Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.03.2022
Share:

By Village Missionary Movement

Friday, 04-Mar-2022

ಧೈನಂದಿನ ಧ್ಯಾನ(Kannada) – 04.03.2022

ಸುಳ್ಳು ಭಾಷೆಗಳು

"ನೀವು ಮನಗುಂದಿದವರಾಗಿ ಬೇಸರಗೊಳ್ಳ ದಂತೆ ಆತನು ತಾನೇ ಪಾಪಿಗಳಿಂದ ಎಷ್ಟೋ ವಿರೋಧ ವನ್ನು ಸಹಿಸಿ ಕೊಂಡನೆಂಬದನ್ನು ನೀವು ಆಲೋಚಿಸಿರಿ." - ಇಬ್ರಿಯ 12:3

ಪ್ರಿಯರೇ!  ನಿಮ್ಮ ಜೀವನದಲ್ಲಿ ಕುಟುಂಬದಲ್ಲಿ, ಕೆಲಸದ ಸ್ಥಳದಲ್ಲಿ ಅಥವಾ ನೀವು ಎಲ್ಲಿದ್ದರೂ ಮಾಡದ ತಪ್ಪನ್ನು ಮಾಡಿದ್ದೀರಿ ಮತ್ತು ನೀವು ಮಾತನಾಡದ ಮಾತುಗಳನ್ನು ಮಾತನಾಡಿದ್ದೀರಿ ಎಂದು ಸುಳ್ಳು ಆರೋಪ ಹೊರೆಸುತ್ತಿದ್ದೀರಾ?  ಚಿಂತಿಸಬೇಡಿರಿ.  "ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ" ಎಂದು ಹೇಳಿದ ಯೇಸು ಕ್ರಿಸ್ತನು ನಿಮ್ಮೊಂದಿಗೆ ಇದ್ದಾರೆ.

ಹೌದು, ಜನರ ಹಿರಿಯರು, ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು ಎಲ್ಲರೂ ಕರ್ತನಾದ ಯೇಸುಕ್ರಿಸ್ತನನ್ನು ರೋಮನ್ನರ ದೇಶಾಧಿಪತಿಯಾದ  ಪಿಲಾತನ ಮುಂದೆ ಕರೆದೊಯ್ದು, "ಇವನು ಕೈಸರನಿಗೆ ತೆರಿಗೆ ಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸನ್ನು ಕೆಡಿಸುವುದನ್ನು ಕಂಡೆವು" ಎಂದು ದೂರು ಹೇಳುವುದಕ್ಕೆ ತೊಡಗಿದರಲ್ಲವೇ? ಆದರೆ ಯೇಸು ಕ್ರಿಸ್ತನು ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಎಂದು ಹೇಳಿದ್ದರು. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತನಗಾಗಿಯು ಮತ್ತು ಪೇತ್ರನಿಗಾಗಿಯು ತೆರಿಗೆಯನ್ನು ಪಾವತಿಸಿದ್ದರು.  ಹೀಗಿರುವಾಗ, ಯೇಸುವನ್ನು ವಿರೋಧಿಸಿದ್ದವರು  ಪಿಲಾತನ ಬಳಿ, ಯೇಸು ಹೇಳಿದ ಮತ್ತು ಮಾಡಿದ ಕಾರ್ಯಕ್ಕೆ  ವಿರುದ್ಧವಾಗಿ ಯೇಸು ಕ್ರಿಸ್ತನನ್ನು ಆರೋಪಿಸಿದರು.  ಹಾಗಾದರೆ ಮರ ಹಸಿಯಾಗಿರುವಾಗ ಇಷ್ಟೆಲ್ಲಾ ಮಾಡಿದರೆ ಮರ ಒಣಗಿರುವಾಗ ಏನಾಗಬಹುದು? ಎಂದು ಯೇಸು ಹೇಳಿದ ವಾಕ್ಯವನ್ನು ನೆನೆಸಿ ನಿಮ್ಮನ್ನು ಸಂತೈಸಿಕೊಳ್ಳಿರಿ.

ಅದೇ ಸಮಯದಲ್ಲಿ ಕರ್ತನು ನಿಮ್ಮನ್ನು ಹಾಗೆಯೇ ಬಿಟ್ಟು ಬಿಡುವುದಿಲ್ಲ.  ಹೌದು, ಯೋಸೇಫನನ್ನು ಸುಳ್ಳು ಆರೋಪ ಹೊರಿಸಿ ಸೆರೆಮನೆಗೆ ಕಳುಹಿಸಿದರೂ, ಕರ್ತನು ಅವನನ್ನು ಬಿಡುಗಡೆಗೊಳಿಸಿದನು ಮಾತ್ರವಲ್ಲ ಅವನನ್ನು ಉನ್ನತೀಕರಿಸಿದನು.  ಆತನು ನಿಮಗೂ ಹಾಗೆಯೇ ಮಾಡುವನು.  ಆದ್ದರಿಂದ ನಿಮ್ಮ ಆತ್ಮಗಳಲ್ಲಿ ನೀವು ಮೂರ್ಛೆ ಹೋಗದಂತೆ ನಿಮ್ಮ  ಆತ್ಮದಲ್ಲಿ ಬಳಲಿ ಹೋಗದಂತೆ ತಮಗೆ ವಿರುದ್ಧವಾಗಿ ಪಾಪಿಗಳಿಂದ ಮಾಡಲ್ಪಟ್ಟ ಇಂತಹ ದೌರ್ಜನ್ಯಗಳನ್ನು ಸಹಿಸಿಕೊಂಡ ಅವರನ್ನೇ ನೆನೆಸಿಕೊಳ್ಳಿರಿ.
-    K.  ಬೆಂಜಮಿನ್

ಪ್ರಾರ್ಥನಾ ಅಂಶ:
ಲೆಂಟ್ ಅವಧಿಯ ಕೂಟಗಳಲ್ಲಿ ಸಹೋ.  ಡೇವಿಡ್ ಗಣೇಶನ್ ಅವರನ್ನು ದೇವರು ಶಕ್ತಿಯುತವಾಗಿ ಉಪಯೋಗಿಸುವಂತೆ  ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş