Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.03.2022
Share:

By Village Missionary Movement

Saturday, 05-Mar-2022

ಧೈನಂದಿನ ಧ್ಯಾನ(Kannada) – 05.03.2022

ದೇವರಿಗೆ ಭಯಪಡುವುದರ ಶ್ರೇಷ್ಠತೆ

"ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು" - ಕೀರ್ತನೆ 128: 1

ಈ ಲೋಕದಲ್ಲಿ ಹೆಚ್ಚು ಜನರು ಮನುಷ್ಯರಿಗೆ ಭಯಪಟ್ಟು ಬದುಕುತ್ತಿದ್ದಾರೆ!  ಅವರು ತಮ್ಮ ಮೇಲಧಿಕಾರಿಗಳನ್ನು ನೋಡಿದಾಗ,  ಒಳ್ಳೆಯವರಂತೆಯೂ,  ವಿಧೇಯತೆಯುಳ್ಳವರಾಗಿಯೂ ಕಾಣುತ್ತಾರೆ.  ಆದರೆ ಯಾರೂ ತಮ್ಮನ್ನು ನೋಡದಿದ್ದಾಗ ಅವರು ಸಂಪೂರ್ಣವಾಗಿ ವಿಭಿನ್ನ ಜೀವನವನ್ನು ನಡೆಸುತ್ತಾರೆ.  ಆದರೆ ಈ ಲೋಕದಲ್ಲಿ ಕರ್ತನಿಗೆ ಭಯಪಟ್ಟು ಜೀವಿಸುವವರು ಬಹಳ ಕಡಿಮೆ!  ಇವರು ಯಾರೇ ನೋಡಿದರೂ ನೋಡದಿದ್ದರೂ ದೇವರು ತನ್ನನ್ನು ನೋಡುತ್ತಿದ್ದಾರೆ ಎಂಬ ಭಾವದಿಂದ, ಅವರಿಗೆ ಭಯಪಟ್ಟು ಅವರ ಮಾರ್ಗದಲ್ಲಿ ನಡೆಯುವವರು. ಹೌದು, ಇವರೇ ಧನ್ಯರು ಎಂದು  ಸತ್ಯವೇದವು ಹೇಳುತ್ತಿದೆ.

"ನಾನು ದೇವರಿಗೆ ಭಯಪಡುತ್ತೇನೆ" (ಆದಿ. 42:18) ಎಂದು ತನ್ನ ಬಗ್ಗೆ ಒಬ್ಬ ಮನುಷ್ಯ ದೃಢವಾದ ಸಾಕ್ಷಿಯೊಂದನ್ನು ಹೇಳುತ್ತಾರೆ. ಅವರು ಯಾರೆಂದು ನೀವು ಊಹಿಸಿರಬಹುದು.  ಹೌದು!  ನಮ್ಮ ಯೋಸೇಫನೇ!  ಅವರು ಹೇಳಿದ ಮಾತಗಳಂತೆಯೇ  ಬದುಕಿ ತೋರಿಸಿದರು.  ಪರದೇಶ, ಒಳ್ಳೆಯವನಾಗಿ ಜೀವಿಸುತ್ತಿದ್ದರೆ ಪ್ರಶಂಸಿಸಲು ಮತ್ತು ತಪ್ಪು ಮಾಡಿದರೆ ಶಿಕ್ಷಿಸಲು ಪೋಷಕರು ಸಂಬಂಧಿಗಳು ಯಾರೂ ಇಲ್ಲದ ಸ್ಥಳವಾಗಿದೆ.  ಪ್ರೀತಿಗಾಗಿ ಹಾತೊರೆಯುವ ವಯಸ್ಸಿನಲ್ಲಿ, ದೊಡ್ಡ ಸ್ಥಳದಿಂದ ಕರೆ ವಿಭಿನ್ನವಾಗಿ ಬರುತ್ತದೆ.  ಆದರೂ "ನೋ" ಹೇಳಿಬಿಟ್ಟು  ಓಡಿ ಹೋದರು.  ವಿಶೇಷವಾದ ಅಭಿಷೇಕವನ್ನು ಪಡೆದಿದ್ದ ಸಂಸೋನನು, ದಾವೀದನು ಕೂಡ ಬಿದ್ದು ಹೋದ ಈ  ವ್ಯಭಿಚಾರ ಪಾಪವನ್ನು ಯೋಸೇಫನೆಂಬ  ಸಾಮಾನ್ಯ ಯುವಕ ಜಯಿಸಿ ಬಿಟ್ಟರು. ತಪ್ಪಾದ ಕೆಲಸಕ್ಕಾಗಿ ಕರೆದವರು  ರಾಜ ಎಂದ ಕೂಡಲೇ, ಊರೀಯನ ಹೆಂಡತಿಯೂ ಕೂಡ ಮೌನವಾದಳು.  ಆದರೆ ಯೋಸೇಫನು ಯಜಮಾನಿಯಾದರೆ  ಏನು?  ಆಧಾರಕ್ಕೆ ನನ್ನ ಬಟ್ಟೆ ಸಿಕ್ಕಿಕೊಂಡರೂ ನಾನು ಮನುಷ್ಯರ ಮುಂದೆ ಸಿಕ್ಕಾಕಿಕೊಂಡರೂ ಏನು? ತಪ್ಪು ಮಾಡಲು ಕೋಣೆಯೊಳಗೆ ಹೋಗುವುದಕ್ಕಿಂತ, ತಪ್ಪೇ ಮಾಡದೆ  ಸೆರೆಮನೆಯಲ್ಲಿ ಇರುವುದೇ ಉತ್ತಮ! ನನ್ನನ್ನು ನೋಡುವ ದೇವರ ಮುಂದೆ ನನ್ನ ಹೃದಯ ಮತ್ತು ದೇಹ ಶುದ್ಧವಾಗಿದ್ದರೆ ಸಾಕು ಎಂದು ನಿರ್ಧರಿಸಿದರು.  ಕರ್ತನಿಗೆ ಭಯಪಟ್ಟು ಪಾಪದಿಂದ ದೂರ ಸರಿದು, ನಮ್ಮ ಕಣ್ಣೆದುರೇ ಇನ್ನೂ ಧನ್ಯನಾಗಿ ನಮ್ಮ ಮನೋನೇತ್ರಗಳ ಮುಂದೆ ಬಂದು ನಿಲ್ಲುವ ಯೋಸೇಫನಿಗೆ ಒಂದು ಸೆಲ್ಯೂಟ್ ಮಾಡೋಣವೇ?

ಪ್ರಿಯರೇ!  ಮನುಷ್ಯನಿಗಲ್ಲ. ಕರ್ತನಿಗೆ ಭಯಪಡುವವನು ಧನ್ಯನಾಗಿರುತ್ತಾನೆ.  ಕೀರ್ತನೆ 128 ರಲ್ಲಿ ಹೇಳುವಂತೆ ಅವನ ಕಷ್ಟಾರ್ಜಿತವು ಆಶೀರ್ವದಿಸಲ್ಪಡುತ್ತದೆ.  ಅವನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತೆಯು, ಮಕ್ಕಳು ಎಣ್ಣೇಮರದ ಸಸಿಗಳಂತೆಯು, ಅಭಿವೃದ್ಧಿ ಆಗುತ್ತಾರೆ, ಫಲಕೊಡುವವರಾಗಿರುತ್ತಾರೆ. ಉಚಿತವಾದ, ಉನ್ನತವಾದ  ಆಶೀರ್ವಾದವು  ಅವರಿಗೆ ನೀಡಲಾಗುವುದು.  ಇಂತಹ ಆಶೀರ್ವದಿಸಲ್ಪಟ್ಟ ಜೀವನ ನಿಮಗೆ ಬೇಕೇ?  ಎಂತಹಾ ಪರಿಸ್ಥಿತಿಯಲ್ಲೂ ಕರ್ತನಿಗೆ  ಭಯಪಟ್ಟು ಜೀವಿಸಿರಿ,  ಕರ್ತನು ನಿಮ್ಮನ್ನು  ಆಶೀರ್ವದಿಸಲಿ.
-    Mrs.  ಎಬನ್ ಸಂತೋಷ್

ಪ್ರಾರ್ಥನಾ ಅಂಶ:
ಸಹೋ. ಡೇವಿಡ್ ಗಣೇಶನ್ ರವರ ಪ್ರಯಾಣಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al