Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.01.2021
Share:

By Village Missionary Movement

Wednesday, 20-Jan-2021

ಧೈನಂದಿನ ಧ್ಯಾನ(Kannada) – 20.01.2021

ಮಧ್ಯಭಾಗದಲ್ಲಿ ಏನಾದರೂ ಇದೆಯಾ?

"...ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವದೇವರೆಂದು ಹೆಸರಿಟ್ಟಳು” - ಆದಿಕಾಂಡ 16:13

ಬಹಳ ಭಕ್ತಿಯಿಂದಿದ್ದ ಒಂದು ಕ್ರೈಸ್ತ ಕುಟುಂಬವದು. ಆ ಮನೆಯ ಮಧ್ಯ ಕೋಣೆಯಲ್ಲಿ "ನೀವು ನನ್ನನ್ನು ನೋಡುವ  ದೇವರು"  ಎಂಬ ವಾಕ್ಯವನ್ನು  ನೇತು ಹಾಕಿದ್ದರು. ಕುಟುಂಬದಲ್ಲಿರುವ ಎಲ್ಲರೂ ಕುಟುಂಬ ಪ್ರಾರ್ಥನೆಗೆ ಮೊದಲು ಈ ವಾಕ್ಯವನ್ನು ಶಬ್ಧವಾಗಿ ಓದಿದ ನಂತರವೇ  ಪ್ರಾರ್ಥನೆ ಪ್ರಾರಂಭವಾಗುತ್ತದೆ. ಇದು ತಂದೆಯ ಆದೇಶ. ಚಿಕ್ಕವಯಸ್ಸಿನಿಂದ ಮಕ್ಕಳು ಹೀಗೆ ದೇವರ ಭಯದೊಂದಿಗೆ, ಬೆಳೆಸಲ್ಪಟ್ಟರು. ದೇವರು ಮಕ್ಕಳ ಜೀವನವನ್ನು ಆಶೀರ್ವದಿಸಿದರು. ಹಿರಿಯ ಮಗನಿಗೆ ಸರ್ಕಾರಿ ನೌಕರಿ ಸಿಕ್ಕಿತು. ಒಂದು ಬಾರಿ ಹಣದ ಇಕ್ಕಟ್ಟಿನ ಕಾರಣದಿಂದಾಗಿ ಒಂದು ದೊಡ್ಡ ಮೊತ್ತವನ್ನು ಲಂಚವಾಗಿ ತೆಗೆದುಕೊಂಡನು. ಯಾರಿಗೂ ತಿಳಿಯದೆ ಕಾರ್ಯವನ್ನು ಪರಿಪೂರ್ಣವಾಗಿ ಮಾಡಿ ಮುಗಿಸಿದ ತೃಪ್ತಿಯಲ್ಲಿ, ಯಾವುದೇ ರೀತಿಯ ಭಯವು ಅವನಿಗಿರಲಿಲ್ಲ. ಅಂದು ಎಂದಿನಂತೆ  "ನೀನು ನನ್ನನ್ನು ನೋಡುವ ದೇವರು"  ಎಂದು ವಾಕ್ಯವನ್ನು ಓದಿದ ಕೂಡಲೇ ಅಂದಿನ ದೃಶ್ಯವು ಜ್ಞಾಪಕಕ್ಕೆ ಬರಲು, ಕಣ್ಣೀರಿನಿಂದ ದೇವರ ಸನ್ನಿಧಿಯಲ್ಲಿ ತಾನು ಮಾಡಿದ ಘೋರ ಪಾಪವನ್ನು ಅರಿಕೆ ಮಾಡಿದನು. ಮರುದಿನ ಬೆಳಗ್ಗೆ ಮೇಲಾಧಿಕಾರಿಗಳ ಬಳಿ ಹಣವನ್ನು ಕೊಟ್ಟುಬಿಟ್ಟನು.

