By Village Missionary Movement
Sunday, 13-Mar-2022ಧೈನಂದಿನ ಧ್ಯಾನ(Kannada) – 13.03.2022 (Kids Special)
Benefit ಇದೆಯಾ?
"ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು..." - ಎಫೆಸದವರಿಗೆ 2:10
Children's special ಮೂಲಕ ಕಥೆಯನ್ನು ಕೇಳುತ್ತಿರುವ ನಿಮಗೆ ಪ್ರೀತಿಯ ಅಭಿನಂದನೆಗಳು. ಇವತ್ತು ನಾವೆಲ್ಲ ಹೋಗಿ ಕಾಡು ಸುತ್ತಿನೋಡೋಣ ಬರ್ತೀರ? ಕಾಡಿನಲ್ಲಿ ಏನೇನೆಲ್ಲಾ ಇರುತ್ತೆ. ವೈವಿಧ್ಯಮಯ ಸಸ್ಯಗಳು, ಬಣ್ಣಬಣ್ಣದ ಹೂವುಗಳು, ಪಕ್ಷಿಗಳು, ಮರಗಳು ಮತ್ತು ಎಲ್ಲವೂ ಇರುತ್ತದೆ. ಅಷ್ಟೇ ತಾನೇ! ಆಲದ ಮರ ಮತ್ತು ಮಾವಿನ ಮರ ನಮಗೆ ಏನು ಹೇಳುತ್ತಾರೆಂದು ಕೇಳೋಣವಾ, ಸಂತೋಷಾನಾ!
ಆ ಕಾಡಿನಲ್ಲಿ ಆಲದ ಮರ ದೊಡ್ಡದಾಗಿ, ಎತ್ತರವಾಗಿ ಇದ್ದದರಿಂದ ಸಾಕಷ್ಟು ನೆರಳು ನೀಡುತ್ತಿತ್ತು. ಆದರೆ ಆ ತೋಟದ ನೆರಳಿನಲ್ಲಿ ಯಾರಾದರೂ ಕುಳಿತುಕೊಳ್ಳಲು ಬಂದರೆ, ತನ್ನ ಒಣಗಿದ ಎಲೆಗಳನ್ನು ಅವರ ಮೇಲೆ ಉದುರಿಸಿ ಬಿಟ್ಟು, ಅವರನ್ನು ಓಡಿಸಿ ಬಿಡುತ್ತಿತ್ತು. ದೊಡ್ಡ ಮರ, ಗೂಡು ಕಟ್ಟಲು ಒಳ್ಳೆಯ ಮರ ಎಂದು ಭಾವಿಸಿ ಪಕ್ಷಿಗಳು ಬರುವಾಗೆಲ್ಲಾ ಆಲದ ಮರವು ಕೋಪವಾಗಿ ಮಾತನಾಡಿಬಿಡುತ್ತಿತ್ತು, "ಇಲ್ಲಿಂದ ಹೋಗಿ, ನೀವು ಕಿರುಚುತ್ತಲೇ ಇರ್ತೀರ ಇಲ್ಲಿ ಗೂಡು ಕಟ್ಟಬಾರದು" ಎಂದು ಹೇಳಿಬಿಡುತ್ತಿತ್ತು ಆ ಆಲದ ಮರ ಈ ರೀತಿ ಯಾರಿಗೂ ಪ್ರಯೋಜನವಾಗದೆ, ಗರ್ವದಿಂದಿತ್ತು. ಪಕ್ಷಿಗಳೆಲ್ಲ ಮಾವಿನ ಮರದಲ್ಲಿ ಹೋಗಿ ಗೂಡು ಕಟ್ಟಿ ಜೀವಿಸಿದವು. ಮಾವಿನ ಮರ ಮತ್ತು ಪಕ್ಷಿಗಳು ಉತ್ತಮ ಸ್ನೇಹಿತರಾಗಿದ್ದರು ಮತ್ತು ಸಂತೋಷವಾಗಿ, ಜಾಲಿಯಾಗಿ ಇದ್ದರು.
ಇದು ಆಲದ ಮರಕ್ಕೆ ಇಷ್ಟವಿಲ್ಲ. ಸುಮ್ಮನೆ ಶಬ್ದ ಮಾಡುತ್ತಾ ಕಿರುಚುತ್ತಲೇ ಇರಬೇಡಿ. ನನಗೆ ಸಿಟ್ಟು ಬರುತ್ತಿದೆ ಎಂದು ಅಸೂಯೆಪಡುತ್ತಿತ್ತು. ಒಂದು ದಿನ ಆ ದಾರಿಯಲ್ಲಿ ಬಂದ ಜೇನುನೊಣಗಳು ಆಲದ ಮರದ ಕಡೆಗೆ ಹೋದವು. ಛೀ, ಛೀ... ನಿಮ್ಮ ಕಿರುಕುಳ ನನಗೆ ಸಹಿಸಲಾಗುತ್ತಿಲ್ಲ ಹೋಗಿ ಎಂದು ಓಡಿಸಿ ಬಿಟ್ಟಿತು. ತಕ್ಷಣವೇ ಜೇನುನೊಣಗಳು ಪಕ್ಕದಲ್ಲಿದ್ದ ಮಾವಿನ ಮರಕ್ಕೆ ಹೋಗಿ ಗೂಡು ಕಟ್ಟಿ ಅಲ್ಲಿ ವಾಸಿಸುತ್ತಿದ್ದವು.
ಒಂದು ದಿನ ಇಬ್ಬರು ಮರ ಕಡಿಯುವವರು ಕಾಡಿಗೆ ಬಂದು ಮಾವಿನ ಮರದ ಮೇಲೆ ಜೇನುನೊಣಗಳಿದ್ದ ಕಾರಣ ಹತ್ತಿರ ಹೋಗಲು ಹೆದರಿ ಆಲದ ಮರವನ್ನು ಕಡಿದರು. "ಯಾರಿಗೂ ಉಪಯೋಗವಿಲ್ಲದ ಆಲದ ಮರವನ್ನು ಏಕೆ ಕಡಿಯಬೇಕು?" ಎಂದು ಜೇನು ನೊಣಗಳು ಹೇಳಿದವು. "ಇಲ್ಲ ಸ್ನೇಹಿತರೇ, ಆಲದ ಮರಕ್ಕೆ ಸಹಾಯ ಮಾಡಿ. ಇದು ಇನ್ನು ಮುಂದೆ ಉಪಯುಕ್ತವಾಗಿರುತ್ತದೆ” ಎಂದು ಮಾವಿನ ಮರ ಹೇಳಿದ ಕೂಡಲೇ, ಜೇನುನೊಣಗಳು ಹಿಂಡು ಹಿಂಡಾಗಿ ಹೋಗಿ ಮರ ಕಡಿಯುವವರನ್ನು ಓಡಿಸಿದವು. “ನೀವು ಮಾಡಿದ ಸಹಾಯದಿಂದ ನಾನು ಬದುಕುಳಿದಿದ್ದೇನೆ. ನಾನು ಇನ್ನು ಮುಂದೆ ಎಲ್ಲರಿಗೂ ಉಪಯುಕ್ತವಾಗಿರುತ್ತೇನೆ Thank you ಮಾವಿನ ಮರವೇ" ಎಂದು ಹೇಳಿದ ಕೂಡಲೇ, ಹಕ್ಕಿಗಳು ಮತ್ತು ಜೇನುನೊಣಗಳೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದವು.
ಪುಟಾಣಿಗಳೇ, ಮಾವಿನ ಮರದ ಹಾಗೆ ನೀವು ಕೂಡ ಇತರರಿಗೆ ಉಪಯುಕ್ತವಾಗಿರಬೇಕು. ಆಲದ ಮರದಂತೆ ಇದ್ದರೆ ನಿಮ್ಮನ್ನು ಬದಲಾಯಿಸಿಕೊಳ್ಳಲು ಹಿಂಜರಿಯಲೇಬಾರದು. Ok ನಾ God bless you all.
- A. ಬ್ಯೂಲ
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482