By Village Missionary Movement
Thursday, 03-Mar-2022ಧೈನಂದಿನ ಧ್ಯಾನ(Kannada) – 03.03.2022
ನೀವು ಧನ್ಯರು
"ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ;... ಗಾಳಿಬಡಿಯುತ್ತಲೇ... ಅದರ ಸ್ಥಳವು ಅದನ್ನು ತಿರುಗಿ ಕಾಣುವದಿಲ್ಲ." - ಕೀರ್ತನೆಗಳು 103:15,16
ನೀವು ಧನ್ಯರು! ಯಾಕೆ ಗೊತ್ತಾ? ಇಂದು ಜೀವಂತವಾಗಿರುವುದರಿಂದ.... ಒಬ್ಬರು ಅನಿರೀಕ್ಷಿತವಾಗಿ ಹೃದಯಾಘಾತದಿಂದ ನಿಧನರಾದರು. ಅವರು ಸತ್ತ ಮರುಕ್ಷಣವೇ, ಆ ಆತ್ಮಕ್ಕೆ ತಾನು ಹೋಗಬೇಕಾದ ಸ್ಥಳ ನರಕ ಎಂದು ಗೊತ್ತಾಗೋಯ್ತು. ತಾನು ಬಿಟ್ಟು ಬಂದ ದೇಹವನ್ನು ನೋಡಿ, “ಅಯ್ಯೋ ಇಷ್ಟು ವರ್ಷ ಈ ದೇಹದಲ್ಲಾ ನಾನಿದ್ದೆ. ದೇವರೇ ಒಂದೇ ಒಂದು ಬಾರಿ ನನ್ನನ್ನು ಈ ದೇಹದೊಳಕ್ಕೆ ಕಳುಹಿಸಿ. ನನ್ನ ಎಲ್ಲಾ ಪಾಪಗಳನ್ನು ಮತ್ತು ಅಕ್ರಮಗಳನ್ನು ನಿಮ್ಮ ಬಳಿ ಹರಕೆ ಮಾಡಿ ಬಿಟ್ಟು ಬಿಡುತ್ತೇನೆ. ನಾನು ಯಾರಿಗೆಲ್ಲಾ ವಿರೋಧವಾಗಿ ಅಪರಾಧ ಮಾಡಿದ್ದೇನೋ ಅವರ ಕೈ, ಕಾಲುಗಳಲ್ಲಿ ಬಿದ್ದಾದರೂ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಮತ್ತೆ ಈ ದೇಹಕ್ಕೆ ಕಳುಹಿಸಿ" ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಕೇಳಿಕೊಂಡಿತಂತೆ. ಯೇಸು ಕ್ರಿಸ್ತನು ಕಣ್ಣೀರು ಹಾಕುತ್ತಾ, "ಇನ್ನು ಮುಂದೆ ಅವಕಾಶವೇ ಇಲ್ಲ, ಎಲ್ಲವೂ ಮುಗಿದು ಹೋಯಿತು ಎಂದರು."
ಹೌದು, ಇದನ್ನು ಓದುತ್ತಿರುವ ನೀವು ನಾನು ಧನ್ಯರು. ನಮ್ಮ ಜೀವ ನಮ್ಮೊಳಗೆ ಇರುವವರೆಗೆ ನಾವು ಏನು ಬೇಕಾದರೂ ಮಾಡಬಹುದು. ನಾವು ನಮ್ಮ ಪಾಪಗಳಿಗಾಗಿ ಮನಬಂದಂತೆ ಅಳಬಹುದು ಮತ್ತು ಯೇಸುಕ್ರಿಸ್ತನ ರಕ್ತದಿಂದ ಪವಿತ್ರರಾಗಬಹುದು. ನೀವು ಯಾವುದೇ ವ್ಯಕ್ತಿಯ ಬಳಿಗೆ ಹೋಗಿ ಕ್ಷಮೆ ಕೇಳಬಹುದು. ಕೆಟ್ಟದ್ದನ್ನು ಮಾಡುವ ಬದಲು ಒಳ್ಳೆಯದನ್ನು ಮಾಡಬಹುದು. ಮನಸಿನಲ್ಲಿ ಕಹಿಯಿಂದಿರುವ ಸಹೋದರನ ಬಳಿ ಒಳ್ಳೆಯ ಮನೋಭಾವನೆಯಿಂದ ಇರಬಹುದು. ವಂಚನೆಯ ಹಣ ಅಥವಾ ಭೂಮಿಯನ್ನು ಹಿಂತಿರುಗಿಸಬಹುದು. ದೇವರು ಮತ್ತು ಮನುಷ್ಯನ ವಿರುದ್ಧ ಮಾಡಲಾದ ಎಷ್ಟೆಷ್ಟೋ, ವಿಷಯಗಳನ್ನು ನಾವು ಖಂಡಿತವಾಗಿಯೂ ಸರಿಪಡಿಸಿಕೊಳ್ಳಬಹುದು. ಆದರೆ ಸಮಯ ಹೊರಟು ಹೋದರೆ... ಹೌದು, ನಾವು ಜೀವಂತವಾಗಿರುವ ದಿನಗಳು ಕೃಪೆಯ ದಿನಗಳು ಎಂಬುದನ್ನು ನಾವು ಒಂದು ನಿಮಿಷವೂ ಮರೆಯಬಾರದು.
ಒಬ್ಬ ಮನುಷ್ಯನಿಗೆ ತಿಳಿಯಲಾಗದ ಎರಡು ವಿಷಯಗಳಿವೆ. ಒಂದು ಅವನ ಸಾವಿನ ದಿನ! ಇನ್ನೊಂದು ಯೇಸುವಿನ ಬರೋಣದ ದಿನ! ಹೌದು, ನಮಗೆ ಈ ವಿಷಯಗಳು ತಿಳಿದಿಲ್ಲದ ಕಾರಣ, ಈ ಎರಡು ದಿನಗಳನ್ನು ಭೇಟಿ ಮಾಡಲು ನಾವು ಯಾವಾಗಲೂ ಸಿದ್ಧರಾಗಿರಬೇಕು. ನಮ್ಮ ಜೀವ ಅಗಲಿದರೆ ಅಥವಾ ಅವರ ಬರೋಣವು ಬಂದು ಬಿಟ್ಟರೆ ಎಲ್ಲವೂ ಮುಗಿದುಹೋಗುತ್ತದೆ. ಬೇಡಿಕೊಂಡರೂ, ಕಿರುಚಾಡಿದರೂ ಏನೂ ನಡೆಯುವುದಿಲ್ಲ. ದೇವರು finished ಎಂದು ಹೇಳಿ ಬಿಡುವರು. ಆದುದರಿಂದ ದೇವರ ದಯೆ ನಾವು ವಾಸಿಯಾಗುವಂತೆ ಪ್ರೇರೇಪಿಸುತ್ತಿದೆ ಎಂಬುದನ್ನು ಅರಿತು, ಇಂದೇ ಮನಸ್ಸನ್ನು ಬದಲಾಯಿಸಿಕೊಳ್ಳೋಣ.
- Mrs. ಜೆಬಾ ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
"60 ಮಿಷನರಿ ಮನೆಗಳನ್ನು" ಕಟ್ಟಿಕೊಡುವ ಶೂನೇಮ್ಯಳರು ಎದ್ದೇಳುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482