Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.03.2022
Share:

By Village Missionary Movement

Thursday, 10-Mar-2022

ಧೈನಂದಿನ ಧ್ಯಾನ(Kannada) – 10.03.2022

ಆರೋಗ್ಯಕರ ನಾಲಿಗೆ

“ಸಂತೈಸುವ ನಾಲಿಗೆ ಜೀವವೃಕ್ಷವು;..." — ಜ್ಞಾನೋಕ್ತಿ 15:4

ರಾಮು ಸೋಮು ಇಬ್ಬರೂ ಸ್ನೇಹಿತರು.  ಸೋಮು ರಾಮು ಬಳಿ ಏನು ಈಗೆಲ್ಲ ದಿನಾಲು ವಾಕಿಂಗ್ ಗೆ ಹೋಗ್ತಿದೀಯ, ಆಗಾಗ ಮೆಡಿಕಲ್ ನಲ್ಲಿ ಕಾಣ್ತಿದೀಯ ಅಂದನು. ತಕ್ಷಣ ರಾಮು ನಾನೊಬ್ಬ ಡಯಾಬಿಟೀಸ್ ಪೇಷೆಂಟ್,  ಅದಕ್ಕಾಗಿಯೇ ನಾನು ಪ್ರತಿದಿನ ಮಾತ್ರೆ ತೆಗೆದುಕೊಳ್ಳಬೇಕು ಎಂದನು.  ನಿನ್ನನ್ನು ನೀನೆ ರೋಗಿಯೆಂದು ಗುರುತಿಸಿಕೊಳ್ಳಬೇಡ.  ಅದು ಇನ್ನೂ ನಿನ್ನನ್ನು ಬಲಹೀನತೆಗೆ ಗುರಿಮಾಡುತ್ತದೆ. ನಿನ್ನ ದೇಹದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇದೆ ಎಂಬುದು ನಿಜವೇ. ಆದರೂ ಈ ಪರಿಸ್ಥಿತಿ ಬದಲಾಗುತ್ತದೆ.  ಇದರಿಂದ ನೀನು ಆಯಾಸಗೊಳ್ಳಬೇಕಾಗಿಲ್ಲ.  ನಂಬಿಕೆಯಿಂದ ಅದನ್ನು ಹರಕೆ ಮಾಡಿಬಿಟ್ಟು ಜೀವಿಸಬಹುದು ಎಂದನು.

ಹೌದು, ಇದೇ ರೀತಿ ನಾವು ಕೂಡ ಹಲವು ಬಾರಿ ಈ ಪರಿಸ್ಥಿತಿ  ಬದಲಾಗುವುದಿಲ್ಲ, ನಾನು ತುಂಬಾ ಬಳಲುತ್ತಿದ್ದೇನೆ.  ನಾನು ಹೀಗೇ ಇರಬೇಕು ಅಷ್ಟೇ ಎಂಬಂತಹ ಮಾತುಗಳನ್ನು ಹೇಳುತ್ತಾ ಆ ಪರಿಸರದಲ್ಲಿ ಬೇಕಾದ ಮಾನಸಿಕ ಧೈರ್ಯವನ್ನು ಕಳೆದುಕೊಳ್ಳುತ್ತೇವೆ.  ಸತ್ಯವೇದವು ಹೇಳುತ್ತದೆ, “ಜೀವನಮರಣಗಳು ನಾಲಿಗೆಯ ವಶ.  ಸಂತೈಸುವ ನಾಲಿಗೆ ಜೀವವೃಕ್ಷವು” ಎಂದೆಲ್ಲಾ ಹೇಳಲ್ಪಟ್ಟಿದೆ. ಹಾಗಾಗಿ ಬಾಯಿ ಮಾತಿನಲ್ಲಿ ಎಚ್ಚರವಿರಲಿ.  ಕಾನಾನ್ ದೇಶವನ್ನು ಸಂಚರಿಸಿ ನೋಡಲು ಹೋದ ಹನ್ನೆರಡು ಮಂದಿಯಲ್ಲಿ, ಕಾಲೇಬ್, ಯೆಹೋಶುವ ಇವರಿಬ್ಬರು ಮಾತ್ರ,  “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ; ಅದು ಸಮೃದ್ಧಿಯಾದ ದೇಶ" ಎಂದರು. ಇತರ ಹತ್ತು ವ್ಯಕ್ತಿಗಳೂ ಆ ದೇಶದ ನಿವಾಸಿಗಳು ಬಲಿಷ್ಠರು; ಅವರಿರುವ ಪಟ್ಟಣಗಳು ದೊಡ್ಡವಾಗಿಯೂ ಕೋಟೆ ಕೊತ್ತಲುಗಳುಳ್ಳವಾಗಿಯೂ ಅವೆ ಇದನ್ನು ಸ್ವಾಧೀನ ಮಾಡಿಕೊಳ್ಳಲು ಸಾಧ್ಯವಿಲ್ಲ   ಎಂದರು. ಇದನ್ನು ಕೇಳಿದ ಜನರೆಲ್ಲರೂ ಮೋಶೆಗೆ ವಿರೋಧವಾಗಿ ಗುಣುಗುಟ್ಟಿ ಅತ್ತು ಪ್ರಲಾಪಿಸಿದರು. ಆಗ ಕಾಲೇಬನು ಮತ್ತು ಯೆಹೋಶುವ ಅವರನ್ನು ಸುಮ್ಮನಿರಿಸಿ - ನಾವು ಆ ಪಟ್ಟಣವನ್ನು ಸುಲಭವಾಗಿ ಜಯಿಸಬಲ್ಲೆವು ಎಂದು ಹೇಳಿದರು. ಆದರೆ ಜನರು ದೇವರು ಮಾಡಿದ ಅದ್ಭುತಗಳನ್ನು ಮರೆತು, ಮತ್ತೆ ಪ್ರಲಾಪಿಸಿದರು.  ಹಾಗೆ ಪ್ರಲಾಪಿಸಿದವರು ಈ ಸಮೃದ್ಧ ಕಾನಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ.  ನಮ್ಮಿಂದ ಸ್ವಾಧೀನ ಮಾಡಿಕೊಳ್ಳಲು ಸಾಧ್ಯ, ಸುಲಭವಾಗಿ ಜಯಿಸಬಹುದು ಎಂದು ಹೇಳಿದ ಯೆಹೋಶುವ ಮತ್ತು ಕಾಲೇಬ್ ಕಾನಾನ್ ದೇಶವನ್ನು ಸ್ವಾಧೀನಮಾಡಿಕೊಂಡರು. 

ಇದನ್ನು ಓದುತ್ತಿರುವ ಪ್ರಿಯರೇ,  ನಿಮಗಿರುವ ಎಲ್ಲಾ ಸನ್ನಿವೇಶಗಳನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡಿರಿ.  ಒಳ್ಳೆಯ ಆರೋಗ್ಯಕರವಾದ ಮಾತುಗಳನ್ನು ಮಾತನಾಡೋಣ ಗೆಲ್ಲೋಣ. ಯೆಹೋಶುವ ಕಾಲೇಬ್ ಕಾನಾನ್ ಅನ್ನು ಸ್ವಾಧೀನ ಮಾಡಿಕೊಂಡ ಹಾಗೆ, ನಾವು ಕೂಡ ಶಾಶ್ವತವಾದ ಕಾನಾನನ್ನು ಸ್ವಾಧೀನ ಮಾಡಿಕೊಳ್ಳುವವರೆಗೆ ಒಳ್ಳೆಯ ಮತ್ತು ಆರೋಗ್ಯಕರ ವಿಷಯಗಳನ್ನು ಮಾತನಾಡೋಣ, ಸುಖವಾಗಿ ಜೀವಿಸೋಣ.
-    Mrs.  ಅನ್ಬುಜ್ಯೋತಿ ಸ್ಟಾಲಿನ್

ಪ್ರಾರ್ಥನಾ ಅಂಶ:
ಬೈಬಲ್ ಕಾಲೇಜಿನ ಪ್ರತಿಯೊಂದು ವಿದ್ಯಾರ್ಥಿಗಳೂ ಅಂತ್ಯಕಾಲ ಉಜ್ಜೀವನದ ಆಯುಧಗಳಾಗಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş