Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.02.2022 (God’s creation’s special)
Share:

By Village Missionary Movement

Tuesday, 22-Feb-2022

ಧೈನಂದಿನ ಧ್ಯಾನ(Kannada) – 22.02.2022 (God’s creation’s special)

ಬಿಡುಗಡೆ

"ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ...ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ" - ಕೀರ್ತನೆ 146:7

ನನ್ನ ಪರಿಚಯವಿಲ್ಲದವರು ಈ ಲೋಕದಲ್ಲಿ ಯಾರೂ ಇರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇತರರನ್ನು ಬೈಯುವುದಕ್ಕೂ ಸರಿ, ಕಠಿಣವಾಗಿ ಭಾರ ಹೊರುವವರನ್ನು ಹೊಗಳಲೂ ಸರಿ ನನ್ನ ಹೆಸರನ್ನು ಉಪಯೋಗಿಸದೆ ಇರುವುದೇ ಇಲ್ಲ.  ನಾನು ಅಷ್ಟರ ಮಟ್ಟಿಗೆ ಫೇಮಸ್.  ಪರಿಶುದ್ಧ ಗ್ರಂಥದಲ್ಲಿ ನನ್ನ ಬಗ್ಗೆ ಏನು ಬರೆಯಲಾಗಿದೆ ಎಂಬುದನ್ನು ಓದಿ ನೋಡಿ.  ಹಲವು ವರ್ಷಗಳಿಂದ ಹಳ್ಳಿಯೊಂದರಲ್ಲಿದ್ದ ಮನೆಯಲ್ಲಿ ಕಟ್ಟಲ್ಪಟ್ಟಿದ್ದೆ.  ನಾನು ಕೂಡ ಸ್ವತಂತ್ರವಾಗಿ ಬದುಕಬೇಕೆಂದು ಆಸೆಪಟ್ಟೆ.  ಜನರಿಗೆ ಒಳ್ಳೇದನ್ನು ಮಾಡಬೇಕೆಂದು ಬಯಸಿದೆ.  ಆದರೆ ನನ್ನನ್ನು ಯಾರು ಬಿಡಿಸುತ್ತಾರೆ ಎಂದು ನಾನು ಹಾತೊರೆಯುತ್ತಿದ್ದೆ. 

ಅಂಥಾ ಸಮಯದಲ್ಲೇ ನಾನು ಯೇಸುವಿನ ಬಗ್ಗೆ ಕೇಳಲ್ಪಟ್ಟೆ. ಅವರು ಜನರಿಗೆ ಉಪಕಾರ ಮಾಡುವವರು, ಪಾಪದಿಂದಲೂ, ಶಾಪದಿಂದಲೂ, ರೋಗಗಳಿಂದಲೂ ಬಿಡಿಸುವವರೂ ಎಂದು.  ಜನರಿಗಾಗಿ ಮನಮರುಗಿ ಅದ್ಭುತ ಮಾಡುವವರು.  ಸತ್ತವರನ್ನು ಜೀವಂತವಾಗಿ ‌ಎಬ್ಬಿಸಿದವರು ಎಂದೆಲ್ಲಾ ಜನರು ಹೇಳುವುದನ್ನು ನಾನು ಕೇಳಲ್ಪಟ್ಟೆ.

ತಕ್ಷಣ ನಾನು, “ನನಗೆ  ಸಹಾಯ ಮಾಡುವುದಿಲ್ಲವೇ?  ನಾನು ನಿಮ್ಮನ್ನು ನೋಡಬಹುದಾ?"  ಎಂದು ಆಸೆಯಿಂದ ಮನಸಿನಲ್ಲಿ ಯೋಚಿಸಿದೆ.  ಆದರೆ ನಾನು ಅವರನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲವೇ.  ಏನಾಶ್ಚರ್ಯ!  ನಾನಿರುವ ಸ್ಥಳಕ್ಕೇ ಅವರು ನನ್ನನ್ನು ಹುಡುಕಿಕೊಂಡು ಬಂದರು. ಆಳುಗಳನ್ನು ಕಳುಹಿಸಿ,
“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ, ಅಲ್ಲಿ ಕಟ್ಟಿರುವ ಒಂದು ಕತ್ತೇಮರಿಯನ್ನು ಕಾಣುವಿರಿ, ಅದನ್ನು ಬಿಚ್ಚಿ ಹಿಡುಕೊಂಡು ಬನ್ನಿರಿ.
ಯಾರಾದರೂ ಕೇಳಿದರೆ  "ಈ ಕತ್ತೆ ದೇವರಿಗೆ ಬೇಕು" ಎಂದು ಹೇಳಿರಿ" ಎಂದರಂತೆ. ಇದನ್ನು ಕೇಳುತ್ತಿದ್ದಂತೆ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಮನುಷ್ಯನ ಭಾರವನ್ನು ಹೊತ್ತುಕೊಂಡೇ ನನ್ನ ಜೀವನವು ಕೊನೆಗೊಳ್ಳುತ್ತದೇನೋ ಅಂದುಕೊಳ್ಳುತ್ತಿದ್ದೆ. ಆದರೆ ಪ್ರಪಂಚದ ಪ್ರತಿಯೊಬ್ಬ ಮನುಷ್ಯನ ಪಾಪವನ್ನು ಹೊತ್ತು ತೀರಿಸುವ ಯೇಸು ಕ್ರಿಸ್ತನನ್ನು  ಹೊತ್ತುಕೊಳ್ಳಲು ನನ್ನನ್ನೂ ಆರಿಸಿಕೊಂಡರು ಎಂಬುದು  ಅಪಾರವಾದ ಸಂತೋಷವನ್ನುಂಟುಮಾಡಿತು.  ಇಂದು ಲೋಕದಲ್ಲಿ ನನ್ನನ್ನೂ ಒಂದು ಆಶೀರ್ವಾದವಾಗಿ  ಮಾರ್ಪಡಿಸಿದ್ದಾರೆ ಎಂಬ ಸುದ್ದಿ ಇಂದಿಗೂ ನನಗೆ ಅಚ್ಚರಿ ಮೂಡಿಸುತ್ತಿದೆ.
ವಿಳಾಸವೇ ಇಲ್ಲದೆ ಒಂದೆಡೆ ಕಟ್ಟಲ್ಪಟ್ಟಿದ್ದ ನನ್ನನ್ನು, ಇಂದು ಎಲ್ಲರೂ  ಮಾತನಾಡುವ ಮಟ್ಟಿಗೆ ಮಾರ್ಪಡಿಸಿದ್ದಾರೆ.

ದೇವರ ಮಕ್ಕಳೇ! ಮತ್ತೊಬ್ಬರಿಗೆ ಆಶೀರ್ವಾದಕರವಾಗಿ ಇರಬೇಕಾದ ನೀವು ಇಂದು ಯಾವುದೋ ಒಂದು ಕಾರ್ಯದಲ್ಲಿ ಕಟ್ಟಲ್ಪಟ್ಟಿರಬಹುದು. ಅದು ಪಾಪವಾಗಿರಲಿ, ಅನಾರೋಗ್ಯವಾಗಿರಲಿ, ಸಾಲವಾಗಿರಲಿ ಯಾವುದಾದರೂ ಸರಿ, ಭಯಪಡಬೇಡಿರಿ.  ನೀವು ಇರುವ ಸ್ಥಳದಿಂದಲೇ ಯೇಸುವೇ ನನಗೆ ಸಹಾಯ ಮಾಡಿ ಎಂದು ಹೇಳಿದರೇನೆ ಸಾಕು.  ಅವರು  ನಿಮ್ಮನ್ನು ಹುಡುಕಿ ಬಂದು ಬಿಡಿಸಿ, ಈ ಲೋಕಕ್ಕೆ ನಿಮ್ಮನ್ನು ಆಶೀರ್ವಾದಕರವಾಗಿ ಮಾರ್ಪಡಿಸಿ ಸಂತೋಷದ ಜೀವನವನ್ನು ನೀಡುತ್ತಾರೆ. 
-    S. P .ಚಂದನಪಾಂಡಿ

ಪ್ರಾರ್ಥನಾ ಅಂಶ:
ಪ್ರತಿ ಸೋಮವಾರ ಕರಪತ್ರದ ಸೇವೆಗಳ ಮೂಲಕ  ಭೇಟಿಯಾಗುವ ಆತ್ಮಾ ಮಕ್ಕಳು ದೇವರನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin