲಿನಲ್ಲಿ ಶಕ್ತಿ

"ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ” - ಮಾರ್ಕ 11:24

ಒಬ್ಬ ಮಿಷನರಿಯು ತನ್ನ ಸೇವೆಯನ್ನು ಪ್ರಾರಂಭಿಸಲು ಕಳುಹಿಸಲ್ಪಟ್ಟ ಸ್ಥಳಕ್ಕೆ ಉತ್ಸಾಹದಿಂದ ಹೋದನು.  ತಿಂಗಳುಗಳು ಮತ್ತು ವರ್ಷಗಳು ಉರುಳಿದರೂ, ಅವರ ಸುವಾರ್ತೆಯನ್ನು ಕೇಳಲು ಒಬ್ಬರೂ ಸಿದ್ಧರಿರಲಿಲ್ಲ, ಮತ್ತು ಮೊಂಡರಾಗಿಯೂ, ಮನ ಬಂದಂತೆ ಜೀವಿಸುವವರಾಗಿಯೂ ಕಾಣಲ್ಪಟ್ಟರು. ದಣಿವರಿಯದೆ ಸೇವೆ ಮಾಡಿದರೂ ಕೆಲವರನ್ನೂ ರಕ್ಷಣೆಗೆ ಕರೆತರಲಾಗಲಿಲ್ಲವೇ ಎಂದು ನೆನೆಸಿ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು ಎಂದುಕೊಂಡು ಬೇಸರದಿಂದ ಪಟ್ಟಣದ ಇನ್ನೊಂದು ಭಾಗಕ್ಕೆ ಬಂದರು.  ಅಲ್ಲಿ ರಸ್ತೆಯ ಬಳಿ ಕಲ್ಲು ಒಡೆಯುತ್ತಿರುವ ಒಂದು ವ್ಯಕ್ತಿಯನ್ನು ನೋಡಿದರು.  ದೊಡ್ಡ ದೊಡ್ಡ ಬಂಡೆಗಳನ್ನು ಅವರು ಸುತ್ತಿಗೆಯಿಂದ ಒಡೆಯುತ್ತಿದ್ದರು.  ಸೇವಕರು ಅವರ ಬಳಿಗೆ ಹೋಗಿ, "ಅಯ್ಯಾ, ನೀವು ಹೇಗೆ ಇಂತಹ ದೊಡ್ಡ ಗಟ್ಟಿಯಾದ ಬಂಡೆಗಳನ್ನು ಒಡೆಯಲು ಸಾಧ್ಯವಾಗುತ್ತಿದೆ?" ಎಂದು ಕೇಳಿದರು.  ಅದಕ್ಕೆ ಕಲ್ಲು ಒಡೆಯುವವರು, “ಅಯ್ಯಾ, ನೀವು ಗಟ್ಟಿಯಾದ ಬಂಡೆಯನ್ನು ಒಡೆಯುವಾಗ, ನಿಮ್ಮ ಮೊಣಕಾಲುಗಳ ಮೇಲೆ ನಿಂತು ಅದನ್ನು ಒಡೆಯಬೇಕು.  ನಿಮ್ಮ ಮೊಣಕಾಲುಗಳ ಮೇಲೆ ನಿಂತಾಗ ನೀವು ಯಾವ ರೀತಿಯ ಗಟ್ಟಿಯಾದ ಬಂಡೆಯನ್ನಾದರೂ ಒಡೆದುಬಿಡಬಹುದು”  ಎಂದರು. ಅವರ ಮೂಲಕ ದೇವರು ತನ್ನೊಂದಿಗೆ ಮಾತನಾಡುತ್ತಿರುವುದನ್ನು  ಕ್ಷಣಾರ್ಧದಲ್ಲಿ ಆ ಸೇವಕನು ಅರ್ಥಮಾಡಿಕೊಂಡರು.  ಉತ್ಸಾಹದಿಂದ ಮನೆಗೆ ಹಿಂತಿರುಗಿ, ಅಂದಿನಿಂದ ಹಲವು ಗಂಟೆಗಳ ಕಾಲ ಮೊಣಕಾಲುಗಳ ಮೇಲೆ ನಿಂತು ಪ್ರಾರ್ಥಿಸಿ ಜಯವನ್ನು ಕಂಡರು.  ಮಂಡಿಯೂರಿ ನಿಲ್ಲುವುದೇ ಯಶಸ್ಸಿನ ಗುಟ್ಟು.

ಸತ್ಯವೇದದಲ್ಲಿ, ದಾನಿಯೇಲನು, ಎಲೀಯ, ಪೌಲನು ಮತ್ತು ಎಸ್ತೇರಳು ಇವರೆಲ್ಲರೂ ಪ್ರಾರ್ಥಿಸಿ ಗೆದ್ದವರು.  ನಾವು ಸಹ ಮೊಣಕಾಲುಗಳ ಮೇಲೆ ನಿಂತು ನಮ್ಮ ಹೃದಯವನ್ನು ಸುರಿಯುವಾಗ ಅಧಿಕ ಬಲವನ್ನು ಪಡೆಯಲು ಸಾಧ್ಯ. ನಿಮ್ಮ ಜೀವನದಲ್ಲಿ ಸೋಲುಗಳ ಸರಣಿಯನ್ನು ನೆನೆಸಿ ಆಯಾಸಗೊಂಡಿದ್ದೀರಾ?  ಎಷ್ಟೇ ಪ್ರಯತ್ನಿಸಿದರೂ ಬದಲಾವಣೆ ಇಲ್ಲ ಎಂದು ಕಣ್ಣೀರು ಸುರಿಸುತ್ತಿದ್ದೀರಾ?  ನಿಮ್ಮ ಮೊಣಕಾಲುಗಳನ್ನು ಹಾಕಿರಿ.  ಯಶಸ್ಸಿಗಾಗಿ ನಾವು ಎಷ್ಟೇ ಪ್ರಯತ್ನಿಸಿದರೂ ಜಯವನ್ನು ಕೊಡುವವರು ನಮ್ಮ ದೇವರು ಮಾತ್ರವೇ. ಮೆದುಳು ಮಾಡಲು ಸಾಧ್ಯವಾಗದಿರುವುದನ್ನು, ಮೊಣಕಾಲುಗಳು ಸಾಧಿಸಬಹುದು.  ನಿಮ್ಮ ಯೌವನಸ್ಥ ಮಕ್ಕಳು ಮನ ಬಂದಂತೆ ಜೀವಿಸುತ್ತಿರುವ ಆ ಸ್ಥಿತಿಯನ್ನು ಬದಲಾಯಿಸಲು ನೀವು ಅನೇಕರ ಸಲಹೆಯನ್ನು ಪಡೆಯುತ್ತಿದ್ದೀರಾ?  ನಿಮಗೊಂದು ಆಲೋಚನೆ ಅಂತರಂಗದಲ್ಲಿ ಮೊಣಕಾಲೂರಿ. ನಿಮ್ಮ ಕಣ್ಣೀರಿಗೂ ಪ್ರಾರ್ಥನೆಗೂ  ಖಂಡಿತವಾಗಿ ಉತ್ತರವಿದೆ.

ಪ್ರೀತಿಯ ಸೇವಕರೇ!  ನಾನು ಎಷ್ಟು ವರ್ಷದಿಂದ ಸೇವೆ ಮಾಡುತ್ತಿದ್ದೇನೆ.  ಆದರೂ ಯಾವ ಪ್ರಯೋಜನವೂ ಇಲ್ಲ, ನಾನು ಇಲ್ಲಿಯವರೆಗೆ ಮಾಡಿದ ಎಲ್ಲಾದರಲ್ಲಿಯೂ ಯಾವುದೇ ಪ್ರಯೋಜನವಿಲ್ಲ ಎಂದು ಕೊರಗುತ್ತಿದ್ದೀರಾ?  ನೀವು ಕರ್ತನಿಗಾಗಿ ಮಾಡುವ ಪ್ರತಿಯೊಂದು ಸಣ್ಣ ಕೆಲಸವೂ ವ್ಯರ್ಥವಾಗುವುದಿಲ್ಲ ಎಂದು ಸಂಪೂರ್ಣ ಖಚಿತವಾಗಿ ನಂಬಿರಿ.  ಆದರೆ ನೀವು ಏನು ಮಾಡಿದರೂ, ನಿಮ್ಮ ಮೊಣಕಾಲುಗಳ ಮೇಲೆ ನಿಂತು ಮಾಡಿ ನೋಡಿ.  ನೀವು ಖಂಡಿತವಾಗಿಯೂ ಸುಗ್ಗಿಯನ್ನು ನೋಡುತ್ತೀರಿ.
-    Bro.  ಹನೀಸ್ ಸಮುವೇಲ್

ಪ್ರಾರ್ಥನಾ ಅಂಶ:
ಆಸ್ಪತ್ರೆ ಸೇವೆಗಳು ಮತ್ತು ಶಾಲಾ ಮಿಷನ್ ಸೇವೆಗಳು ಸುಗಮವಾಗಿ ನಡೆಯಲು ಹೊಸ ಮಾರ್ಗಗಳು ತೆರೆಯಲ್ಪಡಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al