Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.03.2022
Share:

By Village Missionary Movement

Monday, 07-Mar-2022

ಧೈನಂದಿನ ಧ್ಯಾನ(Kannada) – 07.03.2022

ಒಳ್ಳೆಯ ನೆಲದಲ್ಲಿ ಬಿದ್ದ ಬೀಜ

“ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ನೂರರಷ್ಟು ಫಲವನ್ನು ಕೊಟ್ಟವು..." - ಲೂಕ 8:8

ಒಮ್ಮೆ ಇಬ್ಬರು ಸ್ನೇಹಿತರು ಸೇರಿ ಮೋಜಿಗಾಗಿ ಕಾಡಿನಲ್ಲಿ ಬೇಟೆಯಾಡಲು ಹೋದರು.  ಅವರಲ್ಲಿ ಒಬ್ಬರು ವೈದ್ಯರು ಮತ್ತು ಇನ್ನೊಬ್ಬರು ಸೇವಕರು.  ಅವರು ಕಾಡಿಗೆ ಹೋಗುತ್ತಿದ್ದಾಗ ಕರಡಿಯೊಂದು ಅಡ್ಡ ಬಂತು.  ಮೊದಲು ಇಬ್ಬರೂ ಹೆದರಿದರು.  ನಂತರ ಅವರು ಶಾಂತವಾಗಿ ಅಡಗಿಕೊಂಡು, ನಂತರ ಅವರು ತಮ್ಮ ತಮ್ಮ ಕೈಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಕರಡಿಗೆ ಗುರಿಯಿಟ್ಟು ಒಂದೇ ಸಮಯದಲ್ಲಿ ಗುಂಡು ಹಾರಿಸಿದರು.  ಕರಡಿ ಹಾಗೆ ಮುದುರಿಕೊಂಡು ಬಿದ್ದಿತು.  ಕರಡಿಯ ಹತ್ತಿರ ಹೋಗಿ ನೋಡಿದರು.  ಆ ಕರಡಿಯ ಎದೆಯಲ್ಲಿ ಒಂದು ಗುಂಡು, ಕಿವಿಗೆ ಬಿದ್ದು ಒಂದು ಗುಂಡು ಹೊರಹೋಗಿತ್ತು, ಇಬ್ಬರು ಜಾಲಿಯಾಗಿ ಯಾವುದು ತಮ್ಮ ಗುಂಡಿನಿಂದ  ಆದ ಗಾಯವೆಂದು ಮಾತನಾಡಿಕೊಳ್ಳುತ್ತಿದ್ದರು.  ಆ ವೈದ್ಯರು, ಎದೆಗೆ ಹೊಡೆದದ್ದು  ನನ್ನ ಗುಂಡು, ಏಕೆಂದರೆ ಜನರಿಗೆ ನಾನು ಹೇಳುವುದು ಯಾವಾಗಲೂ ಅವರ ಹೃದಯಕ್ಕೆ ನೇರವಾಗಿ ಹೋಗುತ್ತದೆ.  ಅದು ಅವರ ಜೀವನಕ್ಕೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ ಅದನ್ನು ಹಾಗೆಯೇ ಅನುಸರಿಸುತ್ತಾರೆ.  ಆ ಸೇವಕನಿಗೆ ಏನು ಹೇಳಬೇಕೆಂದು ತಿಳಿಯದೆ ಸುಮ್ಮನಿದ್ದ ಸಮಯದಲ್ಲಿ, ವೈದ್ಯರು ಈ ಕಿವಿಯಲ್ಲಿರುವ ಗುಂಡಿನ ರಂಧ್ರವೇ ನೀನು ಸುಟ್ಟಿದ್ದು, ಕಾರಣ ಜನರಿಗೆ ನೀನು ಹೇಳುವುದು ಕಿವಿ ದಾಟಿ ಒಳಗೆ ಹೋಗುವುದಿಲ್ಲ ಎಂಬಂತೆ ಹೇಳಿದರು.

ಹೌದು, ಪ್ರಿಯರೇ!  ಇದು ಎಷ್ಟು ಸತ್ಯ.  ಈ ರೀತಿಯಾಗಿ ನಾವು ಸಹ ಎಷ್ಟೋ ಬಾರಿ ದೇವರ ವಾಕ್ಯಗಳನ್ನು ಕೇಳುತ್ತೇವೆ ಮತ್ತು ಓದುತ್ತೇವೆ, ಆದರೂ ಕೂಡ ಈ ಮಾತುಗಳು ನಮ್ಮಲ್ಲಿ ಕೆಲಸ ಮಾಡಿ ನಮ್ಮಲ್ಲಿ ಬದಲಾವಣೆ ಉಂಟಾಗುವಂತೆ ಅವಕಾಶ ಕೊಡುತ್ತಿದ್ದೇವಾ?  ಇದನ್ನೇ ದೇವರು ಲೂಕ 8: 4-8 ರಲ್ಲಿರುವ ವಾಕ್ಯಗಳಲ್ಲಿ ಸಾಮ್ಯವಾಗಿ ಹೇಳುತ್ತಿದ್ದಾರೆ.  ಕೆಲವರು ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟವರಾಗಿ ವಾಕ್ಯವನ್ನು ಮಾತ್ರವೇ ಕೇಳುತ್ತಾರೆ, ಕೆಲವರು ಬಂಡೆಯ ಮೇಲೆ ಬಿತ್ತಲ್ಪಟ್ಟವರಾಗಿ ಬಲವಿಲ್ಲದೆ ಬಿದ್ದು ಹೋಗುತ್ತಾರೆ,  ಕೆಲವರು ಮುಳ್ಳುಗಳಂತಹ ಸಮಸ್ಯೆಗಳು ಬಂದಕೂಡಲೇ ಹಿಂಜಾರಿ ಹೋಗುತ್ತಾರೆ. ಆದರೆ ಕೆಲವರು ಮಾತ್ರ ಒಳ್ಳೆಯ ನೆಲದಲ್ಲಿ ಬಿತ್ತಲ್ಪಟ್ಟವರಾಗಿ ಅರವತ್ತು ಮತ್ತು ನೂರರಷ್ಟು ಫಲ ಕೊಡುತ್ತಾರೆ. ಅನೇಕ ಬಾರಿ ನಾವು ಕೂಡ ಪ್ರಾಪಂಚಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಅದರ ಬಗ್ಗೆ ಯೋಚಿಸಿಕೊಂಡು, ದೇವರ ವಾಕ್ಯಗಳನ್ನು  ಮರೆತುಬಿಡುತ್ತೇವೆ.  ಕೆಲವರಿಗೆ ಅದು ಕಿವಿಗೆ ಬೀಳುವುದೇ ಇಲ್ಲ. ಆದ್ದರಿಂದ ನಾವು ಇವುಗಳಲ್ಲಿ ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಅನ್ವೇಷಿಸಿ, ದೇವರ ವಾಕ್ಯವು ನಮ್ಮಲ್ಲಿ ಕಾರ್ಯ ಮಾಡುವಂತೆ ಅದನ್ನು ನಮ್ಮ ಹೃದಯದಲ್ಲಿ ಅಂಗೀಕರಿಸಿ, ಧ್ಯಾನ ಮಾಡುವುದಾದರೆ ನಾವು ಲೋಕಕ್ಕೆ ಆಶೀರ್ವಾದಕರವಾಗಿರುತ್ತೇವೆ.
-    Mrs.  ಸ್ಟೆಫಿ ರಾಕ್ಸನ್

ಪ್ರಾರ್ಥನಾ ಅಂಶ:
ಸಹ ಸೇವಕರ ಮೂಲಕ 5 ಗ್ರಾಮಗಳಲ್ಲಿ ನಡೆಯುವ ಸೇವೆಗಳಿಗಾಗಿ; ಆಲಯಗಳಿಲ್ಲದ ಹಳ್ಳಿಗಳಲ್ಲಿ ಆಲಯಗಳು ಕಟ್ಟಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet