Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.02.2022 (Kid’s special)
Share:

By Village Missionary Movement

Sunday, 27-Feb-2022

ಧೈನಂದಿನ ಧ್ಯಾನ(Kannada) – 27.02.2022 (Kid’s special)

ವಜ್ರಕಲ್ಲು

"ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲು ಪೂರ್ಣಶಕ್ತರಾಗಿದ್ದು... ಪರಿಪೂರ್ಣರಾಗುವ ಹಾಗೆ... ಬೇಡಿಕೊಳ್ಳುತ್ತೇನೆ." - ಎಫೆಸ 3:19

ಒಂದು ಪಟ್ಟಣದಲ್ಲಿ ಅಜ್ಜಿಯೊಬ್ಬರು ಬಹಳ ಸೌಕರ್ಯವಾಗಿ ಜೀವಿಸುತ್ತಿದ್ದರು. ಅವರು daily evening walking ಗೆ ಹೋಗುವುದು ಅಭ್ಯಾಸ. Walking ಮುಗಿಸಿ ಒಂದು park ನಲ್ಲಿರುವ bench ಮೇಲೆ ಕುಳಿತು ಹುಡುಗರು ಆಟ ಆಡುವುದನ್ನು ನೋಡಿ ಸಂತೋಷಿಸುತ್ತಿದ್ದರು.  ನಿಮಗೂ evening friends ಜೊತೆ ಸೇರಿ park ನಲ್ಲಿ ಆಟವಾಡಲು ತುಂಬಾ ಇಷ್ಟ ತಾನೇ!  ಅಲ್ಲಿ ಅಣ್ಣ, ಅಕ್ಕ ಎಲ್ಲರೂ ಮಾತನಾಡುತ್ತಾ ಜಾಲಿಯಾಗಿ ಆಟ ಆಡುತ್ತಾರೆ.  ಯಾರೆಂದು ತಿಳಿಯದಿದ್ದರೂ ನಗು ನಗುತ್ತಾ ಖುಷಿಯಾಗಿ ಆಟ ಆಡುತ್ತೀರ ಅಲ್ವಾ?  ಆ ಅಜ್ಜಿ ಕೂಡ ಪುಟ್ಟ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಹೀಗೆ ಅಜ್ಜಿಗೆ ಬಹಳಷ್ಟು ಚಿಕ್ಕ ಮಕ್ಕಳು ಸ್ನೇಹಿತರಾದರು.  ಅದರಲ್ಲಿ ಡಯಾನ ಅಜ್ಜಿಯೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದಳು.  ಒಂದು ದಿನ ಡಯಾನ ನಾಳೆ ನನಗೆ birthday ಅಜ್ಜಿ, ಅಪ್ಪ grand - ಆಗಿ ಆಚರಿಸಲಿದ್ದಾರೆ.  ನೀವು ಖಂಡಿತವಾಗಿ ಬರಬೇಕೆಂದು ಕರೆದಳು.  ಅಜ್ಜಿ ಡಯಾನ ಮೊಮ್ಮಗಳಂತೆಯೇ ಪ್ರೀತಿಯಿಂದ ಮಾತನಾಡುವುದರಿಂದ ಅಜ್ಜಿ ಕೂಡ ಡಯಾನಾಳನ್ನು ಪ್ರೀತಿಯಿಂದ ನೋಡುತ್ತಿದ್ದರು. Birthday ಯಂದು, ಡಯಾನಾಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದ ವಜ್ರದ ಒಂದು ಉಂಗುರವನ್ನು 
box ನಲ್ಲಿ ಇಟ್ಟು ಅವಳಿಗೆ ಕೊಟ್ಟರು.

Birthday party ಮುಗಿಸಿ ಎಲ್ಲರೂ ಹೋದ ನಂತರ ಗಿಫ್ಟ್ ಗಳನ್ನೆಲ್ಲಾ ಬಿಚ್ಚಿ ನೋಡುತ್ತಿದ್ದರು.  ಆಗಲೇ ಅಜ್ಜಿ ಕೊಟ್ಟ ಉಂಗುರವನ್ನು ನೋಡಿದಳು.  ಡಯಾನ Old model ಆಗಿ ಇದೆ.  ನನಗೆ ಇಷ್ಟವಿಲ್ಲ ಎಂದು ಇಟ್ಟು ಬಿಟ್ಟಳು.  ಮುಂದಿನ ವಾರ ಅವಳ friend ಮಲರ್ birthday ಬಂತು.  ಅವಳಿಗೆ ಅಜ್ಜಿ ಉಡುಗೊರೆಯಾಗಿ ಕೊಟ್ಟಿದ್ದ ಉಂಗುರವನ್ನು ಕೊಟ್ಟು ಬಿಟ್ಟಳು.  ಮಲರ್ ತಂದೆ ಒಂದು ಆಭರಣ ವ್ಯಾಪಾರಿ.  ಆ ವಜ್ರದ ಉಂಗುರವನ್ನು ನೋಡಿದಾಗ ನಿನ್ನ friend ಡಯಾನ ನಿನ್ನನ್ನು ಎಷ್ಟು ಪ್ರೀತಿಸುತ್ತಾಳೆ.  ಇಷ್ಟು ಬೆಲೆಬಾಳುವ ಉಂಗುರವನ್ನು ನಿನಗೆ ಉಡುಗೊರೆಯಾಗಿ ನೀಡಿದ್ದಾಳೆ ಎಂದು ಹೇಳಿದರು.  ತಕ್ಷಣ ಮಲರ್, ಡಯಾನಾಗೆ phone ಮಾಡಿ, ನೀನು ಕೊಟ್ಟ ಉಡುಗೊರೆಗೆ ತುಂಬಾ ಧನ್ಯವಾದಗಳು.  ಇಷ್ಟು ಅಮೂಲ್ಯವಾದದ್ದನ್ನು ನನಗೆ ಕೊಟ್ಟಿದ್ದೀಯಲ್ಲಾ ನಿನ್ನ ಪ್ರೀತಿಯನ್ನು ನೆನೆಸಿ ತುಂಬಾ ಸಂತೋಷಪಡುತ್ತೇನೆ. ಎಂದು  ಹೇಳಿದ ಕೂಡಲೇ ಡಯಾನ ಅಜ್ಜಿಯನ್ನು ನೆನಪಿಸಿಕೊಂಡಳು.  ತನ್ನ ಅಜ್ಜಿಯ ಪ್ರೀತಿಯನ್ನು ಮತ್ತು ಉಡುಗೊರೆಯನ್ನು ಕಳೆದುಕೊಂಡು ಬಿಟ್ಟೆನೇ ಎಂದು ದುಃಖಿಸಿದಳು.

ಏನು ಪುಟಾಣಿಗಳೇ, ಯೇಸು ಕ್ರಿಸ್ತನು ನಮಗಾಗಿ ತನ್ನ ಪ್ರಾಣವನ್ನು ಕೊಡುವಷ್ಟು ಮಟ್ಟಿಗೆ ನಮ್ಮ ಮೇಲೆ ಪ್ರೀತಿ ಇಟ್ಟಿದ್ದಾರೆ. ಡಯಾನಾ ತನ್ನ ಅಜ್ಜಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳದಂತೆಯೇ, ನಾವು ಕೂಡ ಅನೇಕ ಸಮಯಗಳಲ್ಲಿ ಯೇಸಪ್ಪನ  ಪ್ರೀತಿಯನ್ನು ಅರ್ಥಮಾಡಿಕೊಳ್ಳದೆ ಮರೆತುಹೋಗುತ್ತಿದ್ದೇವಲ್ವಾ?  ನೀವು ಅವರನ್ನು ಮರೆತರೂ, ಯೇಸಪ್ಪ ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ.  ಇದಕ್ಕಾಗಿ Jesus ಗೆ ಕೃತಜ್ಞತೆಯನ್ನು ಹೇಳುತ್ತಲೇ ಇರಬೇಕು.  Ok, ನಾ.
-    A.  ಬ್ಯೂಲ

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet matbet marsbahis imajbet perabet perabet giriş