ಸತ್ಯವೇದದಲ್ಲಿಯು, ಒಂದು ಮನುಷ್ಯನು ದೇವರು ತನ್ನನ್ನು ನೋಡುತ್ತಿದ್ದಾರೆ ಎಂಬ ಗ್ರಹಿಕೆಯಿಲ್ಲದೆ ನಡೆದದ್ದರಿಂದ ಸಂಭವಿಸಿದ ಪರಿಣಾಮವನ್ನು ಪವಿತ್ರಾತ್ಮನು ಬರೆದು ಕೊಟ್ಟಿದ್ದಾರೆ. ಅವರೇ ಆಕಾನನು. ಯೆರಿಕೋನಲ್ಲಿರುವ ಯಾವ ವಸ್ತುವನ್ನು ತೆಗೆದುಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರನ್ನು ಎಚ್ಚರಿಸಿದರೂ, ಆಕಾನನು ಅಲ್ಲಿರುವ ವಸ್ತುಗಳ ಮೇಲೆ ಆಸೆ ಪಟ್ಟು ಅವುಗಳನ್ನು ತೆಗೆದುಕೊಂಡು ತನ್ನ ಗುಡಾರದ ಮಧ್ಯದಲ್ಲಿ ಭೂಮಿಯೊಳಗೆ ಬಚ್ಚಿಟ್ಟು ಬಿಟ್ಟನು. ಇದು ಯಾರ ಕಣ್ಣಿಗೂ ಕಾಣಲಿಲ್ಲ ಎಂದು ಪ್ರಶಾಂತವಾಗಿದ್ದನು. ಆದರೆ ಇವರ ಘೋರ ಪಾಪವು ಎಲ್ಲಾ ಇಸ್ರಾಯೇಲ್ಯರನ್ನು ಬಾಧಿಸಿತು. ಹೌದು ನಡೆದ ಯುದ್ಧದಲ್ಲಿ ಇಸ್ರಾಯೇಲ್ಯರು ಸೋತುಹೋದರು. ಇದಕ್ಕೆ ಆಕಾನನ ಪಾಪವೇ ಕಾರಣ ಎಂದು ದೇವರು ಹೇಳಿದಾಗ ಅವರು ಅವನನ್ನು ಕಲ್ಲೆಸೆದು ಕೊಂದರು. ಹೌದು, ದೇವರಿಗೆ ಮರೆಯಾಗಿರುವುದು ಒಂದೂ ಇಲ್ಲ.

ಇದನ್ನು ಓದುತ್ತಿರುವ ನಿಮ್ಮ ಜೀವನದಲ್ಲಿ ಗೆಲುವಿಲ್ಲವೋ? ಹಾಗಾದರೆ, ನಿಮ್ಮ ಗುಡಾರದ ಮಧ್ಯ ಭಾಗದಲ್ಲಿ ದೇವರಿಗೆ ಇಷ್ಟವಿಲ್ಲದ್ದು ಏನಾದರೂ ಇದೆಯಾ ಎಂದು ಶೋಧಿಸಿ ನೋಡಬೇಕು. ಗುಡಾರ ಎಂಬುದು ನಮ್ಮ ಶರೀರ, ಮಧ್ಯಭಾಗವು ನಮ್ಮ ಹೃದಯ! ಹೃದಯದೊಳಗೆ ರಹಸ್ಯ ಪಾಪಗಳು ಏನಾದರೂ ಇದೆಯೋ? ಯಾರಿಗೂ ನಾನು ಮಾಡುವ ಕಾರ್ಯ ಗೊತ್ತಾಗುವುದಿಲ್ಲ. ಇದು ಹೊರಗೆ ಬರಲು ಅವಕಾಶವೇ ಇಲ್ಲ ಎಂದು ಧೈರ್ಯವಾಗಿ ಜೀವಿಸುತ್ತಿದ್ದೀರಾ? ನಿಮ್ಮ ಕುಟುಂಬದಲ್ಲಿಯೂ, ಮಕ್ಕಳು ಮೊಮ್ಮಕ್ಕಳ ಜೀವನದಲ್ಲಿ ಆಶೀರ್ವಾದವು ತಡೆಯಾಗುವುದಕ್ಕೆ ಇದು ಕಾರಣವಾಗಿರಬಹುದು. ನಿಮ್ಮೊಬ್ಬರ ಕಾರ್ಯ ಪೂರ್ತಿ ಕುಟುಂಬವನ್ನೇ ಬಾಧಿಸುತ್ತದೆ ಎಂಬುದಕ್ಕೆ ಆಕಾನನೇ ಒಂದು ಎಚ್ಚರಿಕೆ. ಆದದರಿಂದ ನಿಮ್ಮ ಗುಡಾರದಲ್ಲಿ ಮಧ್ಯ ಭಾಗವನ್ನು ಶುದ್ಧ ಮಾಡಿರಿ; ಗೆಲುವಿನೊಂದಿಗೆ ಜೀವಿಸಿರಿ.
-    Mrs. ಜಾಸ್ಮಿನ್ ಸಮುವೇಲ್

ಪ್ರಾರ್ಥನಾ ಅಂಶ:-
ಕಚೇರಿ ಕೆಲಸಕ್ಕೆ  "ಜೆರಾಕ್ಸ್ ಮಿಷಿನ್" ಬಹಳ ಮುಖ್ಯವಾಗಿ ಅವಶ್ಯಕವಾಗಿದೆ. ಇದನ್ನು ತೆಗೆದುಕೊಳ್ಳುವುದಕ್ಕಾಗಿ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş