By Village Missionary Movement
Monday, 14-Mar-2022ಧೈನಂದಿನ ಧ್ಯಾನ(Kannada) – 14.03.2022
ಲಸಿಕೆ
"ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು" - ಕೀರ್ತನೆ 91:10
ಮಾರಣಾಂತಿಕ ಕಾಯಿಲೆ ಹರಡುತ್ತಿರುವ ಸಂದರ್ಭದಲ್ಲಿ ಜಾನ್ ಜಿ ಲೇಕ್ ಎಂಬ ಸೇವಕರು ಆಸ್ಪತ್ರೆಗೆ ತೆರಳಿ ರೋಗಿಗಳಿಗಾಗಿ ಪ್ರಾರ್ಥಿಸುತ್ತಾ ಇದ್ದರು. ಇದನ್ನು ನೋಡಿದ ವೈದ್ಯರು ಅವರನ್ನು ಕರೆದು, “ನೀವು ಈ ಮಾರಣಾಂತಿಕ ರೋಗಿಯ ತಲೆಯ ಮೇಲೆ ಕೈಯಿಟ್ಟು ಪ್ರಾರ್ಥಿಸುತ್ತಿದ್ದೀರಿ; ಆ ರೋಗಗಳು ನಿಮಗೆ ಸೋಂಕುವುದಿಲ್ಲವೇ? ನೀವು ಲಸಿಕೆ ಹಾಕಿಕೊಂಡಿದ್ದೀರಾ? ” ಎಂದು ಕೇಳಿದರು. ಅದಕ್ಕೆ ಆ ಸೇವಕರು ಹೇಳಿದರು, "ಹೌದು, ನಾನು ಲಸಿಕೆ ಹಾಕಿಕೊಂಡಿದ್ದೇನೆ" ಎಂದರು. ಯಾವ ಲಸಿಕೆ ಮತ್ತು ಯಾವಾಗ ಹಾಕಿಸಿಕೊಂಡಿರಿ? ಎಂದು ಕೇಳಿದಾಗ ಅವರು ಹೇಳಿದರು, "ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು (ರೋಮಾ 8:2) ಎಂಬ ಲಸಿಕೆ ಹಾಕಿಸಿಕೊಂಡಿದ್ದೇನೆ" ಎಂದರು. ಈ ಸೇವಕರು ಹಾಕಿಸಿಕೊಂಡ ಲಸಿಕೆ ಯಾವುದು? ಪಾಪ, ಮರಣ ಎಂಬ ನಿಯಮಗಳ ಬಿಡುಗಡೆ ಎಂಬ ಲಸಿಕೆಯನ್ನು.
ನಾವು ಸತ್ಯವೇದವನ್ನು ನೋಡುವುದಾದರೆ, ಇಸ್ರಾಯೇಲ್ ಜನರು ಐಗುಪ್ತದಲ್ಲಿ ಗುಲಾಮರಾಗಿದ್ದಾಗ ಅನೇಕ ವ್ಯಾಧಿಗಳು ಉಂಟಾದವು. ಆದರೆ ಇಸ್ರಾಯೇಲ್ ಜನರಿಗೆ ಏನೂ ಹಾನಿಯಾಗಲಿಲ್ಲ. ಏಕೆಂದರೆ ದೇವರನ್ನು ಒರಗಿಕೊಂಡಿರುವವರಿಗೆಲ್ಲಾ ಅವರೇ ಬಂಡೆಯು, ಕೋಟೆಯು, ದುರ್ಗವು, ಗುರಾಣಿಯು, ಆಶ್ರಯ ಗಿರಿಯಾಗಿ ನೆರಳಾಗಿದ್ದರು. ಇಂದಿಗೂ ಹಾಗೆಯೇ ಇದ್ದಾರೆ.
ಕ್ರಿಸ್ತನಲ್ಲಿ ಪ್ರಿಯರೇ! ಇಂದು ಅನೇಕ ವಿಚಿತ್ರ ಸಾಂಕ್ರಾಮಿಕ ರೋಗಗಳು ಹರಡಿದ್ದರೂ, ಯಾವುದೂ ನಮ್ಮನ್ನು ಜಯಿಸಲು ಸಾಧ್ಯವಿಲ್ಲ. ಏಕೆಂದರೆ ನಾವು ಹಾಕಿಸಿಕೊಂಡಿರುವ ಲಸಿಕೆ ಅಂಥದ್ದು. ಒಬ್ಬನು ಕ್ರಿಸ್ತನಲ್ಲಿದ್ದರೆ ಮಾತ್ರವೇ ಈ ಲಸಿಕೆ ಕೆಲಸ ಮಾಡುತ್ತದೆ. ಕ್ರಿಸ್ತನಿಂದ ಹೊರಗಿರುವವರಿಗೆ ಯಾವುದೇ ಗ್ಯಾರಂಟಿ ಇಲ್ಲ. ನೀನು ಈಗಲೇ ನನ್ನ ಬಳಿಗೆ ಬಾ ಎಂದು ಯೇಸು ನಿಮ್ಮನ್ನು ಕರೆಯುತ್ತಿದ್ದಾರೆ. ನಿಮ್ಮ ಆಂತರಿಕ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಿ ಬರುವಂತೆ ದೇವರು ಎದುರುನೋಡುತ್ತಿದ್ದಾರೆ. ಆತನಿಗೆ ನಿನ್ನನ್ನು ಒಪ್ಪಿಸಿಕೊಡುವುದಾದರೆ, ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು. ಆಮೆನ್!
- P. ಶಿವ
ಪ್ರಾರ್ಥನಾ ಅಂಶ:
ಪ್ರಾರ್ಥನಾ ಗುಡಾರದ ಕಟ್ಟಡ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿಗಳ ಸಂರಕ್ಷಣೆಗಾಗಿ; ಅವರ ಕುಟುಂಬವು ಆಶೀರ್ವದಿಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482