By Village Missionary Movement
Saturday, 26-Feb-2022ಧೈನಂದಿನ ಧ್ಯಾನ(Kannada) – 26.02.2022 (God’s creation’s special)
ಪ್ರವಾದಿಯ ರಥ
"...ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ?..." - 1 ಸಮುವೇಲ 15:22
ಸಾಮಾನ್ಯವಾಗಿ ಊರು ಸುತ್ತುವುದು, ಅಲ್ಲಿ ಇಲ್ಲಿ ಓಡುತ್ತಾ ಜಾಲಿಯಾಗಿ ಇರುವುದು ನಮಗೆ ತುಂಬಾ ಇಷ್ಟ. ನಮ್ಮ ವಿಶೇಷತೆಯೇ backward kick. ಅಪರಿಚಿತರು ನಮ್ಮ ಬಳಿ ಬಂದರೆ ನಾವು ಅವರನ್ನು ಒದ್ದು ಓಡಿಹೋಗುತ್ತೇವೆ. ಆದರೆ ನಾವು ನಮ್ಮ ಮಾಲಿಕನಿಗೆ ನಂಬಿಕೆಯುಳ್ಳವರು. ಮುಖ್ಯವಾಗಿ ಭಾರ ಹೊರಲು ಮತ್ತು ಜನರು ನಮ್ಮ ಮೇಲೆ ಕುಳಿತು ಪ್ರಯಾಣಿಸಲು ನಾವು ಉಪಯೋಗವಾಗುತ್ತೇವೆ..
ಒಂದು ದಿನ ನನ್ನ ಜೀವನದಲ್ಲಿ ಆಶ್ಚರ್ಯದ ಜೊತೆಗೆ ಭಯಾನಕತೆಯನ್ನು ಉಂಟುಮಾಡುವ ಘಟನೆ ಸಂಭವಿಸಿತು. ನಾನು ದೇವರ ಮನುಷ್ಯನನ್ನು ಹೊತ್ತುಕೊಂಡು ಯೆಹೂದಕ್ಕೆ ಹೋಗುತ್ತಿದ್ದೆ. ಹೋಗುವ ದಾರಿಯಲ್ಲಿ ಒಂದು ಸಿಂಹವು ಎದುರಾಯಿತು. ನಡುಗಿ ಹೋದೆ. ಅದು ಆ ದೇವರ ಮನುಷ್ಯನನ್ನು ಕೊಂದಿತು ಮತ್ತು ನನ್ನನ್ನು ಮಾತ್ರ ಏನೂ ಮಾಡಲಿಲ್ಲ. ಬದಲಿಗೆ ನನ್ನ ಹತ್ತಿರ ನಿಂತಿತ್ತು. ನಂತರವೇ ನನಗೆ ಅರ್ಥವಾಯಿತು. ನಾನು ಹೊತ್ತುಕೊಂಡು ಬಂದ ದೇವರ ಮನುಷ್ಯನು ದೇವರು ಅವರಿಗೆ ನೀಡಿದ ಸೇವೆಯನ್ನು ಉತ್ತಮವಾಗಿ ಮಾಡಿ ಮುಗಿಸಿ ಹಿಂದಿರುಗುವಾಗ, ದೇವರ ಮಾತಿಗೆ ವಿಧೇಯನಾಗದೇ ಸುಳ್ಳು ಪ್ರವಾದನೆಯನ್ನು ನಂಬಿ ದೇವರ ವಾಕ್ಯಕ್ಕೆ ವಿಧೇಯನಾಗದೇ ಹೋದರು. ಇದೇ ಅವರ ಸಾವಿಗೆ ಕಾರಣ ಎಂದು ತಿಳಿದುಕೊಂಡೆ.
ನನ್ನ ಪ್ರೀತಿಯ ಸಹೋದರ, ಸಹೋದರಿಯೇ! ನಾನು ಪ್ರವಾದಿಯನ್ನು ಹೊತ್ತುಕೊಂಡು ಹೋದ ಕತ್ತೆಯೇ. ಅವರು ಕರ್ತನ ವಾಕ್ಯವನ್ನು ಅರಸನಾದ ಯಾರೊಬ್ಬಾಮನಿಗೆ ಹೇಳಿದ್ದು ನಿಜವೇ. ಆದರೆ ಅವರು ವಿಫಲವಾದದ್ದಕ್ಕೆ ಕಾರಣ ದೇವರ ವಾಕ್ಯಕ್ಕೆ ವಿಧೇಯರಾಗದೇ, ಸುಳ್ಳು ಮಾತುಗಳನ್ನು ನಂಬಿದ್ದೇ! ಇವರು ದೇವರ ವಾಕ್ಯವನ್ನು ಸರಿಯಾಗಿ ಹೇಳಿದರು, ಉತ್ತಮವಾಗಿ ಸೇವೆ ಮಾಡಿದರು. ಆದರೆ, ತಮ್ಮ ವೈಯಕ್ತಿಕ ಜೀವನದಲ್ಲಿ ತಪ್ಪಿಹೋದರು, ಅದನ್ನು ಅಭ್ಯಾಸ ಮಾಡಲು ವಿಫಲರಾದರು. ಪ್ರಿಯರೇ! ನೀವೂ ಕೂಡ ಚೆನ್ನಾಗಿ ಸೇವೆ ಮಾಡಬಹುದು. ಕರ್ತನ ವಾಕ್ಯವನ್ನು ಚೆನ್ನಾಗಿ ಬೋಧಿಸಬಹುದು. ಆದರೆ ನಿಮ್ಮ ಜೀವನದಲ್ಲಿ ಅದನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ. ನೀವು ಆ ವಿಷಯದಲ್ಲಿ ತಪ್ಪಿಹೋಗುವಾಗ ಬಹಳ ಪರಿತಪಿಸುವ ವ್ಯಕ್ತಿಯಾಗಿ ಬದಲಾಗಬಹುದು. ಹೆಚ್ಚು ಜಾಗರೂಕರಾಗಿರಿ. ಏನೋ ನಿಮಗೆ ಹೇಳಬೇಕೆಂದು ಅನಿಸಿತು, ಹೇಳಿಬಿಟ್ಟೇ.
- K. ಬೆಂಜಮಿನ್
ಪ್ರಾರ್ಥನಾ ಅಂಶ:
ತಮಿಳುನಾಡಿನಲ್ಲಿ ಆಲಯಗಳಿಲ್ಲದ ಸಾವಿರಾರು ಹಳ್ಳಿಗಳಲ್ಲಿ ಆಲಯಗಳನ್ನು ಕಟ್ಟುವುದಕ್ಕಾಗಿ ಮಾಡುವ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482