Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.03.2022
Share:

By Village Missionary Movement

Friday, 11-Mar-2022

ಧೈನಂದಿನ ಧ್ಯಾನ(Kannada) – 11.03.2022

ಗುಣವತಿಯಾದ ಸ್ತೀ

"...ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು ಎಂದು ಆಕೆಯನ್ನು ಕೊಂಡಾಡುವನು" - ಜ್ಞಾನೋಕ್ತಿ 31:29

ನನ್ನ ಪ್ರೀತಿಯ ತಾಯಿ ಕಳೆದ ಜನವರಿ 15 ರಂದು ಕರ್ತನಲ್ಲಿ ನಿದ್ರಿಸಿದರು.  ದೇವರ ನಾಮ ಮಹಿಮೆಗಾಗಿ ನಾನು ಅವರ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ನನ್ನ ತಾಯಿ ಕ್ರಿಸ್ತನನ್ನು ತಿಳಿಯದ ಕುಟುಂಬದಲ್ಲಿ ಜನಿಸಿದರು.  ಆದರೂ ಸತ್ಯವೇದ ಸ್ತ್ರೀಯರ ಅನೇಕ ಸದ್ಗುಣಗಳು ಅವರಲ್ಲಿ ಅಂತರ್ಗತವಾಗಿದ್ದವು.  ತಾಳ್ಮೆ, ನಮ್ರತೆ, ಪ್ರೀತಿ ಮತ್ತು ವಿಧೇಯತೆಗೆ ಉದಾಹರಣೆಯಾಗಿದ್ದರು.  ನಮ್ಮ ಹೆತ್ತವರು ನಮ್ಮ ಮುಂದೆ ಎಂದೂ ಜಗಳವಾಡಲಿಲ್ಲ, ನಮ್ಮನ್ನು ತುಂಬಾ ಪ್ರೀತಿಯಿಂದ ಬೆಳೆಸಿದರು.  ನಾನು ನನ್ನ ಕಾಲೇಜು ದಿನಗಳಲ್ಲಿ ಕರ್ತನನ್ನು ಅಂಗೀಕರಿಸಿ, ನನ್ನ ತಾಯಿಗೂ ಯೇಸುವನ್ನು ಪರಿಚಯಿಸಿದೆ.  ಆದರೂ ಅವರು ಯೇಸುವನ್ನು ಅಂಗೀಕರಿಸಲಿಲ್ಲ ಏಕೆಂದರೆ ಅವರು ಗಂಡನ ಮಾತನ್ನು ಮೀರಲು ಸಾಧ್ಯವಾಗಲಿಲ್ಲ.

ಒಂದು ದಿನ ನನ್ನ ಅಕ್ಕನ ಹೆರಿಗೆಯ ಸಮಯದಲ್ಲಿ ನನ್ನ ತಾಯಿ ಒಬ್ಬರೇ ಉತ್ತರ ಭಾರತಕ್ಕೆ (ಜೋಧ್‌ಪುರ್) ಹೋಗಬೇಕಾಯಿತು.  ಈಗಿನಂತೆ ಟೆಲಿಕಮ್ಯುನಿಕೇಷನ್ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಅಮ್ಮನ ಪುಟ್ಟ ಪ್ರಾರ್ಥನೆ ಅವರನ್ನು ಸುರಕ್ಷಿತವಾಗಿ ಅಕ್ಕನ ಮನೆಗೆ ಕರೆತಂದಿತು.  ನನ್ನ ಮಗಳ ಹೆರಿಗೆಯ ಸರಿಯಾದ ಸಮಯದಲ್ಲಿ, ತಕ್ಕ ಸ್ಥಳದಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಸೇರಿಸು. ತಮಿಳು ಬಿಟ್ಟು ಬೇರೆ ಭಾಷೆಯೇ ಗೊತ್ತಿಲ್ಲದ ಅಮ್ಮನ, ಈ ಪುಟ್ಟ ಪ್ರಾರ್ಥನೆಗೆ ಕರ್ತನು ನೀಡಿದ ಉತ್ತರವೇ, ಅವರು ಕರ್ತನನ್ನು ಅಂಗೀಕರಿಸುವಂತೆ ಮಾಡಿತು.  ನಂತರ, ಡಿಸೆಂಬರ್ 1982 ರಲ್ಲಿ, ನಮ್ಮ ಸ್ವಂತ ಊರಿನಲ್ಲಿ ದೀಕ್ಷಾಸ್ನಾನ ಪಡೆದರು.  ಅದರ ನಂತರ ನನ್ನ ತಾಯಿಯನ್ನು ಅನೇಕ ಸಾವಿನ ಬಲೆಗಳಿಂದ ತಪ್ಪಿಸಿ (Ulser, Lepto spyros's, Heart block, Blood vomit, short circuit, corona)  ಸುಂದರವಾಗಿ ಮುನ್ನಡೆಸಿ, 94 ವರ್ಷಗಳು ಜೀವವನ್ನು ಕೊಟ್ಟರು.  ತನ್ನ ತಂದೆ-ತಾಯಿ, ಗಂಡ ಮತ್ತು ಸೊಸೆಯನ್ನು ಅವರವರ ಮರಣದ ಹಾಸಿಗೆಯಲ್ಲಿ ನಗುಮುಖದಿಂದ ಉಪಚರಿಸಿದರು.  ಅವರು ಎಂದಿಗೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ ಮತ್ತು ಟೀಕಿಸುತ್ತಿರಲಿಲ್ಲ.  ಆಲಯಕ್ಕೆ ಹೋಗುವ ವಿಷಯದಲ್ಲಿ ಬಹಳ ಉತ್ಸಾಹವಾಗಿರುತ್ತಿದ್ದರು.  ಅವರು ತನ್ನ ಮರಣದ ಹಾಸಿಗೆ ಯಲ್ಲೂ ಗುಣುಗುಟ್ಟುವುದನ್ನು ಕಾಣಲೇ ಇಲ್ಲ.

ಹೌದು, ನನ್ನ ತಾಯಿಯ ಜೀವನದಲ್ಲಿ ಅವರು ನಮಗೆ ಹೀಗೆಲ್ಲಾ ಇರಬೇಕು ಎಂದು ಕೂಡ ಸಲಹೆ ನೀಡಿಲ್ಲ.  ಬದಲಾಗಿ ಗುಣವತಿಯಾದ ಸ್ತ್ರೀಯಾಗಿ ಬದುಕಿ ತೋರಿಸಿದರು.  ನಾವು ಕೂಡ ಪ್ರಾರ್ಥನೆಯೊಂದಿಗೆ ಮುಂಜಾನೆ ದೇವರನ್ನು ಹುಡುಕುವುದು, ಬಡವರಿಗೆ ಸಹಾಯ ಮಾಡುವುದು, ನಮ್ಮ ಮನೆಕೆಲಸಗಳನ್ನು ವ್ಯವಸ್ಥೆಗೊಳಿಸುವುದು,  ಪತಿಗೆ ಕಿರೀಟವಾಗಿರುವುದು ಹೀಗೆ ಎಲ್ಲಾ ಕಾರ್ಯಗಳು ನಮ್ಮೊಳಗೆ   ಕಾಣಲ್ಪಡುವಂತೆ ಪ್ರಾರ್ಥನೆಯೊಂದಿಗೆ ಪ್ರಯತ್ನಿಸೋಣ. ಆಗ ನಾವೂ ಕೂಡ ಗುಣವತಿಯಾದ ಸ್ತ್ರೀಯೆಂದು ಪತಿ-ಮಕ್ಕಳು ಧನ್ಯಳೆಂದು ಹೊಗಳುವ ಹಾಗೆ,  ಜೀವಿಸುವಂತೆ ದೇವರು ಕೃಪೆ ತೋರಿಸಲಿ.
-    Mrs.  ಭುವನಾ ಧನಬಾಲನ್

ಪ್ರಾರ್ಥನಾ ಅಂಶ:
ಬೈಬಲ್ ಕಾಲೇಜ್ ನಲ್ಲಿ ದೇವರ ಚಿತ್ತವಿರುವವರು ಸೇರಿ ತರಬೇತಿ ಪಡೆಯುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş