By Village Missionary Movement
Sunday, 20-Feb-2022ಧೈನಂದಿನ ಧ್ಯಾನ(Kannada) – 21.02.2022 (God’s creation’s special)
ಮಾಧ್ಯಮ
“ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು ಎಂದು ಹೇಳಿದನು." - ಯೋಹಾನ 4:14
ದೇಹದ ಶುದ್ಧೀಕರಣಕ್ಕೆ, ದೇಹದ ಆರೋಗ್ಯಕ್ಕೆ ನಾನು ತುಂಬಾ ಉಪಯೋಗವಾಗುತ್ತೇನೆ. ಒಂದು ದಿನಕ್ಕೆ 2 ರಿಂದ 3 ಲೀಟರ್ ನನ್ನನ್ನು ಕುಡಿದರೆ ಮಾತ್ರವೇ ದೇಹದಲ್ಲಿ ಹರಿಯುವ ರಕ್ತವನ್ನು ಶುದ್ಧೀಕರಿಸಬಹುದು ಮತ್ತು ತ್ಯಾಜ್ಯವನ್ನು ಹೊರಹಾಕಬಹುದು. ನೀವು ಒಂದು ದಿನ ಪೂರ್ತಿ ಆಹಾರ ತಿನ್ನದೇ ಇರಬಹುದು. ಆದರೆ ನೀರು ಆಗಿರುವ ನನ್ನನ್ನು ಕುಡಿಯದೇ ಇರಲು ಸಾಧ್ಯವೇ ಇಲ್ಲ. ನಾನು ಮಾತ್ರ ನಿಮಗೆ ಸಿಗಲಿಲ್ಲ ಅಂತ ಇಟ್ಟುಕೊಳ್ಳೋಣ, ನೀವು ಹಾಗೇ ಪರಿತಪಿಸುತ್ತೀರ ಅಲ್ವಾ? ನಾಲಿಗೆಯೆಲ್ಲಾ ಒಣಗಿ, ಶರೀರವೆಲ್ಲಾ ಸುಸ್ತಾಗಿ ಬಿಡುತ್ತದಲ್ವಾ? ಈ ಸಂದರ್ಭದಲ್ಲಿ ನಿಮ್ಮ ಬಾಯಿಂದ ಬರುವ ಮಾತು ಏನಾಗಿರಬಹುದು? ನನಗೆ ನೀರಡಿಕೆಯಾಗುತ್ತಿದೆ ಎಂದು ತಾನೇ! ಇದು ದೇಹದ ರಚನೆಯಾಗಿದೆ.
ಸತ್ಯವೇದದಲ್ಲಿ ಸಮಾರ್ಯದ ಸ್ತ್ರೀಯ ಬಗ್ಗೆ ಓದಿರುತ್ತೀರ. ಅವಳು ಬಾವಿಯ ಬಳಿಗೆ ಬರುತ್ತಾಳೆ. ಅದೇ ಸಮಯಕ್ಕೆ ಆ ಹಾದಿಯಲ್ಲಿ ಬಂದ ಯೇಸುವೂ ಅಲ್ಲಿಗೆ ಬಂದು ಕೂರುತ್ತಾರೆ. ಅವರಿಗೋ ಒಂದೇ ನೀರಡಿಕೆ. ನನಗೆ ನೀರಡಿಕೆಯಾಗುತ್ತಿದೆ ಕುಡಿಯುವದಕ್ಕೆ ಕೊಡು ಎಂದು ಆ ಸ್ತ್ರೀಯ ಬಳಿ ಕೇಳುತ್ತಾರೆ. ಯೇಸು ಯೆಹೂದ್ಯನು, ಸಾಮಾನ್ಯವಾಗಿ ಯೆಹೂದ್ಯರು ಸಮಾರ್ಯದವರೊಂದಿಗೆ ಸಹವಾಸ ಮಾಡುವುದಿಲ್ಲ. ಆದರೆ ಇವರು ಅದನ್ನೂ ಮೀರಿ ಅವಳ ಬಳಿ ಕುಡಿಯುವುದಕ್ಕೆ ಕೊಡು ಎಂದು ಹೇಳುತ್ತಿದ್ದಾರೆ. ಯೇಸುವಿನಲ್ಲಿ ಏನೋ ಒಂದು ಉದ್ದೇಶವಿದೆ ಎಂದು ನಾನು ಅರಿತುಕೊಂಡೆ. ಬಹುಶಃ ಅವರಿಗೆ ಆತ್ಮದಾಹವಾಗಿರಬಹುದಾ? ಈ ಬಾವಿಯ ನೀರು ಕುಡಿದರೆ ನಿನಗೆ ಪುನಃ ಬಾಯಾರಿಕೆಯಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ ಎಂದು ಹೇಳಿದರು. ನಾನು ಆಶ್ಚರ್ಯದಿಂದ ನೋಡಿದೆ. ಅವಳ ಬಳಿ ಒಂದು ವೈಯಕ್ತಿಕ ವ್ಯಕ್ತಿ ಸೇವೆ ಮಾಡಿ ಅವಳ ಮೂಲಕ ಒಂದು ಹಳ್ಳಿಯನ್ನೇ ಆತ್ಮ ಆದಾಯ ಮಾಡಿಬಿಟ್ಟರು. ಆ ಸಮಾರ್ಯದ ಸ್ತ್ರೀಯೊಳಗೆ ಒಂದು ದಾಹವನ್ನು ಉಂಟುಮಾಡಿದರು ನೋಡಿ. ಅವಳು ಬಾವಿಯಲ್ಲಿ ನೀರು ಇರುವುದನ್ನು ಮರೆತು ಬಿಟ್ಟು ಊರೊಳಕ್ಕೆ ಓಡಿಹೋಗಿ ಇದನ್ನು ತಿಳಿಸುತ್ತಾಳೆ ಎಂದು ನೋಡುತ್ತೇವೆ.
ಪ್ರೀತಿಯ ದೇವರ ಮಕ್ಕಳೇ! ನೀರಾಗಿರುವ ನಾನು ಹೇಳುವುದನ್ನು ಸ್ವಲ್ಪ ಕೇಳಿ. ಯೇಸುವಿನಲ್ಲಿದ್ದ ಆತ್ಮಗಳ ಕುರಿತಾದ ದಾಹ ಇಂದು ಪ್ರತಿಯೊಬ್ಬರಿಗೂ ಬರಲಿ. ಅವರು ಯಾವಾಗಲೂ ತಂದೆಯ ಇಚ್ಛೆಯನ್ನು ಪೂರೈಸುವವರಾಗಿದ್ದರು. ಈ ಸಮಾರ್ಯದ ಸ್ತ್ರೀ ತನ್ನ ಪರಿಸ್ಥಿತಿಯನ್ನು ಒಪ್ಪಿಕೊಂಡು ಮಾನಸಾಂತರ ಹೊಂದಿದಳು. ಅವಳೊಳಗೆ ಜೀವಜಲ ಸಿಕ್ಕಿದ ಕೂಡಲೇ ಅವಳು ತನ್ನ ಹಳ್ಳಿಯವರಿಗೆಲ್ಲ ಆಶೀರ್ವಾದವಾಗಿ ಮಾರ್ಪಟ್ಟಳು. ನಾನು ಸಾಧಾರಣ ನೀರಾಗಿ ಒಂದು ಮನುಷ್ಯನ ದೇಹದ ಬಾಯಾರಿಕೆಯನ್ನು ತಣಿಸುತ್ತೇನೆ ಅಷ್ಟೇ. ಆದರೆ ಪ್ರತಿಯೊಂದು ಮನುಷ್ಯನು ಜೀವಜಲವಾಗಿರುವ ಯೇಸುಕ್ರಿಸ್ತನನ್ನು ಕಂಡುಕೊಂಡು, ಅವರೊಳಗಿನ ದಾಹ ನೀಗಲು ನೀವು ಪ್ರಯಾಸಪಡಿರಿ ಎಂದು ಹೇಳುತ್ತಿದ್ದೇನೆ. ಯೇಸುವನ್ನು ಭೇಟಿಮಾಡಿದ ಸಮಾರ್ಯದ ಸ್ತ್ರೀಯ ಬದಲಾವಣೆಯನ್ನು ನೋಡಿದ ನಂತರ ಇದುವೇ ನನ್ನ ದಾಹವಾಗಿ ಮಾರ್ಪಟ್ಟಿತು. ಆದರೆ ಜೀವಜಲವಾಗಿರುವ ಯೆಸು ಮಾತ್ರವೇ, ನಿಮ್ಮ ಬಾಯಾರಿಕೆಯನ್ನು ತೀರಿಸಲು ಸಾಧ್ಯ ಹಲ್ಲೇಲೂಯ!
- Mrs. ಸರೋಜಾ ಮೋಹನದಾಸ್
ಪ್ರಾರ್ಥನಾ ಅಂಶ:
60 ಮಿಷನರಿಗಳನ್ನು ಬೆಂಬಲಿಸುವ ಮಿಷನರಿ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482