Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.03.2022
Share:

By Village Missionary Movement

Saturday, 12-Mar-2022

ಧೈನಂದಿನ ಧ್ಯಾನ(Kannada) – 12.03.2022

ನಿನಗೆ ಏನು ಬೇಕು?

"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" - ಮತ್ತಾಯ 6:33

ನಾವು ಸತ್ಯವೇದದಲ್ಲಿ ನೋಡುವಾಗ ಕರ್ತನು ಇಬ್ಬರ ಬಳಿ, "ನಿನಗೆ ಏನು ಬೇಕು?"  ಎಂದು ಕೇಳುತ್ತಾರೆ.  ಅವರು ನೀಡಿದ ಉತ್ತರವು ದೇವರಿಗೆ ತುಂಬಾ ಸಂತೋಷವನ್ನುಂಟು ಮಾಡಿತು.  ಅದರಲ್ಲಿ ಮೊದಲನೆಯ ವ್ಯಕ್ತಿ ಸೊಲೊಮೋನನು.  ಸೊಲೊಮೋನನು ರಾಜನಾಗಿದ್ದ ಸಂದರ್ಭದಲ್ಲಿ ಅವರ ಯಜ್ಞಗಳನ್ನು ದೇವರು ಅಂಗೀಕರಿಸಿ,  ಅವರ ಕನಸಿನಲ್ಲಿ ಕಾಣಿಸಿಕೊಂಡು ಅವರನ್ನು ಏನು ಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಾರೆ.  ಅವರು ನೆನೆಸಿದ್ದರೆ ಸಂಪತ್ತು, ಅರಮನೆ ಮತ್ತು ಇತರ ರಾಜ್ಯಗಳಂತಹ ಯಾವುದನ್ನಾದರೂ ಕೇಳಿರಬಹುದು. ಆದರೆ ಅವರೋ,  "ನಿಮ್ಮ ಸ್ವಕೀಯ ಪ್ರಜೆಯನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿ" ಎಂದು ಕೇಳುತ್ತಾರೆ. ಅದು ದೇವರಿಗೆ ಇಷ್ಟವಾಗಿದ್ದದರಿಂದ ಅವರು ಕೇಳಿದ ವಿವೇಕದೊಂದಿಗೆ ಕೇಳದ  ಐಶ್ವರ್ಯವನ್ನು ಘನತೆಯನ್ನೂ ಕೊಡುತ್ತಾರೆ.

ಎರಡನೆಯ ವ್ಯಕ್ತಿ ಮೋಶೆ, ವಾಕ್ಚಾತುರ್ಯವಿಲ್ಲದವನು, ಮಂದ ನಾಲಿಗೆಯುಳ್ಳ ವ್ಯಕ್ತಿಯೂ ಆಗಿದ್ದನು. ದೇವರು ಅವರ ಬಳಿ ಮಾತನಾಡುವಾಗ  ತನ್ನ ಶಾರೀರಿಕ ಕೊರತೆ ಬದಲಾಗಬೇಕೆಂದೋ, ಅಥವಾ ಲೌಕಿಕವಾದ ಆಶೀರ್ವಾದವನ್ನೋ ಕೇಳದೆ, "ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು"  ಎಂದು ದೇವರು  ಮೆಚ್ಚುವಂತಹ ಒಂದು ಬೇಡಿಕೆಯನ್ನು ಕೇಳುತ್ತಾರೆ. ದೇವರು ಅದು ತನ್ನ ದೃಷ್ಟಿಯಲ್ಲಿ ಸರಿಯಾದದ್ದೆಂದು ಕಂಡು  ತಕ್ಷಣ ಮೋಶೆಗೆ  ತನ್ನನ್ನು ಬಹಿರಂಗಪಡಿಸುತ್ತಾರೆ.  ಹಿಂದೆಂದೂ ಸಂಭವಿಸದ ಅದ್ಭುತಗಳನ್ನು ಮತ್ತು ಅತಿಶಯವನ್ನು, ದೊಡ್ಡ ದೊಡ್ಡ ಕಾರ್ಯಗಳನ್ನು  ಮಾಡುವಂತೆ  ಅವರನ್ನು ಉಪಯೋಗಿಸಿದರು.

ಇದನ್ನು ಓದುತ್ತಿರುವ ದೇವರ ಮಕ್ಕಳೇ, ನಾವು ಈ ದಿನದಲ್ಲಿ ನಮ್ಮನ್ನು ನಾವೇ  ಪರೀಕ್ಷಿಸಿಕೊಳ್ಳೋಣ.  ದೇವರು ನಮ್ಮ ಬಳಿ ಬಂದು ಇದೇ ಪ್ರಶ್ನೆಯನ್ನು ಕೇಳಿದಾಗ, ನಮ್ಮ ಉತ್ತರವೇನಾಗಿರುತ್ತದೆ?  ಲೌಕಿಕ ಆಶೀರ್ವಾದಗಳನ್ನಾ ಅಥವಾ ದೇವರಿಗೆ ಮೆಚ್ಚಿಕೆಯಾಗುವ, ಆತನ ಹೆಸರನ್ನು ಮಹಿಮೆಪಡಿಸುವಂತಹ, ಆತನನ್ನು ಸಂತೋಷಪಡಿಸುವ ವಿಷಯಗಳನ್ನು ಕೇಳುತ್ತೇವಾ?  ಸತ್ಯವೇದವು ಹೇಳುತ್ತದೆ, "ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು"  ಆದ್ದರಿಂದ ದೇವರ ರಾಜ್ಯವನ್ನು ಮೊದಲು ಹುಡುಕೋಣ, ದೇವರನ್ನು ಮೆಚ್ಚಿಸೋಣ. ಆಮೆನ್.
-    S.P.  ಚಂದನಪಾಂಡಿ

ಪ್ರಾರ್ಥನಾ ಅಂಶ:
ಪ್ರಾರ್ಥನಾ ಗುಡಾರದ ಕಟ್ಟಡ ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳುವಂತೆ;  ದೇವರ ನಾಮ ಮಹಿಮೆಗಾಗಿ ಅದನ್ನು ಪ್ರತಿಷ್ಠಾಪಿಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin