By Village Missionary Movement
Sunday, 06-Mar-2022ಧೈನಂದಿನ ಧ್ಯಾನ(Kannada) – 06.03.2022 (Kids Special)
ನಿನ್ನ ಆಸೆ ಏನು?
"...ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು” - ಆದಿಕಾಂಡ 12:3
Hello ಕುಟ್ಟೀಸ್! Regular-ಆಗಿ ನೀವು Schoolಗೆ ಹೋಗಿತ್ತಿದ್ದೀರ ಅಲ್ವಾ? ತುಂಬಾ Happy ತಾನೇ, ಇಂದು School story ಒಂದು ಕೇಳೋಣವಾ. ಮೂರು ಜನ ವಿದ್ಯಾರ್ಥಿಗಳು ಸ್ನೇಹಿತರಾಗಿದ್ದರು. ಒಂದು ದಿನ ತುಂಬಾ ಬೋರ್ ಆಗುತ್ತಿದ್ದದರಿಂದ Walking ಗೆ ಹೋದರು. ನಡೆದು ಹೋಗುತ್ತಿದ್ದಾಗ, ವಯಸ್ಸಾದ ಅಜ್ಜ ಒಬ್ಬರು ಬಂದರು. ಮೂವರನ್ನೂ ನೋಡಿ ಒಂದು ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಅಂತ ಯೋಚಿಸುತ್ತಿದ್ದೀರ ತಾನೇ. ಅವರು ಕೂಡ ಹಾಗೆಯೇ ಯೋಚಿಸಿದರು... ಆ ಹಿರಿಯರು ನಿಮಗೆ ಏನು ಬೇಕು ಎಂದು ಆಸೆಪಡುತ್ತಿದ್ದೀರ ಎಂದು ಕೇಳಿದರು. ಮೊದಲ ಅಣ್ಣನೂ ಮತ್ತು ಎರಡನೇ ಅಣ್ಣನೂ ಚೆನ್ನಾಗಿ ಓದಬೇಕು, ಜ್ಞಾನವಂತರಾಗಬೇಕು. ಆಗಲೇ ಎಲ್ಲಿಗೆ ಹೋದರೂ ಉದ್ಯೋಗ ಸಿಗುತ್ತದೆ ತುಂಬಾ ಸಂಪಾದನೆ ಮಾಡಬಹುದು ಎಂದು ಹೇಳಿದರಂತೆ. ಮೂರನೇ ಅಣ್ಣ ಹೇಳಿದ್ದೇನು ಗೊತ್ತಾ? ಬಹಳಷ್ಟು ಜನರು ಅನಾರೋಗ್ಯದಿಂದ ಕಷ್ಟಪಡುತ್ತಿದ್ದಾರೆ, ನಿರುದ್ಯೋಗದಿಂದ ಇದ್ದಾರೆ, ಆತಂಕದಿಂದ ಬಳಲುತ್ತಿದ್ದಾರೆ ಇವರಿಗೆಲ್ಲಾ ನಾನು ಸಹಾಯ ಮಾಡಬೇಕೆಂದು ಬಯಸುತ್ತಿದ್ದೇನೆ ಎಂದು ಹೇಳಿದರಂತೆ.
ಆ ಅಜ್ಜ ಸರಿ... ಸರಿ, ನೀವು ಆಸೆಪಟ್ಟದ್ದು ಸಿಗಬೇಕಾದರೆ, ಪ್ರಾರ್ಥನೆ ಮಾಡಿ ಎಂದು ಹೇಳಿಬಿಟ್ಟು ಹೊರಟು ಹೋದರು. ಆ ಮೂವರೂ ಹಾಗೇ prayer ಮಾಡಿದರು. ಕೆಲವು ವರ್ಷಗಳ ನಂತರ ಅವರು ಬಯಸಿದ್ದನ್ನು ಪಡೆದರು. ತುಂಬಾ ಹಣ ಕೇಳಿದ ಅಣ್ಣ, “ಸಮಾಧಾನವೇ ಇಲ್ಲ! ತುಂಬಾ ಹಣ ಇರುವುದರಿಂದ ನಿದ್ದೆ ಹೋಯಿತು” ಎಂದು ಪ್ರಲಾಪಿಸಿದರಂತೆ. ಜ್ಞಾನವಂತನಾಗಬೇಕು ಎಂದು ಬಹಳ ಆಸೆಪಟ್ಟ ಅಣ್ಣ ವಿದ್ಯೆ ಅಧಿಕವಾದದ್ದರಿಂದ ಯಾವ ದಾರಿಯಲ್ಲಿ ಹೋಗಬೇಕೆಂದು ಗೊಂದಲಕ್ಕೊಳಗಾಗಿ ಕಷ್ಷಪಟ್ಟರು. ಇಬ್ಬರು ಅಣ್ಣಂದಿರು ಸೇರಿ ಮೂರನೇ ಅಣ್ಣನನ್ನು ನೋಡಲು ಹೋದರಂತೆ. ಈ ಅಣ್ಣ ತುಂಬಾ ಸಂತೋಷವಾಗಿದ್ದರಂತೆ. ನಿನ್ನ ಸಂತೋಷಕ್ಕೆ ಕಾರಣವೇನು ಎಂದು ಕೇಳಿದಾಗ, ಅವರು ಹೇಳಿದರು, “ರೋಗಿಗಳಿಗಾಗಿ, ಸಾಲದ ಸಮಸ್ಯೆಯಲ್ಲಿ ಇರುವವರಿಗಾಗಿ, ಕಷ್ಟದಲ್ಲಿರುವವರಿಗಾಗಿ ಪ್ರಾರ್ಥಿಸುವಾಗ ಅದ್ಭುತ ನಡೆಯುತ್ತಿದೆ, ಇದರಿಂದ ಎಲ್ಲರೂ ಸಂತೋಷವಾಗಿದ್ದಾರೆ.
ಅದಕ್ಕಾಗಿಯೇ ನಾನು ಕೂಡಾ ಸಂತೋಷವಾಗಿದ್ದೇನೆ ” ಎಂದು ಹೇಳಿದರು. ನಮಗೆ ಈ ದಾರಿ ಗೊತ್ತಿಲ್ಲದೇ ಹೋಯಿತೆ. ನಮಗಾಗಿಯೂ ಪ್ರಾರ್ಥಿಸು ಎಂದು ಸ್ನೇಹಿತನ ಬಳಿ ಕೇಳಿಕೊಂಡರು. ಸಂತೋಷದ ದಾರಿಯನ್ನು ಬಲ್ಲವರಾಗಿ, ತನ್ನ ಗೆಳೆಯನಂತೆಯೇ ಇತರರಿಗೆ ಆಶೀರ್ವಾದವಾಗಿರಲು ಬಯಕೆಯುಳ್ಳವರಾಗಿ ತಮ್ಮ ಜೀವನದ ಪಯಣವನ್ನು ಮುಂದುವರೆಸಿದರು.
ಮುದ್ದು ಪುಟಾಣಿಗಳೇ! ಮೂರನೇ ಅಣ್ಣನಂತೆ ನೀವೂ ಕೂಡ ಇತರರನ್ನು ಸಂತೋಷಪಡಿಸುವ ಜೀವನವನ್ನು ಜೀವಿಸಲೆಂದೇ ಯೇಸಪ್ಪಾ ಬಯಸುತ್ತಿದ್ದಾರೆ ನೀವು ಕೂಡ ಇತರರಿಗೆ ಆಶೀರ್ವಾದಕರವಾಗಿ ಇರುತ್ತೀರ ತಾನೇ. Very Very super.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482