Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.03.2022
Share:

By Village Missionary Movement

Wednesday, 02-Mar-2022

ಧೈನಂದಿನ ಧ್ಯಾನ(Kannada) – 02.03.2022

ಕ್ರಿಸ್ತನು ನನಗೆ ಜೀವ

"ನನಗಂತೂ ಬದುಕುವದಂದರೆ ಕ್ರಿಸ್ತನೇ, ಸಾಯುವದು ಲಾಭವೇ” - ಫಿಲಿಪ್ಪಿ 1:21

ಇರಾನ್‌ನಲ್ಲಿ ಕ್ರಿಸ್ತನನ್ನು ಅಂಗೀಕರಿಸಿಕೊಂಡ ಸಹೋದರ "ಮೆಹದಿ ಥಿಬಾಜ್" ಅವರ ಮೇಲೆ ದೇಶದ್ರೋಹ ಅಪರಾಧವನ್ನು ಹೊರಿಸಿ ಜೈಲಿನಲ್ಲಿರಿಸಿ ವಿಚಾರಿಸಲಾಯಿತು.  ನ್ಯಾಯಾಲಯದಲ್ಲಿ ಅವರು ಹೇಳಿದ ಮಾತೇ  ಮರಣದಂಡನೆಗೆ ಕಾರಣವಾಯಿತು.  “ಒಬ್ಬರು ತಾನು ಅನುಸರಿಸುವ ಧರ್ಮವನ್ನೇ ತಾನೆ ಆರಿಸಿಕೊಳ್ಳುತ್ತಾರೆ. ಕ್ರೈಸ್ತನು ಎಂದರೆ ಕ್ರಿಸ್ತನನ್ನು ಹೊಂದಿರುವವನು ಎಂದರ್ಥ. ಕ್ರಿಸ್ತನ ಮೇಲಿರುವ ನಂಬಿಕೆಯನ್ನು ಬಿಡುವುದಕ್ಕಿಂತ  ಪ್ರಾಣ ಬಿಟ್ಟುಬಿಡುವುದು ಉತ್ತಮ.  ಏಕೆಂದರೆ ಕ್ರಿಸ್ತನನ್ನು ಅನುಸರಿಸುವವನಿಗೆ ಮರಣವು ಲಾಭವಾಗಿದೆ!  ಕ್ರಿಸ್ತನು ಸಹ ತನ್ನ ಮರಣದಿಂದ ಅನೇಕ ಜನರನ್ನು ಸಂಪಾದಿಸಿಕೊಂಡರು.  ಮರಣದಲ್ಲೂ ಗುರುವನ್ನು ಹಿಂಬಾಲಿಸುವವನೇ ಅತ್ಯುತ್ತಮ ಶಿಷ್ಯನಾಗುತ್ತಾನೆ.

ಕರ್ತನಾದ ಯೇಸು ನನ್ನನ್ನು 45 ವರ್ಷಗಳಿಂದ ತನ್ನ ಕೃಪೆಯಿಂದ ಮುನ್ನಡೆಸುತ್ತಾ ಬಂದಿದ್ದಾರೆ.  ಈ ಜಗತ್ತಿನಲ್ಲಿ ಲಕ್ಷಾಂತರ ಜನರು  ಬಹಳ ಉಗ್ರತೆಯಿಂದ ನನ್ನನ್ನು ವಿರೋಧಿಸಿದರೂ ನಾನೇ ವಿಜೇತನು.  ಯಾಕೆಂದರೆ ಮರಣವನ್ನು ಗೆದ್ದವರು ನನ್ನ ಕಡೆ ಇದ್ದಾರೆ.  ನನ್ನ ಜೀವನ ಅವರ ಕೈಯಲ್ಲಿದೆ.  ಅವರ ಬಳಿ ಶರಣಾಗಿರುವ ನನಗೆ "ಜೀವ ಎಂಬುದು ಯೇಸುವಿಗಾಗಿ ಬದುಕುವ ಅವಕಾಶ, ಮತ್ತು ಮರಣ ಎಂಬುದು ಕೂಡಾ ಯೇಸುವಿನೊಂದಿಗೆ ಬದುಕುವ ಅವಕಾಶ."  ಹಾಗಾಗಿ ಕ್ರಿಸ್ತನಲ್ಲಿರುವ  ನನ್ನ ನಂಬಿಕೆಯನ್ನು ನಾನು ಎಂದಿಗೂ ನಿರಾಕರಿಸುವುದಿಲ್ಲ ಎಂದು ದೃಢವಾಗಿ ಹೇಳಿದರು.  ಇದರಿಂದಾಗಿ ಅವರು ಕೆಲವೇ ದಿನಗಳಲ್ಲಿ ಮರಣವನ್ನು ಸಹ ಜಯಕರವಾಗಿ ಭೇಟಿಯಾದರು.

ಅಪೊ. ಪೌಲನು ಫಿಲಿಪ್ಪಿಯವರಿಗೆ 1:21 ರಲ್ಲಿ ಈ ರೀತಿ ಬರೆಯುತ್ತಾರೆ, "ನನಗಂತೂ ಬದುಕುವದಂದರೆ ಕ್ರಿಸ್ತನೇ, ಸಾಯುವದು ಲಾಭವೇ."  ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ "ನಾನು ಪ್ರತಿದಿನವೂ ಸಾಯುತ್ತಿದ್ದೇನೆ"  ಎಂದು ಹೇಳುತ್ತಿದ್ದಾರೆ.  ಈ ಜಗತ್ತಿನಲ್ಲಿ ಹೇಗೆ ಉತ್ತಮವಾಗಿ ಬದುಕುವುದು ಎಂಬುದಕ್ಕಿಂತ ಕ್ರಿಸ್ತನಿಗಾಗಿ ಗೋಧಿ ಕಾಳಿನ ಹಾಗೆ ಸಾಯುವುದು ದೇವರ ಮುಂದೆ ಹೆಚ್ಚು ಮಹಿಮೆಯಾಗಿರುತ್ತದೆ ಎಂದು ಪೌಲನು ನಂಬಿದ್ದರು.  ಈ ಸಂದೇಶವನ್ನು ಓದುತ್ತಿರುವ ಅನೇಕರು ಸಣ್ಣ ಸಣ್ಣ ವಿಷಯಗಳಿಗೆಲ್ಲಾ ತುಂಬಾ ನಿರುತ್ಸಾಹಗೊಳ್ಳುತ್ತೇವೆ. ಕೆಲವೊಮ್ಮೆ ಕ್ರಿಸ್ತನಿಂದಲೂ ದೂರ ಹೋಗಿ ಬಿಡುತ್ತೇವೆ.  ಕ್ಷುಲ್ಲಕ ವಿಷಯಗಳಿಗೆಲ್ಲಾ ನಾವು ಆತುರಪಟ್ಟು  ದೇವರನ್ನು  ನಿರಾಕರಿಸುತ್ತೇವೆ.  ಇಂದು ದೇವರಾತ್ಮನು ನಮಗೆ ಉತ್ಸಾಹಭರಿತ ಬಯಕೆಯನ್ನು ನೀಡಲು ಬಯಸುತ್ತಿದ್ದಾರೆ.  ಜೀವನ ಎಂಬುದು ಒಂದೇ ಒಂದು ಬಾರಿ ಮಾತ್ರವೇ.  ಅದನ್ನು ಯೇಸುವಿಗಾಗಿ ಜೀವಿಸೋಣ. ನಮ್ಮ ಜೀವನವನ್ನು ನಷ್ಟವೆಂದು ಪರಿಗಣಿಸಿ ದೇವರಿಗಾಗಿ ಜೀವಿಸಿ ಜೀವ ಕಿರೀಟವನ್ನು ಸ್ವತಂತ್ರಿಸಿಕೊಳ್ಳೋಣ. ಆಮೆನ್!
-    P.  ಜೇಕಬ್ ಶಂಕರ್

ಪ್ರಾರ್ಥನಾ ಅಂಶ:
ಗೆತ್ಸೆಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al