By Village Missionary Movement
Wednesday, 23-Feb-2022ಧೈನಂದಿನ ಧ್ಯಾನ(Kannada) – 23.02.2022 (God’s creation’s special)
ಸುಗಂಧ ವಾಸನೆ
"...ಸಹೋದರರು ಒಂದಾಗಿರುವದು... ಆರೋನನ ತಲೆಯ ಮೇಲೆ ಹಾಕಲ್ಪಟ್ಟು... ಅಲ್ಲಿಂದ ಅವನ ಅಂಗಿಗಳ ಕೊರಳಪಟ್ಟಿಯವರೆಗೂ ಹರಿದುಬರುವ ಶ್ರೇಷ್ಠತೈಲದಂತೆಯೂ...ಮಂಜಿನ ಹಾಗೆಯೂ ಅದೆ..." - ಕೀರ್ತನೆ 133
ಈ ಜಗತ್ತಿನಲ್ಲಿ, ಎಲ್ಲಾ ಹಿನ್ನೆಲೆಯ ದೇವರ ಮಕ್ಕಳು, ತಮ್ಮ ಹಣ, ಪದವಿ, ಶ್ರೇಣಿ ಮತ್ತು ಪ್ರಭಾವಗಳಂತಹ ಪರಿಪೂರ್ಣತೆಯನ್ನು ಅಥವಾ ಕೊರತೆಗಳನ್ನು ಹಿಂದೆ ತಳ್ಳಿ, ತಮ್ಮನ್ನು ತಾವು ತಗ್ಗಿಸಿಕೊಂಡು ಒಗ್ಗಟ್ಟಿನಿಂದ ಜೀವಿಸುವುದು ಆರೋನನ ತಲೆಯ ಮೇಲೆ ಹಾಕಲ್ಪಟ್ಟ ಅಭಿಷೇಕ ತೈಲವಾಗಿರುವ ನನಗೆ ಹೋಲಿಸಲಾಗಿದೆ. ಹೌದು, ನಾನೇ ಸುಗಂಧ ವಾಸನೆ ಬೀರುವ ಅಭಿಷೇಕ ತೈಲ ಮಾತನಾಡುತ್ತಿದ್ದೇನೆ. ನನ್ನನ್ನು ಬಹುಬೆಲೆಯುಳ್ಳ ಸುಗಂಧ ಉತ್ಪನ್ನಗಳಾದ ಬಿಳಿ, ಬ್ಲ್ಯಾಕ್‌ಬೆರಿ, ಪುದೀನ, ದಾಲ್ಚಿನ್ನಿ ಮತ್ತು ಆಲಿವ್ ಎಣ್ಣೆ ಹೀಗೆ ಶ್ರೀಮಂತರು ಬಳಸುವ ಈ ಅಪರೂಪದ ಪದಾರ್ಥಗಳಿಂದ ತಯಾರಿಸುತ್ತಾರೆ. ನನ್ನಿಂದ ಯೆಹೂದ್ಯರು ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟ ಯಾಜಕರನ್ನು ದೇಶವನ್ನು ಆಳುವ ರಾಜರನ್ನು ಅಭಿಷೇಕಿಸುತ್ತಾರೆ.
ದೇವರ ಮಕ್ಕಳು ಒಗ್ಗಟ್ಟಿನಿಂದ ಒಂದು ಸ್ಥಳದಲ್ಲಿ ಕೂಡಿಬಂದು ಆರಾಧಿಸುವಾಗ ಪವಿತ್ರಾತ್ಮನು ಅವರ ಮೇಲೆ ಇಳಿಯುವುದೇ "ಪವಿತ್ರಾತ್ಮನ ಅಭಿಷೇಕ" ಎಂದು ಸತ್ಯವೇದದಲ್ಲಿ ನೋಡುತ್ತೇವೆ. ನಾನೇಕೆ ಅಷ್ಟು ಪ್ರಸಿದ್ಧ ಮತ್ತು ಬೆಲೆಬಾಳುವವನಾಗಿದ್ದೇನೆ ಎಂದು ನಿಮಗೆ ಗೊತ್ತಾ? ಆ ಸುವಾಸನೆಯುಳ್ಳ ಉತ್ತಮ ಗುಣಮಟ್ಟದ ಎಲ್ಲಾ ಪದಾರ್ಥಗಳನ್ನು ಪುಡಿಮಾಡಿ, ದೇವರು ಹೇಳಿದಂತೆ ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿರುವುದರಿಂದಲೇ ಸುವಾಸನೆಯುಳ್ಳವನಾಗಿದ್ದೇನೆ.ಆದರೆ ಒಂದು ದುಃಖದ ಸುದ್ದಿ ಏನೆಂದರೆ, ನನ್ನ ಪರಿಮಳವನ್ನು ಹಾಳುಮಾಡಲು ಒಂದು
ಸತ್ತ ನೊಣವೇ ಸಾಕು.
ಇದನ್ನು ಓದುತ್ತಿರುವ ಆತ್ಮೀಯ ಸಹೋದರ ಸಹೋದರಿಯರೇ! ನಿಮ್ಮ ಕುಟುಂಬ, ಸಮುದಾಯ ಮತ್ತು ಸಭೆಯಲ್ಲಿ ನಿಮ್ಮ ಪಾತ್ರ ಹೇಗಿದೆ? ನಿಮ್ಮ ಸ್ವಾರ್ಥವನ್ನೆಲ್ಲಾ ಒಡೆದು ಹಾಕಿ ಎಲ್ಲರೊಂದಿಗೆ ಬೆರೆತು ಕ್ರಿಸ್ತನ ವಾಸನೆಯನ್ನು ಹೊರಪಡಿಸುವ ಸುಗಂಧ ಬೀರುವ ಅಭಿಷೇಕ ತೈಲವಾಗಿದ್ದೀರಾ? ಅಥವಾ ಪರಿಮಳವನ್ನು ಹಾಳುಮಾಡುವ ಸತ್ತ ನೊಣವಾಗಿದ್ದೀರಾ? ನಾವು ಗುಂಪಿನಲ್ಲಿದ್ದಾಗ ಇತರರೊಂದಿಗೆ ಬೆರೆಯುವುದು ಸ್ವಲ್ಪ ಕಷ್ಟವೇ. ಇದಕ್ಕೆ ಕಾರಣ ನಮ್ಮ ಶಾರೀರಿಕ ಸ್ವಭಾವವೇ! ವಿಶೇಷವಾಗಿ ಹೆಮ್ಮೆ. ಆದ್ದರಿಂದ ದೇವರ ಶಕ್ತಿಯಿಂದ ಪವಿತ್ರಾತ್ಮದ ಸಹಾಯದಿಂದ ನಾವು ವಾಕ್ಯವೆಂಬ ಸುತ್ತಿಗೆಯಿಂದ ಹೆಮ್ಮೆಯನ್ನು ಒಡೆದು ಹಾಕಿ ನಮ್ಮ ಸುತ್ತಲಿರುವವರ ಮಧ್ಯದಲ್ಲಿ ವಾಸನೆ ಬೀರುವ ಶ್ರೇಷ್ಠ ತೈಲವಾಗಿ ಮಾರ್ಪಡೋಣ.
- S. ಮನೋಜಕುಮಾರ್
ಪ್ರಾರ್ಥನಾ ಅಂಶ:
ಸರಣಿ ಪ್ರಾರ್ಥನೆಯ ಮೂಲಕ ಅನೇಕ ಹೊಸ ಪ್ರಾರ್ಥನಾ ಗುಂಪುಗಳನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482